ಬೆಳ್ಳಿ,ಬಂಗಾರವಾಯಿತು, ಗ್ಯಾಸ್ ಆಯಿತು, ಈಗ ಬೇಳೆಗಳ ಸರದಿಯೇ?? 

ಇವತ್ತು ದಿನಸಿ ವಸ್ತುಗಳನ್ನು ಖರೀದಿಸಲು ಅಂಗಡಿಗೆ ಹೋಗಿದ್ದೆ. ಎಲ್ಲಾ ಬೇಳೆಗಳ ಬೆಲೆ ಮಾಮೂಲಿಗಿಂತ ಬಹಳ ಹೆಚ್ಚಾಗಿರುವುದು ಕಂಡು ಬಂದಿತು. ತೊಗರಿಬೇಳೆಯ ಬೆಲೆಯಂತೂ ಇನ್ನೂ ಹೆಚ್ಚು. ಇದ್ದಕ್ಕಿದ್ದಂತೆ ಬೇಳೆಗಳ ಬೆಲೆ ಮೇಲೇರಲು ಏನಾದರೂ ಕಾರಣವಿದೆಯೇ? ಅಥವಾ ವ್ಯಾಪಾರಿಗಳು ಕೃತಕ ಅಭಾವವನ್ನು ಸೃಷ್ಟಿಸುತ್ತಿದ್ದಾರೆಯೇ? ಗೊತ್ತಿಲ್ಲ.

ನಿಮ್ಮೂರಿನಲ್ಲೂ ಇದೇ ಪರಿಸ್ಥಿತಿ ಇದೆಯೇ? ಭಾರತದಲ್ಲಿಯೂ ಹೀಗೆ ಇದೆಯೇ? ಅಲ್ಲಿಯವರು ಯಾರಾದರೂ ಬೆಳಕು ಚೆಲ್ಲಿ. ನಾನಂತೂ ಯಾವ ಬೇಳೆಯನ್ನೂ ಖರೀದಿಸಲಿಲ್ಲ. ಮನೆಗೆ ಬಂದು ನೋಡಿದಾಗ ಹಿಂದೆ ತಂದಿದ್ದ ಒಂದೆರಡು ಪ್ಯಾಕೆಟ್‍ಗಳು ಕಾಣಿಸಿದವು. ಅದನ್ನೇ ಮಿತವಾಗಿ ಬಳಸುವುದೆಂದು ನಿರ್ಧರಿಸಿದೆ.  ಬೇಳೆಗಳ ಬೆಲೆ ಇಳಿಯುವವರೆಗೆ ನಮ್ಮನೆಯಲ್ಲಿ ಬಿಸಿಬೇಳೆಯೂ ಇಲ್ಲ. 🙂

14 thoughts on “ಬೇಳೆಗಳ ಬೆಲೆ ಗಗನಕ್ಕೆ, ಯಾಕೆ?”

  1. ತ್ರಿವೇಣಿಯವರೇ,

    ಬೇಳೆ ಬೆಲೆ ಗಗನಕ್ಕೇರಿರೋದು ನಿಜ..
    ಆದರೆ ಅದು ಇಲ್ಲಿ ಅಷ್ಟೇ ಅನಿಸುತ್ತೆ.

    ನಾನು ಕೇಳಿದ ಅಂತೆ-ಕಂತೆಗಳ ಪ್ರಕಾರ..
    ಈ ಸಲ ಭಾರತದಿಂದ ಬೇಳೆ ತರಬೇಕಿದ್ದ ಹಡಗು ತಡವಾಗಿ ಬರುತ್ತಂತೆ..ಅದಕ್ಕೆ ಸ್ಟಾಕ್ ಇಲ್ಲವಂತೆ !

    ಅದರೆ ನೀವು ಹೇಳಿದ ಹಾಗೆ ಕೃತಕ ಅಭಾವ ಸೃಷ್ಟಿಸಿರಬಹುದು..

