ಪೋಗಬೇಡವೊ ನಿಗಮನುತ – Pogabedavo Nigamanuta madhurege

ಪೋಗಬೇಡವೊ ನಿಗಮನುತ ಮಧುರೆಗೆ ಪೋಗಬೇಡವೊ ಹರಿಯೆ||ಪಲ್ಲವಿ|| ಪೋಗುವಿ ನೀ ಪುನಾರಾಗಮ ಎಂದಿಗೆ ಹೇಗೆ ತಾಳುವೆವೊ ನಾಗಮರ್ದನ ಕೃಷ್ಣ||ಅನು|| ಬಾಲತನದಿ ಬಹುಲೀಲೆಗಳಿಂದಲಿ ಗೋಪಾಲಕರೊಡಗೂಡಿಬಾಳಪ್ರೇಮದಿ ನಮ್ಮಾಲಯವನು ಪೊಕ್ಕು ಪಾಲು ಮೊಸರು ಬೇಡಿಶೀಲಮೂರುತಿ ನಿಮ್ಮೊಲುಮೆಗೆ ಸಿಲುಕಿದಬಾಲೆಯರ ಸ್ಮರಣಂಬಿಗೆ ಗುರಿಮಾಡಿ ||-೧-|| ಹುಟ್ಟಿದ್ದು ಮಧುರೆ ತಂದಿಟ್ಟದ್ದು ಗೋಕುಲ ಪಟ್ಟದರಸ ಎನಿಸಿಬೆಟ್ಟಿಲಿ ಬೆಟ್ಟವ ಎತ್ತಿ ಪೊರೆದು ಬಂದ ಕಷ್ಟವ ಪರಿಹರಿಸಿಕೃಷ್ಣಮೂರುತಿ ಪರಮೇಷ್ಟಿಗಳರಸನೆನಮ್ಮಿಷ್ಟ ದೈವವೆ Read More

ಅಕ್ಕಾ, ಅಕ್ರೂರ ಬಂದನಂತೆ!

ರಚನೆ : ಪುರಂದರದಾಸರು ವಿದ್ಯಾಭೂಷಣ ಅಕ್ಕಾ, ನಂದಗೋಪನ ಅರಮನೆಯ ಒಳಗೊಬ್ಬ ಅಕ್ರೂರ ಬಂದನಂತೆ ಹೊಕ್ಕು ಬಳಸುವಳಲ್ಲ, ಹುಸಿಯನಾಡುವಳಲ್ಲ ಇಕ್ಕೋ, ಬಾಗಿಲ ಮುಂದೆ ಈಗ ರಥವ ಕಂಡೆ | ಮಥುರಾ ಪಟ್ಟಣವಂತೆ, ಮಾವ ಕಂಸನಂತೆ ನದಿಯ ದಾಟಲುಬೇಕಂತೆ, ಬದಲು ಮಾತಿಲ್ಲವಂತೆ, ಏನೆಂಬೆ ಏಣಾಕ್ಷಿ ಉದಯದಿ ಪಯಣವಂತೆ, ಹೇ ಕಾಂತೆ | ಅಲ್ಲೇ ಹುಟ್ಟಿದನಂತೆ, ಅರಸಿನಳಿಯನಂತೆ, ಇಲ್ಲಿಗೆ ಬಂದನಂತೆ, Read More

ರಥವೋಗದ ಮುನ್ನ ಗೋಕುಲಕೆ

ನಿನ್ನೆ ಏನನ್ನೊ ಹುಡುಕುತ್ತಿದ್ದಾಗ ನನಗೊಂದು ರತ್ನವೇ ಸಿಕ್ಕಿತು. “ರಥವೋಗದ ಮುನ್ನ” ದಾಸ ಸಾಹಿತ್ಯದಲ್ಲಿ ಅಪರೂಪವೆನಿಸುವ ಕೃತಿ. ಶ್ರೀದವಿಠಲರಿಂದ ರಚಿತವಾಗಿರುವ ಈ ಕೀರ್ತನೆಯನ್ನು ಹಿಂದೆಯೂ ಕೇಳಿದ್ದೆ. ಆದರೆ ಈ ಬಾರಿ ರಾಗದ ಹಂಗಿಲ್ಲದೆ, ಹಾಗೆಯೇ ಓದಿಕೊಂಡಾಗ ನವಿರಾದ ಭಾವನೆಗಳಿಂದ ತುಂಬಿರುವ ಭಾವಗೀತೆಯನ್ನು ಸ್ಪರ್ಶಿಸಿದಂತಾಯಿತು. ಈ ಕೀರ್ತನೆಯಲ್ಲಿ, ಕೃಷ್ಣನನ್ನು ಕರೆತರಲು ಹೊರಟಿರುವ ಅಕ್ರೂರನ ಮನೋಲಹರಿ ಭಕ್ತಿರಸದೊಂದಿಗೆ ಹದವಾಗಿ ಬೆರೆತು Read More