ಹಸಿರು ಗಾಜಿನ ಬಳೆಗಳೇ, ಸ್ತ್ರೀ ಕುಲದ ಶುಭ ಸ್ವರಗಳೇ

ಚಿತ್ರ : ಅವನೇ ನನ್ನ ಗಂಡ
ಸಾಹಿತ್ಯ, ಸಂಗೀತ : ಹಂಸಲೇಖ
ಗಾಯಕಿ : ಲತಾ ಹಂಸಲೇಖ

ಹಸಿರು ಗಾಜಿನ ಬಳೆಗಳೇ
ಸ್ತ್ರೀ ಕುಲದ ಶುಭ ಸ್ವರಗಳೇ
ಈ ಕೈಗಳಿಗೆ ಶೃಂಗಾರವೇ
ನೀವ್ ಘಲ್ಲೆಂದರೆ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮಾ ||ಪಲ್ಲವಿ||

ತೊಟ್ಟಿಲಿನ ಕೂಸಿಗೆ ದೃಷ್ಟಿ ಇದು ತಾನೇ?
ಮೊಡವೆಯ ವಯಸಿಗೆ ಒಡವೆ ಇದು ತಾನೇ?

ಕಾಮನ ಬಿಲ್ಲಿಗೂ ಇದರ ಸಾಟಿ ನಿಲ್ಲದು
ಋಷಿಗಳ ಸಂಯಮ ಇದರ ಮುಂದೆ ನಿಲ್ಲದು

ಸ್ತ್ರೀ ಕುಲದ ಸೌಭಾಗ್ಯವೇ ನಿಮ್ಮ ರೂಪವು
ಓ ಓ ಓ ಓ ಓ… ಲಾ ಲಾ ಲಾ ||-1-||

ಋತುಗಳ ಜೊತೆಯಲಿ ಬದುಕು ನಡೆವಾಗ
ಬದುಕಿನ ನೆರಳಲಿ ಹೆಣ್ಣು ನಡೆವಾಗ

ಪ್ರೇಮದ ಪ್ರಣಯದ ನಡುವೆ ನಿನ್ನ ನಗುವಿದೆ
ಸಾವಿನ ನೋವಿನ ನಡುವೆ ನಿನ್ನ ಅಳುವಿದೆ

ಸ್ತ್ರೀ ಕುಲದ ಸೌಭಾಗ್ಯವೇ ನಿಮ್ಮ ರೂಪವು
ಓ ಓ ಓ ಓ ಓ… ಲಾ ಲಾ ಲಾ ||-2-||