ರಚನೆ – ಹೆಳವನಕಟ್ಟೆ ಗಿರಿಯಮ್ಮ

ಪುತ್ತೂರು ನರಸಿಂಹ ನಾಯಕ್

ಮಾಧವ ಗುಡಿ

ಜಿ. ವಿ. ಅತ್ರಿ

ಹೊನ್ನು ತಾ ಗುಬ್ಬಿ ಹೊನ್ನು ತಾ
ನಮ್ಮ ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ ||ಪ||

ಆಗಮವನು ತಂದು ಜಗಕಿತ್ತ ಕೈಗೆ
ಸಾಗರವ ಮಥಿಸಿ ಸುಧೆ ತಂದ ಕೈಗೆ
ತೂಗಿ ಮಾತಾಡುವ ಸ್ಥೂಲಕಾಯನ ಕೈಗೆ
ಸಾಗರ ಪತಿ ನಮ್ಮ ನರಸಿಂಹನ ಕೈಗೆ ||೧||

ಬಲಿಯ ದಾನವ ಬೇಡಿ ಕೊಂದಂಥ ಕೈಗೆ
ಛಲದಿಂದ ಕ್ಷತ್ರಿಯರ ಅಳಿದಂಥ ಕೈಗೆ
ಗೆಲವಿಂದ ವಿಭೀಷಣಗೆ ಅಭಯವಿತ್ತ ಕೈಗೆ
ಬಲುಬೆಟ್ಟ ಬೆರಳಲ್ಲಿ ಎತ್ತಿದ ಕೈಗೆ ||೨||

ಪತಿವ್ರತೆಯರ ವ್ರತ ಅಳಿದಂಥ ಕೈಗೆ
ಹಿತವಾಜಿಯನೇರಿ ಮರ್ದಿಸಿದಂಥ ಕೈಗೆ
ಸತಿಶಿರೋಮಣಿ ಲಕ್ಷೀಕಾಂತನ ಕೈಗೆ
ಚತುರ ಹೆಳವನಕಟ್ಟೆ ರಂಗನ ಕೈಗೆ ||೩||

ಹಿನ್ನಲೆ :- ಕೊಮಾರನ ಹಳ್ಳಿಯ ಲಕ್ಷ್ಮೀ ರಂಗನಾಥ ಸ್ವಾಮಿಯ ರಥೋತ್ಸವದ ಸಂದರ್ಭದಲ್ಲಿ ಉತ್ಸವ ಮೂರ್ತಿಯ ಆಭರಣವೊಂದನ್ನು ಗುಬ್ಬಚ್ಚಿಯೊಂದು ಹಾರಿಸಿಕೊಂಡು ಹೋದಾಗ ಹೊನ್ನು ತಾ ಗುಬ್ಬಿ ಹೊನ್ನು ತಾ ಎಂದು ಭಕ್ತಿಯಿಂದ ಗಿರಿಯಮ್ಮ ಹಾಡಿದ್ದಕ್ಕೆ ಗುಬ್ಬಿ ಹಾರವನ್ನು ಮರಳಿ ಅದೇ ಸ್ಥಾನಕ್ಕೆ ತಂದು ಇಟ್ಟಿತಂತೆ. (ಮಾಹಿತಿ : ವೆಬ್ ದುನಿಯ)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.