45 thoughts on “ಕಥೆ ಬಗ್ಗೆ ಇಲ್ಲಿ ಮಾತಾಡೋಣ.”

 1. ಕಥೆಗಾರ ಜಗಳ, ಕಾಲೆಳತಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ..
  ಓಹೋ…ಕಥೆಗಾರರು ಮಾತ್ರ ಜಗಳ ಕಾಲೆಳೆಯುವುದು ಮಾಡಲು ಅವಕಾಶ
  ಕಲ್ಪಿಸಲಾಗಿದೆಯೇ…ಅಂದರೆ ಕಥೆಗಾರ್ತಿ ಯರು ಬಾಯಿಮುಚ್ಚಿಕೊಂಡು ಇರಬೇಕೆಂದಾಯಿತು!

  ಭಾಗವತ್ರೇ…ಸಜ್ಜನರು ಯಾರೆಂದು ಗೊತ್ತಾಯಿತೇ…?

  ತ್ರಿವೇಣೀ ನಿಮ್ಮಿಂದ ಇಂಥಾ ಧೋಕಾ ನಿರೀಕ್ಷಿಸಿರಲಿಲ್ಲ ನಾನು…
  ಹೋಗೀ ಹೋಗೀ ಭಾಗವತ್ರ ಪಾರ್ಟಿಗೆ ಹೀಗಾ ಬೆಂಬಲ ಕೊಡುವುದು ನೀವು…? ಹೇಳೀ ಏನು ಲಂಚ ಕೊಟ್ಟರೂ…?ಬಾಳೇ ಹಣ್ಣಾ…ಇಲ್ಲಾ ಕಡ್ಲೇಕಾಯೀನಾ …?

 2. ಮಾಲಾ,

  ಚಿಕ್ಕವರ ಮಾತು ಕೇಳ್ಬೇಕು ಅನ್ನೋದು ಇದ್ಕೇನೇ. ಅಷ್ಟು ನೀಟಾಗಿ ‘ಬೆಂಬಲ ಕೊಡಿ ಅಕ್ಕಾವ್ರೇ’ ಅಂದ್ರೆ ದೊಡ್ಡದಾಗಿ ಸ್ಟೈಲು ಹೊಡಿದ್ರಿ. ಇವಾಗ ಇವೆಲ್ಲಾ ಬೇಕಿತ್ತಾ? ಈಗ ಹೇಳಿ, ನೀವು ನನ್ನ ಪಾರ್ಟಿಗೆ ಬರ್ತೀರಾ? ನಿಮಗೂ ಕೋಟೇಶ್ವರ ಹಬ್ಬದಲ್ಲಿ ಅರ್ಧ ಸೇರು ಮಂಡಕ್ಕಿ ಗ್ಯಾರಂಟಿ ಃ-)

  ಸದ್ಯಕ್ಕೆ ನಮ್ಮ ಪಾರ್ಟಿಯಲ್ಲಿ ನಾನು ಮತ್ತು ಸುನಾಥ ಇಬ್ರೇ ಇರೋದು. ತ್ರಿವೇಣಿಯವರದ್ದು ‘ಹೊರಗಿನಿಂದ’ ಬೆಂಬಲ. ಜ್ಯೋತಿ ‘ನೈತಿಕ’ ಬೆಂಬಲ ನೀಡ್ತಿದ್ದಾರೆ. ನೀವು ಬಂದ್ರೆ ವಕ್ತಾರರ ಹುದ್ದೆ ಕೊಡ್ತೀವಿ. ಬರ್ತೀರಾ?ಃ-)

 3. ಅಯ್ಯೋ ಪುಟ್ತಮ್ಮಾ, ನೈತಿಕತೆ ಇದ್ದವರಿಗೆ ಮಾತ್ರಾ ನೈತಿಕ ಬೆಂಬಲ ಸಿಗೋಕೆ ಸಾಧ್ಯ ಕಣೋ… ಕೇಳೋ ಮೊದಲು ಚೆನ್ನಾಗಿ ಯೋಚನೆ ಮಾಡ್ಬೇಕು ಮರೀ…!

