6 thoughts on “ಪೇಪರ್ ರಂಪ ನೀವೇನು ಮಾಡ್ತೀರಿ?”

 1. ಕಡತ ಯಜ್ಞ ಶುರು ಮಾಡೋದೇನೋ ಸುಲಭ. ಪೇಪರ್ ಶ್ರೆಡ್ಡರಿಗೆ ಊಟ ಕೊಡುವ ಕೆಲಸದ ಮೇಲೆ ಒಂದು ಜೋಕ್ ಇದೆ, ಹೇಳಲಾ?

  ಒಮ್ಮೆ ಒಂದು ಕಂಪೆನಿಯ ಯಜಮಾನ ಶ್ರೆಡ್ಡರ್ ಮುಂದೆ ಒಂದು ಪೇಪರ್ ಹಿಡಿದು ನಿಂತಿದ್ದ. ಅವನ ಸೆಕ್ರೆಟರಿ ಅಂದು ಬೇಗನೇ ಮನೆಗೆ ಹೋಗಿದ್ದಳು. ಒಬ್ಬಾನೊಬ್ಬ ಕೆಲಸಗಾರ ಅದೇ ದಾರಿಯಲ್ಲಿ ತನ್ನ ಮನೆ ಕಡೆ ಹೊರಟವ ಇವರನ್ನು ನೋಡಿ ಅತ್ತ ಬಂದ. ಈ ದೊಡ್ಡ ಮನುಷ್ಯ, “ಈ ಮೆಷೀನನ್ನು ಹೇಗೆ ಸ್ಟಾರ್ಟ್ ಮಾಡೋದೋ ಗೊತ್ತಿಲ್ಲ, ನಿನಗೇನಾದ್ರೂ ಗೊತ್ತಾ?” ಅಂದ. ಇವನೋ ತಾನೇ ಸ್ಮಾರ್ಟ್ ಅನ್ನುವಂತೆ, ಆ ಕಾಗದ ತೆಗೆದುಕೊಂಡು ಅದನ್ನು ಶ್ರೆಡ್ಡರಿನ ಮುಖಕ್ಕೆ ಹಿಡಿದ. ಕುರ್ರ್… ಅಂತ ಶಬ್ದ ಮಾಡುತ್ತಾ ಅದು ಆ ಪೇಪರನ್ನು ನುಂಗಿತು.
  ಈಗ ಆ ಒಡೆಯ, “ಗುಡ್. ತುಂಬಾ ಮುಖ್ಯ ಕಡತ ಇದು, ಇದರ ಒಂದೆರಡು ಪ್ರತಿ ಬೇಕು, ಮಾಡಿಕೊಡು.”

  ಈ ಬಡಪಾಯಿಯ ಮುಖ, ತಲೆ ಕೆಟ್ಟು ಹೋಯಿತು.

 2. ನೀವು ನಿಮ್ಮ ಪೇಪರುಗಳನ್ನ ಮ್ಯಾನೇಜ್ ಮಾಡ್ದೇ ಹೋದ್ರೆ ಅವುಗಳೇ ನಿಮ್ಮನ್ನು ಮ್ಯಾನೇಜ್ ಮಾಡತೊಡಗುತ್ವೆ, ಹುಷಾರಾಗಿರಿ. ಈ ಕೆಳಗಿನ ಸರಳ ಸೂತ್ರವನ್ನು ನಾನು ಪಾಲಿಸುತ್ತೇನೆ:
  – ಟ್ಯಾಕ್ಸ್‌ಗೆ ಸಂಬಂಧಿಸಿದ ಎಲ್ಲ ಕಾಗದ ಪತ್ರಗಳು
  – ಒಂದೆರಡು ತಿಂಗಳಿನ ಕ್ರೆಡಿಟ್ ಕಾರ್ಡ್, ಬ್ಯಾಂಕು, ಯುಟಿಲಿಟಿ ಬಿಲ್ಲು (ಫೊನು, ಗ್ಯಾಸ್, ಎಲೆಕ್ಟ್ರಿಸಿಟಿ, ಇತ್ಯಾದಿ)
  – ಇನ್ಸೂರೆನ್ಸ್ (ಹೆಲ್ತ್, ಲೈಫ್, ಕಾರು, ಇತ್ಯಾದಿ) ಗೆ ಸಂಬಂಧಿಸಿದ ಆಯಾ ವರ್ಷದ ಲೆಕ್ಕಚಾರ
  – ಮಾರ್ಟ್‌ಗೇಜ್‌ಗೆ ಸಂಬಂಧಿಸಿದ ಕಡತ, ಕಾಗದ ಪತ್ರಗಳು