    ನನಗೊಂದಿಷ್ಟು ಬೇಳೆ ತಗೆದಿಡಿ..ಬಂದು ನಾನು ತೆಗೆದುಕೊಂಡು ಹೋಗ್ತೇನೆ 🙂

  2. ಒಂದು ಎರಡು ಬಾಳೆಲೆ ಹರಡು
    ಮೂರು ನಾಲ್ಕು ಅನ್ನ ಹಾಕು
    ಏಳು ಎಂಟು ಪಲ್ಯಕೆ ದಂಟು
    ಒಂಬತ್ತು ಹತ್ತು ಎಲೆ ಮುದುರೆತ್ತು
    ಒಂದರಿಂದ ಹತ್ತು ಹೀಗಿತ್ತು
    ಊಟದ ಆಟವು ಮುಗಿದಿತ್ತು!

  3. ಸಕ್ಕತ್ SJ! 🙂

    ತ್ರಿ,
    ಬೇಳೆ ಬೆಲೆ ಹೆಚ್ಚಾಗಿರುವುದು ನಿಜ. ಆದರೆ ಇದರ ಬಗ್ಗೆ ಸುಮಾರು ದಿನದಿಂದಲೇ ಸುದ್ದಿಯಿತ್ತಲ್ಲಾ. ನೀವು ಅಂಗಡಿಗೆ ಹೋಗಿ ವಿಚಾರಿಸುವವರೆಗೂ ನಿಮಗೆ ತಿಳಿದಿರಲಿಲ್ಲವೇ?

    ನಮಗೆ ಯಾರೋ ಹೇಳಿದ ಪ್ರಕಾರ, “ಅಮೇರಿಕದ ಅಮದು ನೀತಿಯನ್ನು ಪರಿಷ್ಕರಿಸಲಾಯಿತಂತೆ. ಅದಕ್ಕಾಗಿ ಭಾರತದಿಂದ ಅಮದಾಗುವ ದಾಸ್ತಾನುಗಳು ಇನ್ನುಮೇಲೆ ಹೆಚ್ಚಾಗಿ ಸಿಗುವುದಿಲ್ಲವಂತೆ. ತೊಗರಿಬೇಳೆ ಮುಖ್ಯವಾಗಿ ಭಾರತದಿಂದ ಮಾತ್ರವೇ ಬರುತ್ತಿದ್ದರಿಂದ, ಅದರ ಬೆಲೆ ಇನ್ನೂ ಹೆಚ್ಚುತ್ತದೆಯಂತೆ”.

    ಈ ಅಂತೆಕಂತೆಗಳು ನಿಜವಾಗಿರದೆ, ನೀವು ಹೇಳಿದಂತೆ “ಕೃತಕ ಅಭಾವ” ಅಥವಾ ಶಿವ್ ಹೇಳಿದಂತೆ “ತಡವಾದ ಹಡಗು” ಕಾರಣಗಳಾಗಿದ್ದರೆ, ಎಲ್ಲರಿಗೂ ಒಳಿತು. 🙂

  4. ಜೋಷಿಯವರೇ, ಬೇಳೆ ಬೆಲೆ ಹೆಚ್ಚಾಯಿತೆಂದು ಊಟದ ಆಟದಿಂದ ಬೇಳೆ ಸಾರನ್ನೇ ಎಗರಿಸಿಬಿಟ್ಟಿದ್ದೀರಲ್ಲ! ಬೇಳೆಸಾರಿಲ್ಲದೆ ಬದುಕುವುದು ಹೇಗೆ? ಪುಳಿಚಾರುಗಳೆಲ್ಲ ಏನಾದರೂ ಬದಲಿ ವ್ಯವಸ್ಥೆ ಮಾಡಿಕೊಂಡಿದ್ದಾರೆಯೇ? 🙂

    ಮನ, ನೀವು ಹೇಳಿದ ಸುದ್ದಿಯನ್ನು ನಾನಂತೂ ಅಧಿಕೃತವಾಗಿ ಎಲ್ಲೂ ಓದಿಲ್ಲ/ಕೇಳಿಯೂ ಇಲ್ಲ. ಶಿವು ಹೇಳಿದ ಹಾಗೆ ತಡವಾದ ಹಡಗನ್ನು ಕಾಯುವುದೊಂದೇ ದಾರಿ ಈಗ 🙂