 4. ಮತ್ತೆ, ಅವತ್ತು ನೈತಿಕ ಬೆಂಬಲ ಕೊಡ್ತೀನಿ ಅಂದಿದ್ರಲ್ಲಾ……ತುಳಸಿಯಮ್ಮನ ಥರ ನೀವೂ ಸುಳ್ಳು ಹೇಳ್ತೀರಾ?

  ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ!!!!!

 5. ನಮ್ಮ ಕಥೆಯಲ್ಲಿ ಬರೀ ಕೇಡಿಗಳು ತುಂಬಿಕೊಂಡು ಸಜ್ಜನರೆಲ್ಲಾ ಕತೆ ಬರೆಯಲು ತುಂಬಾ ಭಯ ಪಟ್ಟು ಕೊಂಡು ಬಿಟ್ಟಿದ್ದರು ಆದ್ದ್ರಿಂದ ಒಂದು ಸೆಂಟಿ ಸೆಂಟಿ ಟ್ರ್ಯಾಕ್ ತಂದಿದ್ದೇನೆ . ಕಣ್ಣೀರು /ಕುಂಕುಮ/ ಕರವಸ್ತ್ರ ಪ್ರಿಯರು ಇನ್ನು ಮುಂದೆ ಆರಾಮವಾಗಿ ಕಥೆ ಬರೆಯಬಹುದು.

  ಸುನಾಥರೇ ನನ್ನ ನಿಮ್ಮಂತ ಧೈರ್ಯ ಶಾಲಿಗಳಿಗೆಂದು ಕೇಡಿ ಟ್ರ್ಯಾಕ್ ಸದ್ಯದಲ್ಲೇ ಮುಂದುವರೆಸುವೆ…

 6. ಅಮ್ಮುವಿನಮ್ಮ,
  ನಿಮ್ಮ ಮೇಲೆ ಭರವಸೆ ಇಟ್ಟುಕೊಂಡಿದ್ದೇನೆ; ಕೇಡಿಗಳ ಕೈಬಿಡೋದು ಬೇಡ.

 7. ಸುನಾಥರೇ, ಲಡಕಿ ಲಕಡಿಯಾಗಿದ್ದು ಯಾಕೇಂತ ಗೊತ್ತಾಗಲಿಲ್ಲ. ಒಸಾಮಾನಿಗೆ ಕನ್ನಡ ಸರಿಯಾಗಿ ಬರದಿದ್ರೂ ಹಿಂದಿ/ಉರ್ದು ಬರಬಹುದು ಅಲ್ವೇ?

 8. ತ್ರಿವೇಣಿಯವರೆ,
  ಬಹಳ ಸೂಕ್ಷ್ಮವಾಗಿ ಗುರುತಿಸಿದ್ದೀರಿ. ಓಸಾಮಾನಿಗೆ ಹಿಂದಿ /ಉರ್ದು ಕಲಿಸಿದವನೂ ಭರತಖಾನನೇ!

 9. ಸುನಾಥರೇ, ನೀವು ಬರೆದಿರುವ ಕಥೆಯ ಭಾಗ ಓದುತ್ತಿದ್ದರೆ, ಕೆಲವು ವರ್ಷಗಳ ಹಿಂದೆ “ಸುಧಾ”ದಲ್ಲಿ ಪ್ರಕಟವಾಗುತ್ತಿದ್ದ ವಿಜಯ ಸಾಸನೂರರ ಧಾರಾವಾಹಿಗಳ ನೆನಪಾಗುತ್ತಿದೆ. 🙂

