ವಾರ್ಡ್ ನಂಬರ್ ಸೊನ್ನೆ

ಆಸ್ಪತ್ರೆಯ ಆ ವಾರ್ಡಿನ ಹೆಸರೇ ವಿಚಿತ್ರ, ನಿಜ. ಪೊಲೀಸರ ಹಿಂಡು. ಅವಳು ಬಾಯ್ತೆರೆದು ನುಡಿಯಾಡುವುದನೆ ಕಾದು ಕುಳಿತಿತ್ತು. ಅದೊಂದು ಯಾತನೆಯ ಮೊತ್ತ ಅತ್ತಿತ್ತ ಚಲಿಸಲಾರದು, ಮಗ್ಗುಲು ಹೊರಳಲಾರದು, ಮೂಗು-ಕಣ್ಣು ಗುರುತಿಸಲಾಗದ ಕರಿ ನೆರಳು ; ಬರೀ ನರಳುವ ಕೊರಳು ‘ಹೂಂ ಹೇಳಮ್ಮಾ…. ಹೆದರಬೇಡ’ ಕೇಳಿದ ಖಾಕಿಧಾರಿ ನಯವಿಲ್ಲದ ಆ ಮಾತಿಗಿಂತ ಬೇಕೇನು ಹೆದರಿಸಲು? ನನ್ನೆಲ್ಲಾ ಒತ್ತಾಯ Read More

ಅಮ್ಮ

ಅವಳು- ದುಡಿದುಡಿದು ಸತ್ತವಳು, ದುಡಿದು ಬೇಸತ್ತವಳು, ಬದುಕ ಹೆಗ್ಗಾಲಿಯ ಕೆಳಗೆ ನುಚ್ಚು ನೂರಾದವಳು ಅವಳಿಲ್ಲ ಈಗ- ಹೀಗನ್ನುವುದು ದಾಷ್ಟೀಕ ಇದ್ದೇ ಇದ್ದಾಳೆ ಮನದಾಳದೊಳಗೆ- ನಾನೊಂದು ಕಣ್ಣೀರಿಡುವಾಗ ಮೈದಡವಿ ಸಂತೈಸುತ್ತಾಳೆ, ನನ್ನ ಸುಖ, ಸಾಧನೆಗಳಿಗೆ ತಾನೂ ಸಂಭ್ರಮಿಸಿ ನಲಿಯುತ್ತಾಳೆ, ತೀರದ ಕೊರಗಾಗಿ ಕಾಡುತ್ತಾಳೆ, ಆರದ ಗಾಯವಾಗಿ ಉರಿಯುತ್ತಾಳೆ, ಭಾರದ ನೆನಪಾಗಿ ಮೀಟುತ್ತಾಳೆ ಇಲ್ಲಿ…… ಅಮೆರಿಕಾದ ಅಡಿಗೆ ಮನೆಯಲ್ಲಿ Read More

ನಿನಗಾಗಿ

ಕಲ್ಪನೆ ಕುಂಚವ ಭಾವದಿ ಹೊರಳಿಸಿ ರಚಿಸಲು ಕುಳಿತೆನು ನುಡಿಚಿತ್ರ ಹೃದಯದಿ ತುಂಬಿದ ಒಲುಮೆಯೆ ಬರೆಸಿದೆ ನಿನಗಾಗೆಂದೇ ಈ ಪತ್ರ ತೂರುತ ಬರುವ ಮುಳ್ಳಿನ ಮಾತಿಗೆ ಸಾತ್ವಿಕ ನಡತೆಯ ಬಿಳಿಹೂವು ನಕಾರ ಯೋಚನೆ ಸನಿಹ ಬರದಂತೆ ರೋಗ ನಿರೋಧಕ ಕಹಿಬೇವು ಉಕ್ಕುತ ಬಿಕ್ಕುತ ಸೊಕ್ಕುತ ಬರುವ ಆವೇಗದ ಬೆಂಕಿಯ ತಡೆವ ಕೂಲ್ ಗಾಜು ಮೃದುಮನ ನರಳಿಸೊ ನೆತ್ತರ Read More

ಸ್ವಗತ

ಕೋಟ್ಯಾಧಿಪತಿಯು ನಾನು ಬಹುಮಹಡಿ ಬಂಗಲೆಯು ಚಿನ್ನ, ಒಡವೆಗಳಿಂದ ತುಂಬಿತುಳುಕಾಡುವ ತಿಜೋರಿ ಬ್ಯಾಂಕಿನಲ್ಲಿಯೂ ಉಂಟು ರಾಶಿ ಹಣದ ಗಂಟು ಇಷ್ಟಿದ್ದೂ ಹೀಗೇಕಿಲ್ಲಿ ಮಲಗಿಹೆನು ಬರಿ ನೆಲದ ಮೇಲೆ? ಹಾಸಿಗೆ, ಹೊದಿಕೆಗಳೆಲ್ಲಿ? ಹಕ್ಕಿ ಗರಿಗಿಂತಲೂ ಮೃದುವಾಗಿದ್ದ ನನ್ನ ಸುಪ್ಪತ್ತಿಗೆಯೀಗ ಹೋಯಿತೆಲ್ಲಿ? ಎಲ್ಲಿ ಹೋಗಿಹರೋ ಎಲ್ಲಾ ? ಹೆಂಡತಿ, ಮಕ್ಕಳು, ನೆಂಟರಿಷ್ಟರು ; ಸುತ್ತಲೂ ಮುತ್ತಿದ್ದ ಆಳುಕಾಳುಗಳು? ಕಗ್ಗತ್ತಲೆಯಲಿ, ಕೊರೆವ Read More