  ನಿಮ್ಮ ಕಳೆದ ವರ್ಷಗಳ ವಸತಿ ವಿವರಗಳ ಬಗ್ಗೆ ಕಾಗದ ಪತ್ರಗಳನ್ನು ಇಟ್ಟುಕೊಂಡಿರುವುದು ಇಮಿಗ್ರೇಷನ್ ದೃಷ್ಟಿಯಿಂದ ಒಳ್ಳೆಯದೇ ವಿನಾ ಕ್ಯಾನ್ಸೆಲ್ ಆದ ಚೆಕ್ಕುಗಳನ್ನು ಯಾರೂ ಕೇಳರು – ಅದು ಸೂಕ್ತ ಮೊತ್ತದ ಚೆಕ್ಕಾಗಿದ್ದು ಯಾವುದಾದರೂ ಪರ್ಪಸ್ ಸರ್ವ್ ಮಾಡುವಂತಿದ್ದರೆ ಇದ್ದಿರಲಿ ಬಿಡಿ.

  ಕ್ರೆಡಿಟ್ ಕಾರ್ಡ್‌ನ ಬ್ಯಾಲೆನ್ಸ್ ಹೆಚ್ಚಿದ್ದರೆ, ಅಥವಾ ಕ್ರೆಡಿಟ್ ಕಾರ್ಡನ್ನು ರೆಂಟಲ್ ಕಾರ್, ಪ್ರಯಾಣದ ಟಿಕೇಟುಗಳನ್ನು ಖರೀದಿಸಲು ಬಳಸುವಂತಿದ್ದರೆ – ಅದರ ಅಗ್ರಿಮೆಂಟುಗಳನ್ನು ಜೋಪಾನವಾಗಿಟ್ಟುಕೊಳ್ಳಿ. ಟ್ಯಾಕ್ಸ್ ಡಿಡಕ್ಷನ್‌ಗೆ ಬಳಸಿದ ಯಾವುದೇ ದಾಖಲಾತಿ ಇದ್ದರೂ ಅದು ಟ್ಯಾಕ್ಸ್ ಪೇಪರುಗಳ ಜೊತೆ ಇರುವುದು ಒಳ್ಳೆಯದು.

  ಇವುಗಳನ್ನು ಹೊರತು ಪಡಿಸಿ ಮಿಕ್ಕೆಲ್ಲವನ್ನೂ ಒಂದೇ ರಿಸೈಕಲ್ ಮಾಡುತ್ತೇನೆ, ಇಲ್ಲಾ ಹರಿದು ಕಸದ ಬುಟ್ಟಿಗೆ ಬಿಸಾಡುತ್ತೇನೆ.
  ನಿಮಗೆ ಸಮಯದ ಕೊರತೆ ಇಲ್ಲದಿದ್ದರೆ ಬೇಕಾದ ಕಾಗದಗಳನ್ನೆಲ್ಲ ಸ್ಕ್ಯಾನ್ ಮಾಡಿ ಮಲ್ಟಿಪಲ್ ಕಾಪಿಗಳನ್ನು ವಿವಿಧ ಮಾಧ್ಯಮಗಳಲ್ಲಿ ಸ್ಟೋರ್ ಮಾಡುವುದು ಮತ್ತೊಂದು ಉಪಾಯ.