 10. ತ್ರಿವೇಣಿವರೆ,
  ದೇವರಾಣೆಗೂ ನಾನು ಸಾಸನೂರರ ಕತೆಗಳ ನಕಲು ಮಾಡ್ತಾ ಇಲ್ಲ. ನೀವೆಲ್ಲರೂ ಬರೀತಾ ಇರೋ ಕತೆಗೆ, ಸಂಪೂರ್ಣವಾಗಿ ನನ್ನ ಕಲ್ಪನೆಯಿಂದಲೇ ಅಷ್ಟಿಷ್ಟು ಕೂಡಿಸ್ತಾ ಇದ್ದೀನಿ, ಅಷ್ಟೆ.
  (The resemblance to writings by any other writer is purely coincidental!)

 11. ಸುನಾಥರೇ, ನೀವು ನಕಲು ಮಾಡುತ್ತಿದ್ದೀರೆಂದು ನಾನೆಲ್ಲಿ ಹೇಳಿದೆ? ಸಾಸನೂರರ ಶೈಲಿಯಂತೆ ನಿಮ್ಮ ಕಥೆ ಕೂಡ ರೋಚಕವಾಗಿದ್ದು, ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತಿದೆ ಎಂದು ಮಾತ್ರ ನನ್ನ ಆರ್ಥ. ದಯವಿಟ್ಟು ತಪ್ಪು ತಿಳಿಯಬೇಡಿ.

 12. ಸುನಾಥರೇ, ಈ ಬಾರಿ ನಿಮ್ಮ ಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಆಶಾವಾದ ನಿಜವಾಗಲಿ. ಭಯೋತ್ಪಾದಕರ ಹೊಟ್ಟೆಯಲ್ಲಿರುವ ದ್ವೇಷದ ಕಿಚ್ಚು ಕಣ್ಣೀರು ಸುರಿದು ಆರಿಹೋಗಲಿ ಎಂದು ಹಾರೈಸುತ್ತೇನೆ.

 13. ಅಮ್ಮುವಿನಮ್ಮ ಎಲ್ಲಿ? ಪತ್ತೆ ಇಲ್ವಲ್ಲ…..ಅಮ್ಮುಗೆ ಹುಷಾರಿಲ್ವ ಅಥ್ವಾ ಭರತಖಾನ ಅಮ್ಮುವನ್ನೂ ಅಪಹರಿಸಿಬಿಟ್ಟಿದ್ದಾನಾ?

  ಸುನಾಥರೇ,
  ಕಥೆ ಸೂಪರಾಗಿ ಮೂಡಿ ಬರ್ತಿದೆ. ಇದನ್ನ ಮುಗಿಸಬೇಡಿ.

 14. ಭಾಗವತರೆ,
  ಧನ್ಯವಾದಗಳು.
  “ಪ್ರವಲ್ಲಿಕಾಳ ಸಾಹಸಗಳು” ಸದ್ಯಕ್ಕಂತೂ ಮುಗಿದಿದ್ದು, ಈಗ ಧಾರಿಣಿಯ ಸಾಹಸಗಳತ್ತ ನೋಟ ಹರಿಸಬೇಕಾಗಿದೆ. ಆದರೆ, ಅಮ್ಮುವಿನಮ್ಮ , ಜ್ಯೊತಿ, ಮಾಲಾ, ಮೀರಾ, ತ್ರಿವೇಣಿ ಎಲ್ಲರೂ ಸದ್ಯಕ್ಕೆ ಹಬ್ಬದಲ್ಲಿ busy ಆಗಿದ್ದಂತೆ ತೋರುತ್ತದೆ. ಸುಶ್ರುತ, ಶಿವ, ಶ್ರೀ ಇವರ ಪತ್ತೆಯೂ ಇಲ್ಲ. ಭೂತ ಅಂತೂ ಭೂತವೇ! ಆದುದರಿಂದ ನೀವೇ ಈಗ ನೀಲೀಕೇರಿಯ ಮಾಣಿಯನ್ನು stage ಮೇಲೆ ತರುವದು ಚಂದದ ಕೆಲಸವಾದೀತು.