  5. ಶ್ರೀತ್ರಿ ಅವರೆ,
    ಭಾರತದಲ್ಲಿ ಬೆಲೆ ಗಗನಕ್ಕೆ ಏರುವುದು ಸಹಜ. ಆ ಬೆಲೆ ಎಲ್ಲಿದೆ ಅಂತ ಪ್ರಧಾನಿಗಳೇ ಆಗಸಕ್ಕೆ ಹೋಗಿ ಕೋಲಾಹಲ ಮಾಡಿದ ಸುದ್ದಿ ವಿಶ್ವಾದ್ಯಂತ ರದ್ದಿಯಾಗಿದೆ.

    ಹಾಗಿದ್ರೆ ಮನಮೋಹನ್ ಸಿಂಗ್-ಬುಷ್ ಅಣ್ವಸ್ತ್ರ ಒಪ್ಪಂದ ಮಾಡಿಕೊಂಡ ಹಾಗೆ ಬೆಲೆರಾಕೆಟ್ ಒಪ್ಪಂದವನ್ನೂ ಮಾಡಿಕೊಂಡಿದ್ದಾರಾ?

  6. ಪುಳಿಚಾರು ಮಾಡಲು ಬೇಳೆ ಬೇಕಾಗಿಲ್ಲ. ಹುಣಿಸೆಹಣ್ಣನ್ನು ಕಿವುಚಿ ರಸ ತೆಗೆದು ಅದನ್ನು ಕುದಿಸಿ ಉಪ್ಪು ಒಗ್ಗರಣೆ ಹಾಕಿದರೆ ಅದೇ ಪುಳಿಚಾರು.

    ಪುಳಿ = ಹುಣಿಸೆಹಣ್ಣು. ಚಾರು = essence or juice

    = = = =

    ಈಗಿನ್ನು ಬೇಳೆ ಉಪಯೋಗಿಸುವುದನ್ನು ಕಡಿಮೆಮಾಡುವುದರಿಂದ ‘ಇಲ್ಲಿ ನಿಮ್ಮ ಬೇಳೆ ಬೇಯೊದಿಲ್ಲ’ ಎಂದು ಪ್ರೊವರ್ಬಿಯಲಿ ಹೇಳಬಹುದು!

  7. ಬೊಗಳೆ ಪಂಡಿತರೇ. ನಿಮಗೂ, ತಡವಾದ ಹಡಗಿಗೂ ಏನು ಸಂಬಂಧ ಇಲ್ಲ ತಾನೇ? ನೀವು ಹೆಗಲು ಮುಟ್ಟಿ ನೋಡಿಕೊಳ್ತಾ ಇರೋದು ನೋಡಿ ಯಾಕೋ ಅನುಮಾನವಾಗ್ತಾ ಇದೆ. 🙂

  8. hmm..
    ಒಂದು ಎರಡು ಬಾಳೆಲೆ ಹರಡು
    ಮೂರು ನಾಲ್ಕು ಅನ್ನ ಹಾಕು
    ಐದು ಆರು ಬರೀ ಸಾರು
    ಏಳು ಎಂಟು ಪಲ್ಯಕೆ ದಂಟು
    ಒಂಬತ್ತು ಹತ್ತು ಎಲೆ ಮುದುರೆತ್ತು
    ಒಂದರಿಂದ ಹತ್ತು ಹೀಗಿತ್ತು
    ಊಟದ ಆಟವು ಮುಗಿದಿತ್ತು!