 3. ಕಾಳಣ್ಣ, ವಿವರವಾದ ಉತ್ತರಕ್ಕೆ ಧನ್ಯವಾದಗಳು. ಸ್ಕ್ಯಾನ್ ಮಾಡಿ ಮಲ್ಟಿಪಲ್ ಕಾಪಿಗಳನ್ನು ವಿವಿಧ ಮಾಧ್ಯಮಗಳಲ್ಲಿ ಸ್ಟೋರ್ ಮಾಡುವುದನ್ನು ಬಿಟ್ಟು ಉಳಿದೆಲ್ಲವನ್ನೂ ಈಗಾಗಲೇ ಪಾಲಿಸುತ್ತಿದ್ದೇನೆ.

  ಕ್ಯಾನ್ಸೆಲ್ ಆದ ಚೆಕ್ಕುಗಳನ್ನು ಇಟ್ಟುಕೊಳ್ಳೊದರಿಂದ ನನಗೆ ಉಪಯೋಗವೂ ಆಗಿದೆ. ೩-೪ ತಿಂಗಳ ಹಿಂದೆ ನಾನು WASTE SERVICESಗೆ $ 50.00 ಚೆಕ್ ಕೊಟ್ಟಿದ್ದೆ. ಅದು ಅವರಿಗೆ ಹೇಗೆ ಕಾಣಿಸಿತೋ ಏನೋ ಬ್ಯಾಂಕ್ ಅಕೌಂಟಿನಿಂದ 500.00$ ಡ್ರಾ ಆಗಿತ್ತು. ಹಳೆ ಚೆಕ್ ಇದ್ದಿದ್ದರಿಂದ ತೋರಿಸಿ ಉಳಿದ ಹಣ ವಾಪಸ್ ತೆಗೆದುಕೊಳ್ಳಲು ಸುಲಭವಾಯಿತು.

 4. ತ್ರಿವೇಣಿಯವರೆ,

  ನಾನಂತೂ ಈ ಪೇಪರ್ ರಾಕ್ಷಸರ ಪೀಡೆ ತಪ್ಪಿಸಿಕೊಳ್ಳಲು ಇತ್ತೀಚಿನಿಂದ paperless statement ತರಿಸಿಕೊಳ್ಳುತ್ತಿದ್ದೇನೆ. ಹಾಗಾಗಿ, ನನ್ನೆಲ್ಲಾ ವ್ಯವಹಾರಗಳು ಈಗ online! ಇದರ ಮೊದಲು, ಆರು ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ, “ಕಡತ ಸಂಹಾರ”-ದಿಂದಲೇ ಪೇಪರ್ ರಾಕ್ಷಸರನ್ನು (tax-ಗೆ ಸಂಬಂಧಪಟ್ಟವುಗಳನ್ನು ಹೊರತುಪಡಿಸಿ) ದಮನಿಸುತ್ತಿದ್ದೆ 🙂

 5. ಪ್ರದೀಪ್, ಏನಾದರೂ ಹೊಸ ಸಲಹೆ ಕೊಟ್ಟಿದೀರೇನೋ ಅಂದುಕೊಂಡ್ರೆ, ಏನೂ ಇಲ್ಲ! 🙂

 6. ತ್ರಿವೇಣಿಯವರೆ,
  ಭಾರತದಲ್ಲಿ ಇಂತಹ ಯಾವುದೆ ಸಮಸ್ಯೆ ನಮಗೆ ಎದುರಾಗುವದಿಲ್ಲ. ಇಲ್ಲಿ ಯಾವ ಕಡತವೂ ಸರಕಾರಿ ಕಚೇರಿಯಲ್ಲಿ ಸಿಗುವದಿಲ್ಲ. ಕಡತ ಯಜ್~ಜದಲ್ಲಿ ಎಲ್ಲವೂ ಭಸ್ಮವಾಗಿ ಬಿಟ್ಟಿರುತ್ತವೆ. ಅದಕ್ಕಾಗಿಯೇ ಭಾರತ ಭೂಮಿಗೆ ಪುಣ್ಯಭೂಮಿ ಎನ್ನುವದು.

Your email address will not be published. Required fields are marked *