 15. ಸುನಾಥರೇ, ಧಾರಿಣಿಯ ಸಾಹಸಗಳನ್ನು ಬರೆಯಲು ಅಮ್ಮುನಮ್ಮನೇ ಸರಿ. ಹಬ್ಬ ಮುಗಿಯಿತಲ್ಲ, ಇನ್ನೇನು ಬರಬಹುದು.

 16. Lost in space and time!

  ದೇಶ-ಕಾಲದಲ್ಲಿ ಏಕೆ ಕಾಣೆಯಾದಿರಿ, ಜ್ಯೋತಿ?
  ತುಳಸೀವನವು ಒಣಗೀತೆಂದು ಆಗುತ್ತಿರುವದು ಭೀತಿ!
  ನೈತಿಕ ಬೆಂಬಲ ನೀಡಲು ಹೆದರಿ ಕಿಲಾಡಿ ತಮ್ಮನಿಗೆ
  ಓಡಿದಿರಾ? ಛೇ, ಬಲೆ ಬೀಸೋಣ ವಾನರ ಪುಂಗವಗೆ!

 17. ಭಾಗವತ ಜನಾಗ್ರಹದ ಮೂಲಕ “ಪ್ರವಲ್ಲಿಕಾಳ ಸಾಹಸಗಳನ್ನು” ವಿಸ್ತರಿಸಿ ಬರೆದಿದ್ದಕ್ಕೆ ಕ್ಷಮೆ ಇರಲಿ. ಇನ್ನು ನಿಮ್ಮ ದಾರಿಗೆ ಅಡ್ಡ ಬರುವದಿಲ್ಲ.

 18. ಸುನಾಥರೇ, ಪುಟ್ತಮ್ಮನಿಗೆ ಹೆದರೋವಷ್ಟು ಪುಂಡನಲ್ಲ ಇವ (ಎಷ್ಟಾದರೂ ತಮ್ಮನಲ್ಲವೆ!?). ಕಳೆದುಹೋಗಿದ್ದರ ಕಾರಣ ಇವನಲ್ಲ; ಅವ, ನಲ್ಲ! ವಿವರಣೆಗೆ ನನ್ನ ಬ್ಲಾಗ್ ನೋಡಿ, ಪ್ಲೀಸ್…

 19. ನಿಮ್ಮ blog ನೋಡಿದೆ. ನಿಮ್ಮ ಅನುಭವ ಓದಿ ಮೈ ಜುಮ್ ಎಂದಿತು.ನೀವು ಯಾಕೆ lost in space and time ಎಂದಿದ್ದಿರಿ ಈಗ ಅರ್ಥವಾಯಿತು.

 20. ತ್ರಿವೇಣೀ
  ನಿಮ್ಮದೇ ಹಳೆ ಕಥೆಯೊಂದರಿಂದ ಎರಡು ಪಾತ್ರಗಳನ್ನು ಕದ್ದಿದ್ದೇನೆ
  ಯಾವ ಕಥೆ ಗೊತ್ತಾಯಿತೇ…?
  ಕ್ರೈಮ್ ಸಾಕಾಯಿತು ತ್ರಿಕೋಣ ಪ್ರೇಮ ಮುಂದುವರೆಯಲಿ ಅಲ್ಲವೇ…?

 21. ಕಾಣದಂತೆ ಮಾಯವಾದರು ತ್ರಿವೇಣಿ…
  ಕಾಣದಂತೆ ಮಾಯವಾದರು …

  ಕಥೆಯನ್ನು ಅರ್ಧಕ್ಕೆ ಬಿಟ್ಟು
  ಹಾಡುಗಳನ್ನು ನಿಲ್ಲಿಸಿಬಿಟ್ಟು
  ಕೈಯ್ಯ ಕೊಟ್ಟು ಓಡಿ ಹೋದರೂ….

