ರಚನೆ – ಪ್ರಾಣೇಶ ವಿಠಲ
ರಾಗ – ಆನಂದ ಭೈರವಿ, ತಾಳ – ಏಕ
ಗಾಯಕ – ಪುತ್ತೂರು ನರಸಿಂಹ ನಾಯಕ್

ಹಾಡು ಕೇಳಿ

ಪವನ ಸಂಭೂತ ಒಲಿದು ತವಕದಿ ಕಾಯಬೇಕು
ಇವನಾರೋ ಎಂದು ಉದಾಸೀನ ಮಾಡದಲೆನ್ನ ||ಪಲ್ಲವಿ||

ಕಪಿಪ ಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು
ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು ||೧||

ಹರಿವೇಷಧರನೆ ನರಹರಿ ಭಕುತರ ಪೊರೆವುದಕ್ಕೆ
ಹರಿಯಂತೆ ಒದಗುವೆಯೊ ನೀನು ಹರಿದಾಸನು ನಾನು ||೨||

ಅಜಸುತನ ಶಾಪದಿಂದ ಅಜಗರನಾದವನ ಪಾದ|
ರಜದಿ ಪುನೀತನ ಮಾಡಿದನೇ, ಅಜ ಪದವಿಗೆ ಬಹನೇ ||೩||

ಕಲಿಯುಗದಿ ಕವಿಗಳೆಲ್ಲ ಕಲಿಬಾಧೆಯಿಂದ ಬಳಲೆ|
ಕಲಿವೈರಿಮುನಿಯೆಂದೆನಿಸಿದಿ, ಕಲಿಮಲವ ಕಳೆದಿ ||೪||

ಗುರು ಪ್ರಾಣೇಶ ವಿಠಲ ಹರಿ ಪರನೆಂಬೊಜ್ಞಾನ
ಗುರುಮಧ್ವರಾಯ ಕರುಣಿಸೊ ದುರ್ಮತಿಗಳ ಬಿಡಿಸೊ ||೫||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.