ಕವಿ – ಕೆ.ಎಸ್.ನರಸಿಂಹಸ್ವಾಮಿ
ಗಾಯಕಿ – ಎಸ್.ಜಾನಕಿ
ಸಂಗೀತ – ಸಿ.ಅಶ್ವಥ್ 

ಹಾಡು ಕೇಳಿ

ದೀಪವು ನಿನ್ನದೆ
ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ
ಹಡಗೂ ನಿನ್ನದೆ
ಮುಳುಗದಿರಲಿ ಬದುಕು

ಬೆಟ್ಟವು ನಿನ್ನದೇ
ಬಯಲೂ ನಿನ್ನದೇ
ಹಬ್ಬಿ ನಗಲಿ ಪ್ರೀತಿ
ನೆಳಲೋ ಬಿಸಿಲೋ
ಎಲ್ಲವೂ ನಿನ್ನವೇ
ಇರಲಿ ಏಕ ರೀತಿ

ಆಗೊಂದು ಸಿಡಿಲು
ಈಗೊಂದು ಮುಗಿಲು
ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ
ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ

ಅಲ್ಲಿ ರಣದುಂದುಭಿ
ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ
ಆ ಮಹಾ ಕಾವ್ಯ
ಈ ಭಾವಗೀತೆ
ನಿನ್ನ ಪದಧ್ವನಿ

ದೀಪವು ನಿನ್ನದೆ
ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ
ಹಡಗೂ ನಿನ್ನದೆ
ಮುಳುಗದಿರಲಿ ಬದುಕು

*         *          *

7 thoughts on ““ಪ್ರಥಮ ರಾಜನಿಗೆ” – ಕೆ.ಎಸ್.ನ”

  1. ಕಳೆದ ೧೫ ದಿನಗಳಿಂದ ಈ ಕವನ ಪದೇ ಪದೇ ನೆನಪಾಗುತ್ತಿತ್ತು.ನನ್ನ “ದುರ್ಗ’ದಲ್ಲಿ ಸೆ. ೧೧ರ ಪೋಸ್ಟಿಂಗ್ ಮಾಡುವಾಗಲೂ ತುಂಬಾ ನೆನಪಾಯಿತು. ಇಲ್ಲಿನ ದೇವಾಲಯದಲ್ಲಿ ಎಂ.ಡಿ.ಪಲ್ಲವಿ ಈ ಹಾಡು ಹೇಳಿದಾಗ ಕಣ್ಣು ಮಂಜಾಯಿತು ನಿಮ್ಮಲ್ಲಿ ಮತ್ತೆ ಅದೇ ಹಾಡು!ಓದಿ ಮನಸ್ಸು ಭಾರವಾಯಿತು….

    ನಿಮ್ಮ ಜೊತೆಗೂಡಿ ‘ಅವನನ್ನು’ ನಾನೂ ಕೇಳುವುದು ಇದೇ…”ಆರದಿರಲಿ ಬೆಳಕು….”

  2. ಕ್ಷಮಿಸಿ, ನನ್‌ದೊಂದ್ ತಲೆಹರಟೆ! ದೀಪ, ಗಾಳಿ, ಕಡಲೂ, ಹಡಗೂ ಎಲ್ಲಾ ಅವನ್ದೇ ಅದಮೇಲೆ ಬೆಳಕೂ, ಬದುಕೂ ಅವನಿಗೇ ಸೇರಬೇಕಾದ್ದೇ ತಾನೆ, ಅದನ್ನ ಹೀಗೇ ಇರ್ಲಿ ಅಂತ ಹೇಳೋಕ್ ನಾವ್ ಯಾರು? ಅಂತ ಸುಮ್ನೇ ಯೋಚ್ನೇ ಬಂತು.

    ಈ ಪದ್ಯ ತುಂಬಾ ಚೆನ್ನಾಗಿದೆ, ಈ ಹಾಡಿಗೆ ಸುಧಾರಾಣಿ ನಟನೆ ಕಣ್ಣಿಗೆ ಕಟ್ಟಿದ ಹಾಗಿದೆ. ನೆಳಲು-ಬೆಳಕಿನಲ್ಲಿ ನಾಗಾಭರಣ ಭಾವಗಳನ್ನು ಬಹಳ ಚೆನ್ನಾಗಿ ಬಿಂಬಿಸಿದ್ದಾರೆ.

