ಬರದೆ ಹೋದೆ ನೀನು – ನಿಸಾರ್ ಅಹಮದ್

ಕವಿ – ನಿಸಾರ್ ಅಹಮದ್
ಸಂಗೀತ – ಸಿ.ಅಶ್ವಥ್
ಗಾಯಕರು – ಪುತ್ತೂರು ನರಸಿಂಹ ನಾಯಕ್, ಇಂದು ವಿಶ್ವನಾಥ್

ಹಾಡು ಕೇಳಿ

ಈ ದಿನಾಂತ ಸಮಯದಲಿ
ಉಪವನ ಏಕಾಂತದಲಿ
ಗೋಧೂಳಿ ಹೊನ್ನಿನಲಿ

ಬರದೆ ಹೋದೆ ನೀನು
ಮರೆತು ಹೋದೆ ನೀನು

ನಾ ಬಿಸುಸುಯ್ಯುವ ಹಂಬಲವೋ
ಶುಭ ಸಮ್ಮಿಲನದ ಕಾತರವೋ
ಬಾ ಇನಿಯ ಕರೆವೆ ನೊಂದು

ಬರದೆ ಹೋದೆ ನೀನು
ಮರೆತು ಹೋದೆ ನೀನು

ತನುಮನದಲಿ ನೀನೇ ನೆಲೆಸಿ
ಕಣಕಣವೂ ನಿನ್ನ ಕನಸಿ
ಕಣ್ಣು ಹನಿದು ಕರೆವೆ ನಿನ್ನ

ಬರದೆ ಹೋದೆ ನೀನು
ಮರೆತು ಹೋದೆ ನೀನು

ಇಳೆಗಿಳಿದಿದೆ ಇರುಳ ನೆರಳು
ದನಿ ಕಳೆದಿದೆ ಹಕ್ಕಿಗೊರಳು
ಶಶಿ ಮೆರೆಸಿರೆ ತೋರು ಬೆರಳು

ಬರದೆ ಹೋದೆ ನೀನು
ಮರೆತು ಹೋದೆ ನೀನು

ಹಗಲಿರುಳಿನ ಈ ನಿರೀಕ್ಷೆ
ಈ ಯಾಚನೆ ಪ್ರಣಯ ಭಿಕ್ಷೆ
ಮೊರೆಯಾಲಿಸಿ ಕಳೆಯೆ ಶಿಕ್ಷೆ

ಬರದೆ ಹೋದೆ ನೀನು
ಮರೆತು ಹೋದೆ ನೀನು

***

ತುಳಸಿ ತೋಟ! ನಿಮ್ಮ ನೋಟ

ತಾಂತ್ರಿಕ ಕಾರಣಗಳಿಂದಾಗಿ ತಾತ್ಕಾಲಿಕವಾಗಿ ಮುಚ್ಚಿದ್ದ ತುಳಸಿವನ ಮತ್ತೆ ತೆರೆದುಕೊಂಡಿದೆ. ನಿಮ್ಮೆಲ್ಲರ ಸ್ವಾಗತಕ್ಕೆ ಸಜ್ಜಾಗಿದೆ.

ಸತ್ಯ ಹರಿಶ್ಚಂದ್ರ – ನಮೋ ಭೂತನಾಥ

ಚಿತ್ರ – ಸತ್ಯ ಹರಿಶ್ಚಂದ್ರ (೧೯೬೫)
ಸಾಹಿತ್ಯ – ಹುಣುಸೂರು ಕೃಷ್ಣಮೂರ್ತಿ
ಸಂಗೀತ – ಪೆಂಡ್ಯಾಲ ನಾಗೇಶ್ವರರಾವ್
ಗಾಯಕರು – ಘಂಟಸಾಲ, ಪಿ.ಲೀಲಾ

ಹಾಡು ಕೇಳಿ, 

ಹಾಡು ನೋಡಿ

ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ
ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ
ಹೇ ಪಾರ್ವತೀ ಹೃದಯ ವಲ್ಲಭ ಚಂದ್ರಮೌಳೇ
ಭೂತಾಧಿಪ ಪ್ರಮಥನಾಥ ಗಿರೀಶ ಛಾಪ |

ನಮೋ ಭೂತನಾಥ ನಮೋ ದೇವ ದೇವಾ
ನಮೋ ಭಕ್ತಪಾಲ ನಮೋ ದಿವ್ಯ ತೇಜ

ಭವ ವೇದ ಸಾರ ಸದಾ ನಿರ್ವಿಕಾರ
ನಮೋ ಲೋಕಪಾಲ ನಮೋ ನಾದ ಲೋಲ
ನಮೋ ಪಾರ್ವತೀ ವಲ್ಲಭ ನೀಲಕಂಠ |

ಸದಾ ಸುಪ್ರಕಾಶ ಮಹಾ ಪಾಪ ನಾಶ
ಕಾಶಿ ವಿಶ್ವನಾಥ ದಯಾ ಸಿಂಧು ಧಾತ
ನಮೋ ಪಾರ್ವತೀ ವಲ್ಲಭ ನೀಲಕಂಠ |         

          ***