ಯಾವ ಜನ್ಮದ ಮೈತ್ರಿ – Yava Janmada maitri – kuvempu

ರಚನೆ – ಕುವೆಂಪುಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದುನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ ! ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ,ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು!ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು!ಮೇಲೆ ತೆರೆನೊರೆಯೆದ್ದು ಭೋರ್ಗರೆಯುತಿರೆ ರೇಗಿ,ಅದರಂತರಾಳದಲಿ ಗುಪ್ತಗಾಮಿನಿಯಾಗಿ; ಹೃದಯಗಳು ನಲಿಯುತಿವೆ ಪ್ರೇಮ ತೀರ್ಥದಿ ಮಿಂದು!ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ;ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ?ಕುರುಡನಾದಗೆ ದಾರಿಯರ್ಥ ತಿಳಿಯಲೆ ಬೇಕೆ? ಹಾದಿ ಸಾಗಿದರಾಯ್ತು ಬರುವುದೆಲ್ಲಾ Read More

ಅಗಣಿತ ತಾರಾ ಗಣಗಳ ನಡುವೆ- – ಕುವೆಂಪು

ಅಗಣಿತ ತಾರಾಗಣಗಳ ನಡುವೆ        ನಿನ್ನನೆ ನೆಚ್ಚಿಹೆ ನಾನು.ನನ್ನೀ ಜೀವನ ಸಮುದ್ರ ಯಾನಕೆ        ಚಿರ ಧ್ರುವ ತಾರೆಯು ನೀನು. ಇಲ್ಲದ ಸಲ್ಲದ ತೀರಗಳೆಡೆಗೆ        ಹೊರಡುತ ಬಳಲಿದರೇನು.ದಿಟ್ಟಿಯು ನಿನ್ನೊಳು ನೆಟ್ಟರೆ ಕಡೆಗೆ       ಗುರಿಯನು ಸೇರೆನೆ ನಾನು? ಚಂಚಲವಾಗಿಹ  ತಾರಕೆಗಳಲಿ        Read More

ಒಡವೆಗಳು – ಕುವೆಂಪು

ಚಿನ್ನದ ಒಡವೆಗಳೇತಕೆ ಅಮ್ಮಾ?ತೊಂದರೆ ಕೊಡುವುವು ಬೇಡಮ್ಮಾ!ಬಣ್ಣದ ಬಟ್ಟೆಗಳೇತಕೆ ಅಮ್ಮಾ?ಮಣ್ಣಿನೊಳಾಡಲು ಬಿಡವಮ್ಮಾ! ‘ಚಂದಕೆ, ಚಂದಕೆ’ ಎನ್ನುವೆಯಮ್ಮಾ!ಚಂದವು ಯಾರಿಗೆ ಹೇಳಮ್ಮಾ?ನೋಡುವರಿಗೆ ಚಂದವು, ಆನಂದ;ಆಡುವ ಎನಗಿದು ಬಲು ಬಂಧ! ನನ್ನೀ ಶಿಶುತನ ನಿನ್ನೀ ತಾಯ್ತನಎರಡೇ ಒಡವೆಗಳೆಮಗಮ್ಮಾ:ನಾ ನಿನಗೊಡವೆಯು; ನೀ ನನಗೊಡವೆಯು;ಬೇರೆಯ ಒಡವೆಗಳೇಕಮ್ಮಾ? – ಕುವೆಂಪು

ಸುರಲೋಕದ ಸುರನದಿಯಲಿ ಮಿಂದು

ಕವಿ – ಕುವೆಂಪು ಸುರಲೋಕದ ಸುರನದಿಯಲಿ ಮಿಂದು, ಸುರಲೋಕದ ಸಂಪದವನು ತಂದು, ನವ ಸಂವತ್ಸರ ಭೂಮಿಗೆ ಬಂದು ಕರೆಯುತಿದೆ ನಮ್ಮನು ಇಂದು! ಗೀತೆಯ ಘೋಷದಿ ನವ ಅತಿಥಿಯ ಕರೆ; ಹೃದಯ ದ್ವಾರವನಗಲಕೆ ತೆರೆ, ತೆರೆ! ನವ ಜೀವನ ರಸ ಬಾಳಿಗೆ ಬರಲಿ, ನೂತನ ಸಾಹಸವೈತರಲಿ! ಗತವರ್ಷದ ಮೃತಪಾಪವ ಸುಡು, ತೊರೆ; ಅಪಜಯ ಅವಮಾನಗಳನು ಬಿಡು; ಮರೆ; Read More

ಸಂನ್ಯಾಸಿ ಗೀತೆ – ಕುವೆಂಪು- sanyasi geete – Elu Melelelu sadhuve – Vivekananda – Kuvempu

ಸಂನ್ಯಾಸಿ ಗೀತೆ ಮೂಲ ಗೀತೆಯ ರಚನೆ – ಶ್ರೀ ವಿವೇಕಾನಂದರು ಕನ್ನಡಕ್ಕೆ ಅನುವಾದ – ಕುವೆಂಪು  ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು; ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು! ದೂರದಡವಿಯೊಳೆಲ್ಲಿ ಲೌಕಿಕವಿಷಯವಾಸನೆ ಮುಟ್ಟದೊ, ಎಲ್ಲಿ ಗಿರಿಗುಹೆಕಂದರದ ಬಳಿ ಜಗದ ಗಲಿಬಿಲಿ ತಟ್ಟದೊ, ಎಲ್ಲಿ ಕಾಮವು ಸುಳಿಯದೊ,-ಮೇಣ್ ಎಲ್ಲಿ ಜೀವವು ತಿಳಿಯದೊ ಕೀರ್ತಿ ಕಾಂಚನವೆಂಬುವಾಸೆಗಳಿಂದ Read More