ರಚನೆ – ಪುರಂದರದಾಸರು
ಗಾಯಕ – ಶಶಿಧರ್ ಕೋಟೆ

ಹಾಡು ಕೇಳಿ

ಹರಿ ನಿನ್ನೊಲುಮೆಯು ಆಗುವ ತನಕ ಅರಿತು ಸುಮ್ಮನಿರುವುದೇ ಲೇಸು
ಮರಳಿ ಮರಳಿ ತಾ ಪಡೆಯದ ಭಾಗ್ಯ ಮರುಗಿದರೆ ತನಗಾದೀತೆ ||ಪ||

ದೂರು ಬರುವ ನಂಬಿಕೆಯನು ಕೊಟ್ಟರೆ ದುರ್ಜನ ಬರುವುದು ತಪ್ಪೀತೆ
ದೂರ ನಿಂತು ಮೊರೆ ಇಟ್ಟು ಕೂಗಿದರೆ ಚೋರರಿಗೆ ದಯ ಪುಟ್ಟೀತೆ
ಜಾರ ನಾರಿ ತಾ ಪತಿವ್ರತೆ ಎನ್ನಲು ಜಾಣರಿಗೆ ನಿಜ ತೋರೀತೆ
ಊರ ಬಿಟ್ಟು ಬೇರೂರಿಗೆ ಪೋದರೆ ಪ್ರಾರಬ್ಧವು ಬೇರಾದೀತೆ ||೧||

ಪಾಟ ಪಡುವುದು ಹಣೆಯಲ್ಲಿರಲು ಪಟ್ಟಮಂಚ ತನಗಾದೀತೆ
ಹೊಟ್ಟೆಯಲಿ ಸುತರಿಲ್ಲೆಂದು ಹೊರಳಲು ಹುಟ್ಟು ಬಂಜೆಗೆ ಮಕ್ಕಳಾದೀತೆ
ಬೆಟ್ಟದ ನವಿಲಿಗೆ ಕಣ್ಣೀರು ಬಂದರೆ ಬೇಟೆಗಾರಗೆ ದಯ ಬಂದೀತೆ
ಕೆಟ್ಟ ಹಾವು ತಾ ಕಚ್ಚಿದ ವಿಷವದು ಬಟ್ಟೆಯಲೊರೆಸಲು ಹೋದೀತೆ ||೨||

ಧನಿಕನ ಕಂಡು ಪಾಡಿ ಪೊಗಳಿದರೆ ದಾರಿದ್ಯವು ತಾ ಹಿಂಗೀತೆ
ದಿನದಿನ ನೊಸಲೊಳು ನಾಮವ ಇಟ್ಟರೆ ದೇವಗೆ ತೃಪ್ತಿಯು ಆದೀತೆ
ಎಣಿಸಿಕೊಂಡು ಏಳ್ ಹಂಜಿಯ ನೂತರೆ ಅಣೆಯದ ಸಾಲವು ತೀರೀತೆ
ಅನುದಿನದಲಿ ಶ್ರೀ ಪುರಂದರ ವಿಠಲನ ನೆನೆಯದಿದ್ದರೆ ಭವ ಹಿಂಗೀತೆ ||೩||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.