  3. ಕಾಳು, ನಿಮ್ಮಮಾತು ಖಂಡಿತ ತಲೆಹರಟೆ ಅಲ್ಲ. ವೇದಾಂತದ ಸಾರವೇ ಅದರಲ್ಲಿದೆ. ಹೌದು. ಹಡಗು,ಕಡಲು ನಿನ್ನದೇ ಅಂತ ನಂಬಿ ಹತ್ತಿ ಕುಳಿತ ಮೇಲೆ, ಅದನ್ನು ಅವನು ಸರಿಯಾಗಿಯೇ ನಡೆಸುತ್ತಾನೆ ಅನ್ನುವ ಭರವಸೆ ಇರಬೇಕು ಅಲ್ಲವಾ? ಹೀಗೇ ನಡೆಸು ಅಂತ ಅವನಿಗೆ ಆಜ್ಞೆ ಮಾಡೋದು ಎಷ್ಟು ಸರಿ?

    “ಮೈಸೂರು ಮಲ್ಲಿಗೆ “ಚಿತ್ರದಲ್ಲಿ ಕೃತಕ ಬೆಳಕನ್ನು ಬಳಸದೆ ಎಣ್ಣೆ ದೀಪದ ಬೆಳಕಿನಲ್ಲೇ ಚಿತ್ರಿಸಿರುವುದು ಈ ಹಾಡಿನ ವಿಶೇಷತೆ. (source: ಉದಯ ಟಿವಿ “ಕುಹುಕುಹು”- ನಾಗಾಭರಣ )

    ಮಾಲಾ, ನಿಮ್ಮೂರಿನಲ್ಲಿ ಪಲ್ಲವಿ ಕಾರ್ಯಕ್ರಮ ಇತ್ತೇ? ಯಾವಾಗ? ಇಲ್ಲಿ ಈ ಶನಿವಾರ ಇದೆ.  ಅದಕ್ಕಾಗಿ ಕಾಯುತ್ತಿದ್ದೇನೆ.

  4. haudu,mysooru mallige cinimaadalli neLalu beLakina vinyaasadalli
    I haaDannu citrisiruvudu tuMbaa cennagide. nanagU I haaDu kaNNige kattidaMtide.innodu haaDu dIpagaLa hinnaleyalli citrisiruvudu bahusha `ninna prEmada pariya…” irabEku adU cennagide.
    nimma vanadiMda nanna durgakke link kottiddu Iga nOdide.
    adakkagi thanks srItrI avarige.

  5. ಅಯ್ಯೋ ಬಿಡಿ, ನನ್ ತಲೆಹರಟೆಗೆ ವೇದಾಂತದ ಸಾರ ಅಂತ ದೊಡ್ಡ ಮಾತ್ ಹೇಳ್‌ಬೇಡಿ.

    ಅಂತೂ ನೀವು ‘ಕಾಲಚಕ್ರ’ಕ್ಕೇಕೆ ಲಿಂಕ್ ಕೊಡೋಲ್ಲ ಅಂತ ನಾನೇ ಕೇಳೋ ಹಾಗೆ ಮಾಡಿದ್ರಿ ನೋಡಿ… ನಮ್ ಬಾಸೆ ಒರಟಾಗಿರತ್ತೇ ಅಂತಲೋ ಏನೋ ಯಾರಿಗ್ಗೊತ್ತು?

  6. ಕೊಟ್ಟಿದೀನಿ ನೋಡಿ ಈಗ 🙂

    ಲಿಂಕ್ ಕೊಡಬಾರದು ಅನ್ನೋ ಉದ್ದೇಶ ಏನಿರಲಿಲ್ಲ. ಏನೋ ಆ ವಿಚಾರ ಮನಸ್ಸಿಗೆ  ಹೊಳೆದಿರಲಿಲ್ಲ. ನೀವೇ ಕೇಳಿದ್ರೆ ಏನಾಗ್ತಾ ಇತ್ತು? ಕಾಳಣ್ಣಾ ಅಂತ ಕರೆದ ಮೇಲೂ ಈ ಉಪಚಾರ ಎಲ್ಲಾ ಯಾಕೆ ಬೇಕೂಂತ? 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.