ಚಿತ್ರ – ಕಲ್ಲರಳಿ ಹೂವಾಗಿ (೨೦೦೬)
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕರು – ಹೇಮಂತ್ ಮತ್ತು ಸಂಗಡಿಗರು

ಹಾಡು ಕೇಳಿ

ಕಲ್ಲರಳಿ ಹೂವಾಗಿ
ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಭಾಗ್ಯದ ಬಾಳಿನ ಬಳೆಗಾಗಿ
ಘಲ್ಲೆಂದಳು ಎದೆಯಲಿ ಪದವಾಗಿ ||ಪ||

ಕಲ್ಲರಳಿ ಹೂವಾಗಿ
ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅರಿಶಿನ ಕುಂಕುಮ ಸಿರಿಗಾಗಿ
ಝುಮ್ಮೆಂದಳು ಎದೆಯಲಿ ಪದವಾಗಿ||ಅನು||

ಈ ಕಾಡಿಗೆ ಕಣ್ಣೋಳ ಕಿರುಗೆಜ್ಜೆ ದನಿಯ
ಬೆನ್ನತ್ತಿದೆ ನನ್ನ ಪಂಚೇರು ಜೀವ
ಆ ದಿಬ್ಬ ಈ ದಿಬ್ಬ ಸುತ್ತೋಳ ಸಂಗ
ಜೀಕಾಡಿದೆ ನನ್ನ ಅರೆಪಾವು ಗುಂಡಿಗೆ

ನಿನಗೊಂದು ಕೋಟೆ
ಕಟ್ಟುವೆನು ನಾನು
ರಾಣಿಯಾಗಿ ನನ್ನ
ಪಾಲಿಸುವಿಯೇನು?
ನಿನಗೆ ನನ್ನೆದೆಯೆ ಅಂತ:ಪುರ ||೧||

ಕಲ್ಲರಳಿ ಹೂವಾಗಿ
ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅಳಿಯದ ಹಚ್ಚೆಯ ಸುಖಕಾಗಿ
ಅಚ್ಚಾದಳು ಎದೆಯಲಿ ಪದವಾಗಿ||

ಹೊಂದೇರ ಮೇಲೇರಿ ದುರ್ಗಾದ ಸೂರ್ಯ
ಮುಚ್ಚಿಟ್ಟ ರತ್ನಾನ ತೋರಿತ್ತ ನನಗೆ
ಈ ರತ್ನಕ್ಕೆ ಚಿನ್ನದ ಕುಂದಣವಾಗೆ
ತರಾಸು ತಟ್ಟೇಲಿ ನನ್ನಿಟ್ಟ ಕೊನೆಗೆ

ನಿನ್ನ ನೆನೆದೆನಗೆ
ಬಿಸಿಲಲ್ಲೂ ಕನಸೆ
ನೀನು ಬಳುಕಾಡಿ
ತೂಗುತಿದೆ ಪರಿಸೆ
ನಿನ್ನ ಅಂದಕ್ಕೆ ಅರಸಾದೆನಾ ||೨||

ಕಲ್ಲರಳಿ ಹೂವಾಗಿ
ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಮಾನಸ ದೇಸಿ ವಧುವಾಗಿ
ಒಂದಾದಳು ಎದೆಯಲಿ ಪದವಾಗಿ ||ಪ||

**    **    **     **     **

2 thoughts on “ಕಲ್ಲರಳಿ ಹೂವಾಗಿ – ಕಲ್ಲರಳಿ”

  1. ಕಲ್ಲರಳಿ ಹೂವಾಗಿ ಅನ್ನೊ ಕಲ್ಪನೆನೇ ಅದ್ಭುತ.

    ಅರೆಪಾವು ಗುಂಡಿಗೆ 🙂

    ಹೋಲಿಕೆ ಚೆನ್ನಗಿದೆ. ಹಳ್ಳಿ ಸೊಗಡಿನ ಬಿಂಬಿಸುತ್ತೆ.
    ಜೊತೆ ಜೊತೆಗೆ, ಹಿಂದೆ ಬರುವ ಸಣ್ಪದಗಳು.

    ಸೇರು, ಪಾವು, ಅರ್ಪಾವು, ಚಟಾಕು ಎಲ್ಲ ಮರ್ತೆ ಹೋಗಿತ್ತು. ನೆನಪಾಯ್ತು ಈಗ 🙂

    ಇಂತಿ
    ಭೂತ

  2. ಭೂತ, ಪಾವು,ಸೇರು, ಗೊತ್ತು. ಪಂಚೇರು ಅಂದರೆ ಎಷ್ಟು ಅಂತ ನನಗೆ ಸರಿಯಾಗಿ ಗೊತ್ತಿಲ್ಲ.

    ಕುಂ.ವೀ. ಬರೆಯೋ ಕತೆಯಲ್ಲಿ ಪಾವು, ಅರೆಪಾವು ತುಂಬಾ ಸಲ ಬಳಕೆಯಾಗತ್ತೆ – “ಅವನ ಮೈಯಲ್ಲಿ ಸರಿಯಾಗಿ ಅರೆಪಾವು ಮಾಂಸ ಇಲ್ಲ ” – ಈ ತರದ ಪ್ರಯೋಗಗಳು 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.