ಚಿತ್ರ – ಶೃಂಗಾರ ಕಾವ್ಯ – ೧೯೯೩
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕ – ಎಲ್.ಎನ್. ಶಾಸ್ತ್ರಿ

ಹಾಡು ಕೇಳಿ

ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಉಸಿರ ಹಿಡಿದ
ತಂತಿ ಕಡಿದ
ಇನ್ನು ಮೌನ ಗಾನವೇ |

ಕಲೆಗಾರ ಕಡೆದು ಕರುಬಿದ
ಕಥೆಗಾರ ಕಥೆಯ ಕೆಡಿಸಿದ
ಹೊಣೆಗಾರ ಹರಸಿ ಹಲುಬಿದ
ಬೆಳೆಗಾರ ಬರವ ಬರಿಸಿದ
ಕನಸು ಸುರಿದ
ಕಣ್ಣೇ ತೆಗೆದ
ಇನ್ನು ಶೂನ್ಯ ಗಾನವೇ ||೧||

ವರವಾಗಿ ಒಲವ ತಂದನು
ಮರವಾಗೋ ಗಿಡವ ಕಡಿದನು
ಶುಭವಾಗಲೆಂದು ನುಡಿದನು
ಸುಖ ಕಾಣುವಾಗ ಮುನಿದನು
ಜಯವ ಕಡೆದ
ಭಯವ ಸುರಿದ
ಇನ್ನು ಶೋಕ ಗಾನವೇ ||೨||

***

5 thoughts on “ಶೃಂಗಾರ ಕಾವ್ಯ – ಶೃಂಗಾರ ಕಾವ್ಯ ಬರೆದನು”

  1. ಹದಿಮೂರ್ ವರ್ಷಾ ಆತೇನ್ರಿ ಈ ಹಾಡ್ ಬರದೂ, ಹಂಸಣ್ಣನಿಗೆ ಜಿಂದಾಬಾದ್!

  2. ತ್ರಿವೇಣಿಯವರೇ,
    ನೀವು ಎಲ್ಲಿಂದ ಹೆಕ್ಕಿ ತರತೀರಾ ಈ ಎಲ್ಲಾ ಹಾಡುಗಳು !
    ಒಂದೊಂದು ಒಂದು ಭಾವನೆಯ ಅಲೆ ಎಬ್ಬಿಸುತ್ತವೆ..

  3. ಕಾಳಣ್ಣಾ, ಹಂಸಣ್ಣನಿಗೆ ನಂದೂ ಒಂದು ಜಿಂದಾಬಾದ್ ನಿಮ್ಮ ಜೊತೆಗೆ 🙂

  4. ವೇಣಿ, “ಕಾಡುವ ಹಾಡುಗಳು” ಅಂತನೇ ಒಂದು ವಿಭಾಗ ಮಾಡಿಬಿಡು, ಚೆನ್ನಾಗಿರತ್ತೆ.

  5. ತುಂಂಂಂಂಂಂಂಂಂಂಬಾ ಭಾವನಾತ್ಮಕವಾಗಿದೆ. ಹಂಸಣ್ಣ ಆಲ್ವೇಸ ಗ್ರೇಟ್…

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.