ದಾಸೋಹಂ ತವ ದಾಸೋಹಂ – Dasoham tava dasoham – jagannatha dasaru

ದಾಸೋಹಂ ತವ ದಾಸೋಹಂ ತವ ದಾಸೋಹಂ ತವ ದಾಸೋಹಂ ||ಪ|| ವಾಸುದೇವ ವಿಗತಾಘಸಂಘ ತವ ||ಅ. ಪ|| ಜೀವಾಂತರ್ಗತ ಜೀವ ನಿಯಾಮಕ ಜೀವ ವಿಲಕ್ಷಣ ಜೀವನದ ಜೀವಾಧಾರಕ ಜೀವರೂಪಿ ರಾ- ಜೀವ ಭವಜನಕ ಜೀವೇಶ್ವರ ತವ ||೧|| ಕಾಲಾಂತರ್ಗತ ಕಾಲ ನಿಯಮಕ ಕಾಲಾತೀತ ತ್ರಿಕಾಲಜ್ಞ ಕಾಲ ಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕ ಕಾಲಮೂರ್ತಿ ತವ ||೨|| ಕರ್ಮಕರ್ಮಕೃತ Read More

ರಂಗ ನಿನ್ನ ಕೊಂಡಾಡುವ-Ranga ninna Kondaduva

ರಚನೆ : ಜಗನ್ನಾಥದಾಸರು – ಅಂಕಿತ : ಜಗನ್ನಾಥ ವಿಠಲ ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ ಸಂಗಸುಖವಿತ್ತು ಕಾಯೊ ಕರುಣಾಸಾಗರ ||ಪ|| ಅರಿಯರೊ ನೀನಲ್ಲದೆ ಮತ್ತನ್ಯ ದೈವರ ಮರೆಯರೊ ನೀ ಮಾಡಿದ ಅನಿಮಿತ್ತೋಪಕಾರ ತೊರೆಯರೊ ನಿನ್ನಂಘ್ರಿಸೇವೆ ಪ್ರತಿವಾಸರ ಅರಿಯರೊ ಪರತತ್ವವಲ್ಲದೆ ಇತರ ವಿಚಾರ ||೧|| ಮೂಕ ಬಧಿರರಂತಿಪ್ಪರೊ ನೋಳ್ಪ ಜನಕೆ ಕಾಕುಯುಕುತಿಗಳನವರು ತಾರರೊ ಮನಕೆ ಸ್ವೀಕರಿಸರನರ್ಪಿತವೊಂದು Read More

ಪೋಗಬೇಡವೊ ನಿಗಮನುತ – Pogabedavo Nigamanuta madhurege

ಪೋಗಬೇಡವೊ ನಿಗಮನುತ ಮಧುರೆಗೆ ಪೋಗಬೇಡವೊ ಹರಿಯೆ||ಪಲ್ಲವಿ|| ಪೋಗುವಿ ನೀ ಪುನಾರಾಗಮ ಎಂದಿಗೆ ಹೇಗೆ ತಾಳುವೆವೊ ನಾಗಮರ್ದನ ಕೃಷ್ಣ||ಅನು|| ಬಾಲತನದಿ ಬಹುಲೀಲೆಗಳಿಂದಲಿ ಗೋಪಾಲಕರೊಡಗೂಡಿಬಾಳಪ್ರೇಮದಿ ನಮ್ಮಾಲಯವನು ಪೊಕ್ಕು ಪಾಲು ಮೊಸರು ಬೇಡಿಶೀಲಮೂರುತಿ ನಿಮ್ಮೊಲುಮೆಗೆ ಸಿಲುಕಿದಬಾಲೆಯರ ಸ್ಮರಣಂಬಿಗೆ ಗುರಿಮಾಡಿ ||-೧-|| ಹುಟ್ಟಿದ್ದು ಮಧುರೆ ತಂದಿಟ್ಟದ್ದು ಗೋಕುಲ ಪಟ್ಟದರಸ ಎನಿಸಿಬೆಟ್ಟಿಲಿ ಬೆಟ್ಟವ ಎತ್ತಿ ಪೊರೆದು ಬಂದ ಕಷ್ಟವ ಪರಿಹರಿಸಿಕೃಷ್ಣಮೂರುತಿ ಪರಮೇಷ್ಟಿಗಳರಸನೆನಮ್ಮಿಷ್ಟ ದೈವವೆ Read More

ಕನಸಿನೊಳಗೊಂದು ಕಣಸು – ಅಂಬಿಕಾತನಯದತ್ತ

ಕವನ -ಕನಸಿನೊಳಗೊಂದು ಕಣಸುಕವಿ – ದ.ರಾ.ಬೇಂದ್ರೆ(ಅಂಬಿಕಾತನಯದತ್ತ)          ತಾಯಿ ಮಕ್ಕಳ ಸಂವಾದ(ಈಗಿನ ಕನ್ನಡ ನಾಡಿನ ಮತ್ತು ಕನ್ನಡಿಗರ ಸ್ಥಿತಿಯ ಚಿತ್ರ) “ಯಾರು ನಿಂದವರಲ್ಲಿ ತಾಯೆ” ಎಂದೆ  “ಯಾರು ಕೇಳುವರೆನಗೆ, ಯಾಕೆ ತಂದೆ ?” “ಬೇಸರದ ದನಿಯೇಕೆ ಹೆಸರ ಹೇಳಲ್ಲ”  “ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ” “ನೀನಾರ ಮನೆಯವಳು ಮುತ್ತೈದೆ ಹೇಳು”  “ನಾನಾರ ಮನೆಯವಳೊ ಬಯಲನ್ನೆ ಕೇಳು” “ಆಪ್ತರಿಲ್ಲವೆ ನಿನಗೆ Read More

ಬಾರಯ್ಯಾ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ!

ರಚನೆ : ಗೋಪಾಲದಾಸರು ಹಾಡಿದವರು : ಮೈಸೂರು ರಾಮಚಂದ್ರ ಆಚಾರ್ಯ ವಾರಿಜಾಲಯಪತೆ ವಾರಿಜನಾಭನೆ ವಾರಿಜಭವಪಿತ ವಾರಿಜನೇತ್ರನೆ ವಾರಿಜಮಿತ್ರ ಅಪಾರ ಪ್ರಭಾವನೆ ವಾರಿಜಜಾಂಡದ ಕಾರಣ ದೊರೆಯೆ ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ|| ಮಾರ ಜನಕ ಮುಕುತರೊಡೆಯ ದೇವೈಯ್ಯ ಜೀಯ ||ಅ-ಪ|| ಸ್ಯಂದನವೇರಿ ಬಾಪ್ಪ ರಂಗ ದೇವೋತ್ತುಂಗ ನಂದ ನಂದನ ಅರಿಮದಭಂಗ ಕರುಣಾಪಾಂಗ Read More