 22. ಮಾಲಾ, ಸ್ವಲ್ಪ ಕಾಲ ಕಾಣೆಯಾಗಿದ್ದೆ ಅಷ್ಟೆ, ಖಂಡಿತ ಕೈ ಕೊಟ್ಟು ಮಾಯವಾಗುವುದಿಲ್ಲ. 🙂 ಹೌದು, ಹಲವಾರು ಹಾಡುಗಳು ಬಾಕಿ ಇವೆ. ಬರುತ್ತವೆ ಒಂದೊಂದಾಗಿ…

 23. “ನಿಮ್ಮದೇ ಹಳೆ ಕಥೆಯೊಂದರಿಂದ ಎರಡು ಪಾತ್ರಗಳನ್ನು ಕದ್ದಿದ್ದೇನೆ
  ಯಾವ ಕಥೆ ಗೊತ್ತಾಯಿತೇ…?”

  – ಮರೀಚಿಕೆ ಅಲ್ಲ…ಈ ಬದುಕು!

  ಇರಬಹುದೇ?

 24. ಸೂರ್ಯ ಕಣ್ಮರೆಯಾಗಿದ್ದ; ಚಂದ್ರ ಬಂದೇ ಇರಲಿಲ್ಲ. ಚುಕ್ಕಿಗಳಿಗೆ ದೃಷ್ಟಿ ಮಂದ; ಗಾಳಿಗೆ ಉಸಿರಿರಲಿಲ್ಲ. ಭುಮಿಗೆ ದನಿಯಿರಲಿಲ್ಲ.


  ತುಂಬಾ ಹೃದ್ಯವಾದ ನಿರೂಪಣೆ

 25. ” ಸ್ಟಾರ್ ಟಿ.ವಿ.ಯಲ್ಲಿ ಬರುತ್ತಿರುವ ಏಕತಾ ಕಪೂರಳ ಹಿಂದಿ ಧಾರಾವಾಹಿಗಳಂತೆ ಕೊನೆಯಿಲ್ಲದೆ ಓಡುವನೇ?”

  — ಭರತಖಾನನ ಶತೃವಿಗೂ ಆ ಪಾಡು ಬೇಡ. 🙂

  ಕತೆ ಮುಕ್ತಾಯದ ಹಂತ ತಲುಪಿದೆಯೇ? ಮುಗಿದಿದೆಯೇ?

 26. “ಕತೆ ಮುಕ್ತಾಯದ ಹಂತ ತಲುಪಿದೆಯೇ, ಮುಗಿದಿದೆಯೇ?”
  *
  *
  ನನಗೂ ಗೊತ್ತಿಲ್ಲ. ಈ ಕಾಲ್ಚೆಂಡಾಟದಲ್ಲಿ ಆಟಗಾರ ಹಾಗು ರೆಫರಿ ಎರಡೂ ತಾವೇ ಇರುವಿರಿ. ರೆಫರಿ ಅಲ್ಲವೇ ಸೀಟಿ ಊದಿ ಆಟ ಮುಗಿಸುವದು?

 27. “ನನಗೂ ಗೊತ್ತಿಲ್ಲ. ಈ ಕಾಲ್ಚೆಂಡಾಟದಲ್ಲಿ ಆಟಗಾರ ಹಾಗು ರೆಫರಿ ಎರಡೂ ತಾವೇ ಇರುವಿರಿ. ರೆಫರಿ ಅಲ್ಲವೇ ಸೀಟಿ ಊದಿ ಆಟ ಮುಗಿಸುವದು?”

  – ಮುಗಿಸಬಹುದು ಅನಿಸುತ್ತಿದೆ. ಅಮ್ಮುನಿನಮ್ಮ, ಜ್ಯೋತಿ, ನೀವೇನಂತೀರಿ?

