ಅಳುವ ಕಡಲೊಳು – ಗೋಪಾಲಕೃಷ್ಣ ಅಡಿಗ

ಕವಿ –  ಎಂ.ಗೋಪಾಲಕೃಷ್ಣ ಅಡಿಗ ಹಾಡು ಕೇಳಿ :           ಪಿ.ಕಾಳಿಂಗರಾವ್                 ರಾಜೇಶ್ (ಚಿತ್ರ:ಮತದಾನ)                      ಬಿ.ಆರ್.ಛಾಯಾ (ಚಿತ್ರ:ಮತದಾನ) ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ ಬಾಳ ಗಂಗೆಯ ಮಹಾಪೂರದೊಳು ಸಾವಿನೊಂದು ವೇಣಿ ನೆರೆತಿದೆ ಬೆರೆತಿದೆ ಕುಣಿವ ಮೊರೆವ ತೆರೆತೆರೆಗಳೋಣಿಯಲ್ಲಿ ಜನನ ಮರಣಗಳ ಉಬ್ಬು ತಗ್ಗು ಹೊರಳುರುಳುವಾಟವಲ್ಲಿ ಆಶೆ ಬೂದಿ ತಳದಲ್ಲು ಕೆರಳುತಿವೆ Read More

ನಿಜದ ಸಂತಸದಲ್ಲಿ – ಕೆ.ಎಸ್.ನರಸಿಂಹಸ್ವಾಮಿ

ಹಾಡು ಕೇಳಿ ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ ಬರುವ ಕಂಪಿನ ಹೆಸರು ಪ್ರೇಮವೆಂದು ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ ಕಣ್ಣಸನ್ನೆಯ ಹೆಸರು ಪ್ರೇಮವೆಂದು ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ ದೂರದಿಂಪಿನ ಹೆಸರು ಪ್ರೇಮವೆಂದು ಮಾಲಗಣ್ಣಿನ ಹೆಣ್ಣೆ ನಿನ್ನ ತುಟಿಯಿಕ್ಕೆಲದಿ ಮಂದಹಾಸದ ಹೆಸರು ಪ್ರೇಮವೆಂದು ಯಾವುದೋ ಕನಸಿನಲಿ ಯಾರೊ ಹಾಡಿದ ಹಾಡು ಮಿಡಿದ ಹೃದಯದ ಹೆಸರು ಪ್ರೇಮವೆಂದು Read More

ಗಂಗಾವತರಣ – ದ.ರಾ.ಬೇಂದ್ರೆ

ಇಳಿದು ಬಾ ತಾಯಿ ಇಳಿದು ಬಾ ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹಣಿಸಿ ಬಾ ಚರಾಚರಗಳಿಗೆ ಉಣಿಸಿ ಬಾ ಇಳಿದು ಬಾ ತಾಯಿ ಇಳಿದು ಬಾ. ನಿನಗೆ ಪೊಡಮಡುವೆ ನಿನ್ನನುಡುತೊಡುವೆ ಏಕೆ ಎಡೆತಡೆವೆ ಸುರಿದು ಬಾ ಸ್ವರ್ಗ ತೊರೆದು ಬಾ ಬಯಲ ಜರೆದು ಬಾ Read More

ಇಳಿದು ಬಾ ತಾಯೆ ಇಳಿದು ಬಾ – ಕುವೆಂಪು

ಕವಿ – ಕುವೆಂಪು ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ || ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ Read More

`ಕರುಣಿಸೋ ರಂಗಾ!’ – ಇಂಥ ಇನ್ನಷ್ಟು ಸಂತಸಗಳ ಈ ಬಾಳಿಗೆ!

ನಿನ್ನೆ, ಜುಲೈ, ಹದಿಮೂರರ ಸಂಜೆ, ಅರೋರಾದ ಬಾಲಾಜಿ ದೇವಸ್ಥಾನದಲ್ಲಿ, ವಿದ್ಯಾರಣ್ಯ ಕನ್ನಡಕೂಟದ ವಾರ್ಷಿಕ ‘ದಾಸ ದಿನ’ ಆಚರಣೆಯ ಪ್ರಯುಕ್ತ ಗಾಯಕ ಶ್ರೀನಿವಾಸ ಜೋಷಿಯವರ ಸಂಗೀತ ಕಾರ್ಯಕ್ರಮವಿತ್ತು. ಪಂಡಿತ ಭೀಮಸೇನ ಜೋಷಿಯವರ ಮಗನೂ, ಶಿಷ್ಯನೂ ಆದ ಶ್ರೀನಿವಾಸ ಜೋಷಿಯವರು ಹಾಡುತ್ತಿದ್ದರು. ತಂದೆಯನ್ನು ನೆನಪಿಸುವ ಅದೇ ರೂಪ, ಅಷ್ಟೊಂದು ಪಕ್ವಗೊಂಡಿರದ, ಆದರೆ ಅದೇ ದನಿ! ಸಹಜವಾಗಿ ಎಲ್ಲರ ಮನಸ್ಸಿನಲ್ಲಿ Read More