ರಚನೆ : ಶೇಷ ವಿಠಲ

ಬಾರೋ ಗುರು ರಾಘವೇ೦ದ್ರ ಬಾರಯ್ಯ ಬಾ ಬಾ
ಬಾರೋ ಗುರು ರಾಘವೇಂದ್ರ ||ಪ||
ಹಿಂದುಮು೦ದಿಲ್ಲೆನಗೆ ನೀ ಗತಿ
ಎ೦ದು ನ೦ಬಿದೆ ನಿನ್ನ ಪಾದವ
ಬ೦ಧನವ ಬಿಡಿಸೆನ್ನ ಕರಪಿಡಿ
ನ೦ದಕ೦ದ ಮುಕು೦ದ ಬ೦ಧೊ |ಅ.ಪ|

ಸೇವಕನೆಲೊ ನಾನು ಧಾವಿಸಿ ಬ೦ದೆನು
ಸೇವೆ ನೀಡೆಲೊ ನೀನು
ಸೇವಕನ ಸೇವೆಯನು ಸೇವಿಸಿ
ಸೇವ್ಯ ಸೇವಕ ಭಾವವೀಯುತ
ಠಾವು ಗಾಣಿಸಿ ಪೊರೆಯೊ ಧರೆಯೊಳು
ಪಾವನಾತ್ಮಕ ಕಾವ ಕರುಣಿ ||೧||

ಕರೆದರೇ ಬರುವಿಯೆ೦ದು ಸಾರುವುದು ಡ೦ಗುರ
ತ್ಟರಿತದಿ ಒದಗೋ ಬ೦ದು
ಜರಿಯಬೇಡವೊ ಬರಿದೆ ನಿನ್ನಯ
ವಿರಹ ತಾಳದೆ ಮನದಿ ಕೊರಗುವೆ
ಹರಿಯ ಸ್ಮರಣೆಯ ನಿರುತದಲಿ ಎನಗ್ಹ-
ರುಷದಲಿ ನೀ ನಿರುತ ಕೊಡುತಲಿ ||೨||

ನರಹರಿ ಪ್ರಿಯನೆ ಬಾ ಗುರುಶೇಷವಿಠಲನ
ಕರುಣ ಪಾತ್ರನೆ ಬೇಗ ಬಾ
ಗುರುವರನೆ ಪರಿಪೋಷಿಸೆನ್ನನು
ಮರೆಯದಲೆ ತವಶರಣ ಕೋಟಿಯಲಿರಿಸಿ
ಚರಣಾ೦ಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ ||೩||

=============================

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.