 28. ಶಾಂತಲಾ, ತುಳಸಿವನಕ್ಕೆ ಸ್ವಾಗತ.

  ಕವಿತಾಳ ಪಲಾಯನಕ್ಕೆ ಸಕಾರಣ ಒದಗಿಸಿದ್ದೀರಿ. 🙂 ನಿಮ್ಮಂತಹ ನುರಿತ ಚಾಲಕಿ ಸಿಕ್ಕ ಮೇಲೆ ಕಥೆಯ ಬಂಡಿ ಸುಖ ತೀರ ಸೇರುವುದರಲ್ಲಿ ಅನುಮಾನವಿಲ್ಲ.

  ನಿಮ್ಮೂರು…. ಯಾವೂರು? ಅಂತ ಕೇಳಿದ್ರಿ ಅಲ್ವಾ? ನಮ್ಮೂರಲ್ಲಿ ಕಾಡೂ ಇದೆ, ಊರೂ ಇದೆ. ನೀವೇ ಗೆಸ್ ಮಾಡಿ. 🙂

 29. “ಶಾಂತಲಾ, ತುಳಸಿವನಕ್ಕೆ ಸ್ವಾಗತ. ನಿಮ್ಮಂತಹ ನುರಿತ ಚಾಲಕಿ ಸಿಕ್ಕ ಮೇಲೆ ಕಥೆಯ ಬಂಡಿ ಸುಖ ತೀರ ಸೇರುವುದರಲ್ಲಿ ಅನುಮಾನವಿಲ್ಲ.”

  ತಮ್ಮ ಸ್ವಾಗತಕ್ಕೆ ನಾ ಆಭಾರಿ.
  ನಾನು ನುರಿತ ಚಾಲಕಿಯಲ್ಲ, ನಿಮ್ಮೆಲ್ಲರೊಡನೆ ಪಯಣಿಸುವಾಸೆಯಿಂದ ಬಂದ ಪಯಣಿಗಳಷ್ಟೆ. 🙂

  ತಾರೆಗಳಿಗೆ ಸಾಟಿಯೇ ಮಿಂಚುಹುಳು?

  ನಿಮ್ಮೂರ ಹೆಸರಲ್ಲಿ ಕಾಡು ಇದೆಯಾ ಅಥವಾ ನಿಮ್ಮೂರಲ್ಲಿ ಕಾಡು ಇದೆಯಾ ಮೇಡಂ? ತಿಳಿಸಿದರೆ ಹುಡುಕಲು ಪ್ರಯತ್ನಪಡಬಹುದು. ಹೇಗೂ ನಾ ಸೋತಪಕ್ಷ ನೀವೇ ಹೇಳಬಹುದೆಂಬ ನಿರೀಕ್ಷೆ! 🙂

 30. – ಮುಗಿಸಬಹುದು ಅನಿಸುತ್ತಿದೆ. ಅಮ್ಮುನಿನಮ್ಮ, ಜ್ಯೋತಿ, ನೀವೇನಂತೀರಿ?
  —— ಕಥೆಗೆ ‘ಅನಪೇಕ್ಷಿತ’ ತಿರುವು ಕೊಡಬಲ್ಲ ಭಾಗ್ವತ್ರನ್ನ ಕೇಳಲ್ವಾ?????ಃ-((

  “ತಾರೆಗಳಿಗೆ ಸಾಟಿಯೇ ಮಿಂಚುಹುಳು? ”
  ತಾರೆಗಳು ಯಾರು? ಆ ಗುಂಪಲ್ಲಿ ನಾನೂ ಇದ್ದೀನಾ? ಃ-)

  “ನಮ್ಮೂರಲ್ಲಿ ಕಾಡೂ ಇದೆ, ಊರೂ ಇದೆ. ನೀವೇ ಗೆಸ್ ಮಾಡಿ.”
  ನಿಮ್ಮೂರು ಊರುಕಾಡು ಅಂತನಾ? ಊರುಕೇರಿ ಅಂತ ಇದೆ ಉತ್ತರಕನ್ನಡದಲ್ಲಿ. ಅಥ್ವಾ ‘ಕಾಡೂರು’? ಕಾಡುವ ಊರು ಅಂತಾನಾ? ಇದೊಳ್ಳೇ ಒಗಟಾಯ್ತಲ್ಲ.. ಹೇಳಿ ಮಾರಾಯ್ರೇ….