  9. ನೆನ್ನೆ (ಭಾನುವಾರ) ಇಂಡಿಯನ್ ಸ್ಟೋರ್ಸ್ ಇಂದ ತೊಗರಿಬೇಳೆ ೧ ಪ್ಯಾಕೆಟ್ ತಂದೆವು (೪ ಪೌಂಡ್ = ೬.೯೯ ಡಾಲರ್).
    ಬೇಳೆಗಳ ಬಗ್ಗೆ “ಅಧಿಕೃತವಾಗಿ” ತಿಳಿಯೋಣ ಎಂದು ಕೇಳೆದೆ ಅಂಗಡಿಯವರನ್ನು. 🙂
    ಅವರು ಹೇಳಿದ್ದು: ಭಾರತದ ರಫ್ತು ನೀತಿಯನ್ನು ಪರಿಷ್ಕರಿಸಲಾಗಿದೆ. ಭಾರತದಲ್ಲಿ ಈ ತೊಗರಿಬೇಳೆಯ ಕೊರತೆಯುಂಟಾಗುತ್ತಿದ್ದು, ಅಲ್ಲಿನ ಬೆಲೆ ಏರುತ್ತಿದೆ. ಅಲ್ಲಿನ ಜನತೆಗೆ ಸಾಕಾಗುವಷ್ಟು ಬೇಳೆಯ ದಾಸ್ತಾನು ಇಲ್ಲದಿರುವುದರಿಂದ, ರಫ್ತು ಮಾಡುವ ಯೋಜನೆ ಕೈಬಿಡಲಾಗಿದೆ.
    ಎಲ್ಲಿಯವರೆಗೂ? ಮಾರ್ಚ್ ೨೦೦೭
    —-
    ನಂತರ ಮನೆಗೆ ಬಂದು ಸ್ವಲ್ಪ ಗೂಗಲಿಸಿದಾಗ ಸಿಕ್ಕಿದ್ದು:
    http://oheraldo.in/node/15508
    http://instantkaapi.com/archives/2006/07/dhal_de_india.html

    ಮತ್ತೆ ಕೊನೆಯದಾಗಿ ಅಧಿಕೃತವಾಗಿ ದೊರೆ ಮಾಹಿತಿ:
    The Indian government has banned the export of dals and lentils until March 2007 to curb rising commodity prices.

    http://www.indiawest.com/view.php?subaction=showfull&id=1152818125&archive=&start_from=&ucat=11&

  10. ಧನ್ಯವಾದಗಳು ಮನ. ಬೇಳೆಗಳ ಬೆಲೆ ಇಳಿಯೋದಿರಲಿ, ಸಿಗೋದು ಕೂಡ ಕಷ್ಟ  ಅಂತ “ಮನ”ವರಿಕೆ ಮಾಡಿಸಿದ್ದೀರಿ. 🙁

    ಶಿವು , “ಹಡಗು” ಕಾಯುವುದನ್ನು ನಿಲ್ಲಿಸಿ ಬಿಡೋಣ, ಅದರಿಂದ ಏನೂ ಪ್ರಯೋಜನವಿಲ್ಲವಂತೆ. 🙂   ಜೋಶಿಯವರ ಭವಿಷ್ಯ ನಿಜವಾಯಿತು!

  11. 99 ಸೆಂಟ್‍ಗೆ 5lb ಸಿಗ್ತಾ ಇತ್ತಾ? ನಮಗೆ ಯಾವ ಕಾಲದಲ್ಲೂ ಸಿಕ್ಕಿಲ್ಲ ಆ ಬೆಲೆಗೆ 🙂 ಈಗಲೂ ನಿಮ್ಮೂರಲ್ಲಿ ನಮಗಿಂತ ಕಡಿಮೆಗೆ ಸಿಗಬಹುದೊ ಏನೋ, ವಿಚಾರಿಸಿ ಹೇಳು.

  12. ಇಲ್ವೆ ಇಲ್ಲೂ stock ಇಲ್ಲ ಅಂತಾನೇ 10 LB ಈಗ $18 ಆಗಿದೆ, ನಂಗೂ ಆಶ್ಚರ್ಯ ಆಯ್ತು ಆಮೇಲೆ ಗೊತ್ತಾಯ್ತು, ಭಾರತದಿಂದಾನೇ ಇಲ್ಲಿಗೆ ಬರ್ತಿಲ್ಲ ಅಂತ. ನಾನು CA ಗೆ ಬಂದ ಹೊಸದರಲ್ಲಿ ಮತ್ತು ಒಂದೂವರೆ ತಿಂಗಳು ಕೆಳಗೆ ಕೂಡ Sale ನಲ್ಲಿ ಬೇಳೇ ತಂದಿದ್ದೇನೆ.

Leave a Reply to ಮೀರಾಕೃಷ್ಣಮೂರ್ತಿ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.