ಇಳಿದು ಬಾ ತಾಯೆ ಇಳಿದು ಬಾ – ಕುವೆಂಪು

ಕವಿ – ಕುವೆಂಪು ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ || ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ Read More

ನನ್ನ ಬಯಕೆ – ಕುವೆಂಪು

ಕವಿ – ಕುವೆಂಪು ಹಾಡು ಕೇಳಿ ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ. ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ. ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ ದನಿಯು ದನ ಕಾಯುವನ ಕೊಳಲೊಡನೆ ಬರಲಿ. ಅಲ್ಲಿ ಸಿರಿಗನ್ನಡ ಕಬ್ಬಗಳ ಹಬ್ಬಗಳು ದಿನ ದಿನವು ಸವಿಯೂಟವಿಕ್ಕುತಿರಲೆನಗೆ. ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ Read More

ತೇನ ವಿನಾ – ಕುವೆಂಪು

ರಚನೆ : ಕುವೆಂಪು ತೇನ ವಿನಾ ತೇನ ವಿನಾ ತೃಣಮಪಿ ನ ಚಲತಿ ತೇನ ವಿನಾ ಮಮತೆಯ ಬಿಡು, ಹೇ ಮೂಢಮನಾ, ಮೂಢಮನಾ, ಹೇ ಮೂಢಮನಾ ! ರವಿಗಿಲ್ಲದ ಭಯ, ಶಶಿಗಿಲ್ಲದ ಭಯ, ತಾರಾನಿವಹಕೆ ಇರದ ಭಯ, ನಿನಗೇತಕೆ ಬಿಡು, ಅಣು ! ಶ್ರದ್ಧೆಯನಿಡು; ನಿನ್ನನೆ ನೈವೇದ್ಯವ ನೀಡು ! ತೇನ ವಿನಾ . . Read More

ಹೇ ಆತ್ಮ ತಮೋಹಾರಿ !

ಕವಿ – ಕುವೆಂಪು ಗಾಯಕಿ – ರತ್ನಮಾಲಾ ಪ್ರಕಾಶ್ ಹಾಡು ಕೇಳಿ:- ಅಂತರತಮ ನೀ ಗುರು ಹೇ ಆತ್ಮ ತಮೋಹಾರಿ ಜಟಿಲ ಕುಟಿಲ ತಮ ಅಂತರಂಗ ಬಹು ಭಾವ ವಿಪಿನ ಸಂಚಾರಿ ಜನುಮ ಜನುಮ ಶತ ಕೋಟಿ ಸಂಸ್ಕಾರ ಪರಮ ಚರಮ ಸಂಸ್ಕಾರಿ ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ ರೂಪ ಅರೂಪ ವಿಹಾರಿ

ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ

ಕವಿ: ಕುವೆಂಪು ಚಿತ್ರ :ಕಾನೂರು ಹೆಗ್ಗಡತಿ ಗಾಯಕ : ಪುತ್ತೂರು ನರಸಿಂಹ ನಾಯಕ್ ಹಾಡು ಕೇಳಿ ಹೋಗುವೆನು ನಾ……. ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ ಮಲೆಯ ನಾಡಿಗೆ ಮಳೆಯ ಬೀಡಿಗೆ ಸಿರಿಯ ಚೆಲುವಿನ ರೂಢಿಗೆ ಬೇಸರಾಗಿದೆ ಬಯಲು ಹೋಗುವೆ ಮಲೆಯ, ಕಣಿವೆಯ ಕಾಡಿಗೆ ಹಸಿರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ | ಅಲ್ಲಿ Read More