  ಅಂದಹಾಗೆ ಕಡೂರು ಅಂತಾನೂ ಒಂದೂರಿದೆ. ಕೇಳಿದೀರಾ? ಅಲ್ಲಿನ ‘ತಾರಾ’ಲೇಖಕಿಯೊಬ್ಬರ ಪರಿಚಯ ನನಗೆ ಇದೆ ಃ-)

 31. “ತಾರೆಗಳು ಯಾರು? ಆ ಗುಂಪಲ್ಲಿ ನಾನೂ ಇದ್ದೀನಾ? ಃ-)”
  -ಅಕ್ಕ ಮಿಂಚುಹುಳು ಆದ್ಮೇಲೇ, ತಮ್ಮ ತಾರೆಗಳ ಗುಂಪಲ್ಲಿ ಸೇರೋದು ಸರೀನಾ?

  “ನಿಮ್ಮೂರು ಊರುಕಾಡು ಅಂತನಾ? ಊರುಕೇರಿ ಅಂತ ಇದೆ ಉತ್ತರಕನ್ನಡದಲ್ಲಿ. ಅಥ್ವಾ ‘ಕಾಡೂರು’? ಕಾಡುವ ಊರು ಅಂತಾನಾ? ಇದೊಳ್ಳೇ ಒಗಟಾಯ್ತಲ್ಲ.. ಹೇಳಿ ಮಾರಾಯ್ರೇ….”
  -ನಾನೇನು ಈವಾಗಿಂದ ದಡ್ಡಿ ಅಂದ್ಕೊಂಡ್ರಾ? ಇಷ್ಟೊಂದು ಜನ ಸುಳಿವು ಕೊಟ್ಮೇಲೇ ನಂಗೇನು ಗೋತ್ತಾಗಲ್ವಾ? “ಕಡೂರು!” 🙂

 32. ತುಳಸಿಯಮ್ಮ,

  ಬೇಂದ್ರೆಯಜ್ಜನ ಕವಿತೆ ಹಾಕ್ತೇನೆ ಅಂತ ಹೇಳಿ ಎಷ್ಟು ದಿನ ಆಯ್ತು? ನಿಮಗಿಂತ ಕುಮಾರಣ್ಣನೇ ಬೆಟರ್ರು ಃ-)

 33. ಭಾಗವತರೆ, ತಾರಾ ಅನ್ನುವ ಲೇಖಕಿಯ ಪರಿಚಯ ನಿಮಗಿದೆ ಎಂದು ತಿಳಿದು ತುಂಬಾ ಸಂತೋಷವಾಯಿತು.

  —— ಕಥೆಗೆ ‘ಅನಪೇಕ್ಷಿತ’ ತಿರುವು ಕೊಡಬಲ್ಲ ಭಾಗ್ವತ್ರನ್ನ ಕೇಳಲ್ವಾ?

  – ಕಥೆಗೆ ಮತ್ತೆ ಯಾವ ಹೊಸ ತಿರುವುಗಳು ಬೇಕಾಗಿಲ್ಲ. ಹಾಗಾಗಿ ಕೇಳಲಿಲ್ಲ, ಈಗ ಕಥೆಗೊಂದು ಹೆಸರು ಸೂಚಿಸಲು ಕೇಳುತ್ತಿದ್ದೇನೆ.

