ರಚನೆ : ಜಗನ್ನಾಥ ದಾಸರು
ಗಾಯಕ : ವಿದ್ಯಾಭೂಷಣ

ಹಾಡು ಕೇಳಿ

ಅಪಮೃತ್ಯು ಪರಿಹರಿಸೊ ಅನಿಲ ದೇವ
ಕೃಪಣ ವತ್ಸಲನೆ ಕಾವರ ಕಾಣೆ ಜಗದೊಳಗೆ ||ಪಲ್ಲವಿ||

ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು
ಎನಗಿಲ್ಲ ಆವಾವ ಜನುಮದಲ್ಲಿ
ಅನುದಿನವು ಎಮ್ಮನುದಾಸೀನ ಮಾಡುವುದು
ಅನುಚಿತವು ನಿನಗೆ ಸಜ್ಜನ ಶಿಖಾಮಣಿಯೆ ||೧||

ಜ್ಞಾನಾಯು ರೂಪಕನು ನೀನಹುದೊ
ವಾಣಿ ಪಂಚಾನನಾದ್ಯಮರರಿಗೆ ಪ್ರಾಣದೇವ
ದೀನವತ್ಸಲನೆಂದು ನಾನಿನ್ನ ಮೊರೆಹೊಕ್ಕೆ
ದಾನವಾರಣ್ಯ ತ್ರಿಶಾನು(?) ಸರ್ವದ ಎಮ್ಮ ||೨||

ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು
ಸಾಧಾರಣವಲ್ಲ ಸಾಧುಪ್ರಿಯನೆ
ವೇದವಾದೋದಿತ ಜಗನ್ನಾಥ ವಿಠಲನ
ಪಾದಭಜನೆಯನಿತ್ತು ಮೋದಕೊಡು ಸತತ ||೩||

**********************************

2 thoughts on “ಅಪಮೃತ್ಯು ಪರಿಹರಿಸೊ ಅನಿಲ ದೇವ”

  1. ಮಾನ್ಯರೇ, ರಾಮಕೃಷ್ಣರು ಮನೆಗೆ ಬಂದರು – ಈ ಹಾಡಿನ ಸಾಹಿತ್ಯವಿದ್ದರೆ ದಯವಿಟ್ಟು ಕೊಡಿ. (ಹಾಡಿನ ಲಿಂಕ್ ಸಹಿತ) ಮಗಳಿಗೆ ಶಾಲೆಯಲ್ಲಿ ಹಾಡಿಸಲು ಬೇಕಾಗಿದೆ. ಅವಸರವೇನಿಲ್ಲ.

    ಧನ್ಯವಾದಗಳು.

  2. ನಾನು ಕೇಳಿದ್ದ ಹಾಡು ಹಾಕಿದ್ದಕ್ಕೆ ತುಂಬ ಧನ್ಯವಾದಗಳು ನಿಮಗೇ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.