ದಾರಿ

ಈ ತುದಿಯಲ್ಲಿ ಕಾಯುತ್ತಿದ್ದೇವೆ ನಾವಿನ್ನೂ ನಮ್ಮ ಸರದಿಗಾಗಿ ಕಣ್ಣುಗಳಲ್ಲಿ ಅಳಿದುಳಿದ ಆಸೆಯ ಕುರುಹು ನೋಟ ಹರಿಯುವ ಉದ್ದಕ್ಕೂ ಮೈಚಾಚಿ ಮಲಗಿದೆ ದಾರಿ ಯಾರೂ ಅರಿಯದ ಗುಟ್ಟು ತನ್ನಲ್ಲೇ ಬಚ್ಚಿಟ್ಟು ನಿರ್ಲಿಪ್ತ ಮೌನದಲಿ. ಯಾರೋ ಇಳಿಯುತ್ತಾರೆ ಮತ್ತಾರೋ ಏರುತ್ತಾರೆ ಅತ್ತಿತ್ತ ಹರಿಯುವ ಬಂಡಿಗೆ ಪಯಣಿಗರ ಸುಖ-ದುಃಖಗಳರಿವಿಲ್ಲ ಅದರದು ನಿಲ್ಲದ ನಿತ್ಯ ಪಯಣ. ಅಹಂ ಅಳಿದ ಮರುಕ್ಷಣ ದೂರವೇನಿಲ್ಲ Read More

ವಿರೋಧವಿಲ್ಲ ವಿರೋಧಿಗೆ

ಹಬ್ಬ ಬಂದರೂ ಹೊಸದೇನಿಲ್ಲ; ಬಕೇಟಿನಲ್ಲಿ ಕದರಬೇಕಿಲ್ಲ ಸಗಣಿ ನೀರು ಬೀದಿಯ ಧೂಳಡಗುವಂತೆ ಚಿಲ್ಲನೆ ನೀರೆರಚಿ ಹೆಣೆಯಬೇಕಿಲ್ಲ ಚುಕ್ಕಿ ಚೆಲ್ಲಿ ರಂಗೋಲಿ ಚಪ್ಪರವ ಹೊಸ್ತಿಲಿನ ನೆತ್ತಿಗೆ ಕೆಮ್ಮಣ್ಣಿನ ಬದಲು ಕೆಂಪು ಪೇಂಟಿದೆ ತೋರಣಕ್ಕೆ ಮಾವಿಲ್ಲ, ಬೇವೂ ಬೇಕಿಲ್ಲ ಎಣ್ಣೆಯ ಜಿಗುಟು ತೊಳೆಯಲು ಸೀಗೆಯ ಘಾಟು ಸಹಿಸಬೇಕಿಲ್ಲ ಶವರಿನ ಅಡಿ ಮೈತೆರೆದು ನಿಂತರೆ ನಿತ್ಯ ಅಭ್ಯಂಜನವೇ, ಬೇಕಿಲ್ಲ ಅದಕೊಂದು Read More

ಕಾಲದ ಗಂಟೆ

ಚಿತ್ರಕವನದಿಂದ ತುಂಬಿದ ಶಾಂತಿಯ ಕೆಣಕುವ ಹಾಗೆ ಮನಸನು ತಲ್ಲಣ ಗೊಳಿಸುವ ಹಾಗೆ ಎಲ್ಲಿಂದಲೇ ತೂರಿ ಬಂದಿತು ಶಬ್ದ ಕಲಕೇ ಹೋಯಿತು ದಿವ್ಯ ನಿಶ್ಯಬ್ದ ! ಅಂತರಾಳದ ಆಳಕ್ಕಿಳಿದು ಮೊಳಗುತ್ತಲಿದೆ ಕಾಲದ ಕೂಗು ಹನಿಹನಿ ಆಯುವು ಸೋರುವ ಮುನ್ನ ಜನ್ಮ ಸಾರ್ಥಕಗೊಳಿಸಿಕೊ ಚಿನ್ನ ! ಆಯಿತೇ ಮಗನಿಗೆ ವಿದ್ಯಾಭ್ಯಾಸ ? ಆದೀತು ಮಗಳ ಮದುವೆಯೂ ನಿರಾಯಾಸ ತೀರಿತು Read More

ರಕ್ತ ಕಣ್ಣೀರು

ಚಿತ್ರಕವನ ಬ್ಲಾಗ್‍ನಿಂದ ಬಡವನಲ್ಲ ಸ್ವಾಮಿ ನಾನು ; ಒಂದು ಕಾಲದ ಶ್ರೀಮಂತ ಹತ್ತೂರ ಯಜಮಾನ, ಹೆಸರು ಲಕ್ಷ್ಮೀಕಾಂತ ಧನ-ಕನಕ, ಸುಖ-ಶಾಂತಿ ತುಂಬಿತ್ತು ನಮ್ಮನೆಯಲ್ಲಿ ಸಿರಿದೇವಿ ಇದ್ದಳು ಕಾಲ್ಮುರಿದು ಮೂಲೆಯಲ್ಲಿ ಬೆಳೆದೆ ರಾಜಕುಮಾರನಂತೆ, ಬದುಕೋ ಸುಖದ ಸುಪ್ಪತ್ತಿಗೆ ಕೈಹಿಡಿದು ಬಂದಳು ಸುಗುಣೆ, ಸುಕುಮಾರಿ ಮಲ್ಲಿಗೆ ದಾಂಪತ್ಯ ವಲ್ಲರಿಯಲಿ ಅರಳಿದವು ಮೊಗ್ಗೆರಡು ನೋವೆಂಬುದಿರಲಿಲ್ಲ ಮನೆಯಾಗಿತ್ತು ನಲುಮೆ ಬೀಡು ಏನಾಯ್ತೋ, Read More

ಮುಡಿಗೇರಲಿ ಸಾಧನೆ

ಚಿತ್ರಕವನದಿಂದ ಕೇಳಿರೆ ಗೆಳತಿಯರೇ, ನಿಮ್ಮಮ್ಮ, ಅಜ್ಜಿಗಿಂತ ನೀವೇ ಪುಣ್ಯವಂತರು ಓದಿ-ಬರೆದು ಮಾಡಲು, ಅವರಿಗ್ಯಾರು ನೆರವು ಕೊಟ್ಟರು? ಹೆಣ್ಣಿಗೇಕೆ ಶಿಕ್ಷಣ? ಅದು ಪರರ ಮನೆಯ ಬೆಳಕು ಕಸೂತಿ, ರಂಗೋಲಿ, ಹಾಡು-ಹಸೆ ಬಂದರಾಯಿತು, ಸಾಕು ವರ್ಷ ಎಂಟಕ್ಕೇ ಮದುವೆ, ಬಸುರು, ಬಾಣಂತನದ ಕಾಟ ಕಸಮುಸುರೆ, ಹೊರೆಗೆಲಸ; ಮನೆಮಂದಿಗೆ ಹೊತ್ತುಹೊತ್ತಿನೂಟ ಮೂವತ್ತಕ್ಕೇ ಮುದಿಯಾಗಿ ಅಡರಿತ್ತು ಹರಯದಲ್ಲೇ ಮುಪ್ಪು ಹೆಣ್ಣಾಗಿ ಹುಟ್ಟಿದ್ದೊಂದೇ Read More