  ತುಳಸಿವನದಲ್ಲಿ ಇನ್ನು ಕಥೆ ಇಲ್ಲ. ಬರೀ ಹಾಡು ಮತ್ತು ಮಾತು!

 34. ಶಾಂತಲಾ, ನೀವು ಹೆಣೆದ ಕಥೆ ಇಲ್ಲಿದೆ.

  ಕೊನೆಗೂ ನನ್ನ ಊರು ಊಹಿಸಿದ್ದೀರಿ. ಪ್ರಶ್ನೆ ಪತ್ರಿಕೆಯ ಜೊತೆ ಉತ್ತರ ಪತ್ರಿಕೆಯನ್ನೂ ಒದಗಿಸಿದ ಮೇಲೆ ಉತ್ತರಿಸಿದ ನೀವೇ ಜಾಣೆ 🙂

 35. “ಕೊನೆಗೂ ನನ್ನ ಊರು ಊಹಿಸಿದ್ದೀರಿ. ಪ್ರಶ್ನೆ ಪತ್ರಿಕೆಯ ಜೊತೆ ಉತ್ತರ ಪತ್ರಿಕೆಯನ್ನೂ ಒದಗಿಸಿದ ಮೇಲೆ ಉತ್ತರಿಸಿದ ನೀವೇ ಜಾಣೆ”
  ಓ….ಜಾಣೆ ಅಂತ ದಡ್ರೀಗೂ ಹೇಳ್ಬಹುದು ಹಾಗಾದ್ರೇ!
  ದಡ್ರಿಗೆ ಹಾಗನ್ಬಾರ್ದೆನೊ ಅಂದ್ಕೊಂಬುಟ್ಟಿದ್ದೆ! 🙂

 36. ಪ್ರಶ್ನೆಪತ್ರಿಕೆ ಜೊತೆಗೇ ಉತ್ತರಪತ್ರಿಕೆ ಇದೆ ಅನ್ನೋದು ನನಗೆ ಗೊತ್ತೇ ಆಗಿರಲಿಲ್ಲ,ಶಾಂತಲಾ ಅವರೆ. ನೀವು ದಡ್ಡಿ ಅಂತ ಅನ್ಕೊಂಡರೆ ನಾನು ಶತದಡ್ಡ. ತ್ರಿವೇಣಿಯವರ ಊರು ‘ಕಾಡೂರು’ ಇರಬಹುದು ಅಂತ ಅಂದ್ಕೊಂಡಿದ್ದೆ.

 37. “ನಿಮಗಿಂತ ಕುಮಾರಣ್ಣನೇ ಬೆಟರ್ರು”
  *
  ಜೋ-ಕುಮಾರಸ್ವಾಮಿ ಒಂದು ಸಲ ಮಾತ್ರ ವಚನಭ್ರಷ್ಟ ಆದ ಅಂತಲೆ,ಭಾಗವತರೆ?

 38. ಕತೆಗೊಂದು ಹೆಸರು……
  **
  “ಸಿಂದಬಾದನ ಸಾಹಸಗಳು-ಭಾಗ-೨” ಆಗಬಹುದೆ?

 39. ಸರಿಯಾಗಿ ಊಹಿಸಿದಿರಿ ಸುನಾಥರೇ. ಃ-))

  “ಮುಗಿಯದ ಕಥೆ” -ಆಗಬಹುದೇ? ಃ-)

 40. ತುಳಸಿವನದ ಸಹೃದಯ ಸದಸ್ಯರೆ,
  ಕೊನೆಯಿಲ್ಲದೆ ಓಡುತ್ತಿದ್ದ ಕತೆಗೆ ಒಂದು ಮಂಗಳ ಸೂಚಿಸಿ ಬರೆದಿದ್ದೇನೆ. ಒಪ್ಪಿಗೆಯಾಗದಿದ್ದರೆ, ಬದಲಾಯಿಸಿ ಬಿಡಿ.

Your email address will not be published. Required fields are marked *