ಹಕ್ಕಿಯ ಹಾಡಿಗೆ – Hakkiya hadige taledooguva – ಕೆ. ಎಸ್. ನರಸಿಂಹ ಸ್ವಾಮಿ

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ. ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ.ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ. ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ.ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ. ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ.ನಾಳೆಯ ಬದುಕಿನ ಇರುಳಿನ Read More

ಮಾವು ನಾವು, ಬೇವು ನಾವು – ಕೆ. ಎಸ್. ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹಸ್ವಾಮಿ ಮಾವು ನಾವು, ಬೇವು ನಾವು; ನೋವು ನಲಿವು ನಮ್ಮವು. ಹೂವು ನಾವು, ಹಸಿರು ನಾವು, ಬೇವು ಬೆಲ್ಲ ನಮ್ಮವು. ಹೊಸತು ವರುಷ, ಹೊಸತು ಹರುಷ- ಹೊಸತು ಬಯಕೆ ನಮ್ಮವು ತಳಿರ ತುಂಬಿದಾಸೆಯೆಲ್ಲ, ಹರಕೆಯೆಲ್ಲ ನಮ್ಮವು. ಬಂಜೆ ನೆಲಕೆ ನೀರನೂಡಿ ಹೊಳೆಯ ದಿಕ್ಕು ಬದಲಿಸಿ ಕಾಡ ಕಡಿದು ದಾರಿ ಮಾಡಿ ಬೆಟ್ಟ ಸಾಲ Read More

ನಿಜದ ಸಂತಸದಲ್ಲಿ – ಕೆ.ಎಸ್.ನರಸಿಂಹಸ್ವಾಮಿ

ಹಾಡು ಕೇಳಿ ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ ಬರುವ ಕಂಪಿನ ಹೆಸರು ಪ್ರೇಮವೆಂದು ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ ಕಣ್ಣಸನ್ನೆಯ ಹೆಸರು ಪ್ರೇಮವೆಂದು ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ ದೂರದಿಂಪಿನ ಹೆಸರು ಪ್ರೇಮವೆಂದು ಮಾಲಗಣ್ಣಿನ ಹೆಣ್ಣೆ ನಿನ್ನ ತುಟಿಯಿಕ್ಕೆಲದಿ ಮಂದಹಾಸದ ಹೆಸರು ಪ್ರೇಮವೆಂದು ಯಾವುದೋ ಕನಸಿನಲಿ ಯಾರೊ ಹಾಡಿದ ಹಾಡು ಮಿಡಿದ ಹೃದಯದ ಹೆಸರು ಪ್ರೇಮವೆಂದು Read More

ಸಂಜೆಗೆನ್ನ ಪಯಣ – ಕೆ.ಎಸ್.ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹಸ್ವಾಮಿ ಗಾಯಕ – ಡಾ.ರಾಜ್‍ಕುಮಾರ್ ಸಂಗೀತ – ಸಿ.ಅಶ್ವಥ್ ಹಾಡು ಕೇಳಿ ಸಂಜೆಗೆನ್ನ ಪಯಣವೆಂದು ತಿಳಿದಳೆನ್ನ ಸುಂದರಿ ನನ್ನ ಮುಂದೆ ಬಂದು ನಿಂದು ತಡೆದಳಿಂತು ವಿನಯದಿ | ಕೆಂಪು ತುಟಿಗಳಿಂದ ಹರಸಿ ನುಡಿಯಲಿಲ್ಲ ನಿಜವನು ತೆರೆದ ಕಂಗಳುದಕ ಸುರಿಸಿ ತೊಳೆದುವೆನ್ನ ಮನವನು ಕಣ್ಣ ಹನಿಯು ಮಣಿಯ ತೆರದಿ ಕಣ್ಣಿನೊಡವೆ ಆಯಿತು ತುಟಿಗೆ ಬಂದ Read More

ಕೊಳದ ಪಕ್ಕದ ಹೊಲದ – ಕೆ.ಎಸ್.ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹ ಸ್ವಾಮಿ ಸಂಗೀತ – ಪ್ರವೀಣ್ ಗೋಡ್ಕಿಂಡಿ ಗಾಯಕಿ – ಎಂ.ಎಸ್.ಶೀಲಾ ಹಾಡು ಕೇಳಿ ಕೊಳದ ಪಕ್ಕದ ಹೊಲದ ಮೈತುಂಬಾ ನಾ ಕಂಡೆ ಬಿಳಿ ಹಳದಿ ಹೂಗಳನು ಸೇವಂತಿಗೆ ನೀರ ಮೇಗಣ ಗಾಳಿ ಬೀಸಿತೋ ನನ ಮೇಲೆ ಅದರ ಕಂಪಿಗೆ ನಾನು ಮಾರು ಹೋದೆ ಅಲ್ಲೊಂದು ತಾಣದಲಿ ಜಾಲಿ ಹೂಗಳ ಕಂಡೆ ಕೆಂಡ Read More