ಚಿತ್ರ : ಒಂದೇ ಕುಲ ಒಂದೇ ದೈವ(೧೯೭೧)
ರಚನೆ : ಹುಣಸೂರು ಕೃಷ್ಣಮೂರ್ತಿ
ಸಂಗೀತ ನಿರ್ದಶನ : ರಾಜನ್ ನಾಗೇಂದ್ರ
ಗಾಯಕಿ : ಬಿ.ಕೆ.ಸುಮಿತ್ರ

ಗಾಂಧಿ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ
ವಂದಿಸಿ ಮೊದಲು ನಿನ್ನಡಿಗಿಂದು ತಿಳಿಸುವೆ ಇಲ್ಲಿಯ ರೀತಿ

ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಬೇರೆ ಅನ್ನುವ ಲಟಾಪಟಿ
ತುಂಬಿದೆ ತಾತ ಬಂದು ನೋಡು ನಿನ್ನ ಮಕ್ಕಳ ಪೈಪೋಟಿ
ತಾಯಿ ಒಬ್ಬಳೆ ಎಂಬುದ ಮರೆತು ಪ್ರಾಂತ್ಯಪ್ರಾಂತ್ಯಕೂ ಜಗಳವಿಲ್ಲಿ
ಭಾಷೆ ಭಾಷೆಗೂ ತಕರಾರಿಲ್ಲಿ ಸರಹದ್ದೆನ್ನುವ ಹೆಸರಲ್ಲಿ ||೧||

ಲಾಠಿ ಏಟು ಗುಂಡಿನ ಏಟು ಬಿದ್ದರು ನೀನು ಜಗ್ಗಲಿಲ್ಲ
ವಂದೇ ಮಾತರಂ! ವಂದೇ ಮಾತರಂ! ಅನ್ನೊ ಘೋಷ
ಬದುಕಿರೊ ತನಕ ಬಿಡಲಿಲ್ಲ
ಅಂದು ನೀನು ಮಾಡಿದ ತಾಗ್ಯ ಇಂದಿನ ಪ್ರಜೆಗಳು ತಿಳಿದಿಲ್ಲ
ಒಂದಿಗೆ ಬಾಳುವ ಬುದ್ಧಿ ಅಂತೂ ಇನ್ನೂ ಇವರಿಗೆ ಹುಟ್ಟಿಲ್ಲ||೨||

ಭಾರತದೇಶದ ವಾಸಿಗಳೆಲ್ಲ ಒಂದೆ ಕುಲವೆಂದ್‍ಹೇಳಿದೆ
ಹೇಳಿದಂತೆ ಆಚರಿಸಿ ಸ್ವಾತಂತ್ರ್ಯ ತಂದು ನೀಡಿದೆ
ನೀನು ಮತ್ತು ಚಾಚಾ ನೆಹರು ಕಟ್ಟಿದ ಈ ರಾಮರಾಜ್ಯ
ಗಾಳಿಗೆ ಎಗರೊ ಕಾಲ ಬಂತು ಗೊತ್ತಿದೆ ಬುದ್ಧಿ ಹೇಳೂ ಬಾರೋ ತಾತ||೩||

ಯುಟ್ರೂಬ ಲಿಂಕ್ ಇಲ್ಲಿದೆ :-

One thought on “ಗಾಂಧಿ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ”

  1. ಗಾಂಧೀಜಯಂತಿಯಂದು ಸಮಂಜಸವಾದ, ಸುಂದರವಾದ ಗೀತೆಯನ್ನು ಕೇಳಿಸಿದ್ದೀರಿ. ಧನ್ಯವಾದಗಳು.

Leave a Reply to Sunaath Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.