ಇಷ್ಟು ದಿನ ಈ ವೈಕುಂಠ

ರಚನೆ : ಕನಕದಾಸರು ವಿದ್ಯಾಭೂಷಣ ಇಷ್ಟು ದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೆ ಶ್ರೀರಂಗಶಾಯಿ ||ಪಲ್ಲವಿ|| ಎಂಟು ಏಳನು ಕಳೆದುದರಿಂದೆ ಭಂಟರೈವರ ತುಳಿದುದರಿಂದೆ ತುಂಟಕನೊಬ್ಬನ ತರಿದುದರಿಂದೆ ಭಂಟನಾಗಿ ಬಂದೆನೋ ರಂಗಶಾಯಿ ||೧|| ವರ್ಜ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾದ್ವಾರವ ಕಂಡೆ ನಿರ್ಜರಾದಿ ಮುನಿಗಳ ನಾ ಕಂಡೆ ದುರ್ಜನಾಂತಕನೆ Read More

ದೇವೀ, ನಮ್ಮ ದ್ಯಾವರು ಬಂದರು

ರಚನೆ – ಕನಕದಾಸರು ರಾಯಚೂರು ಶೇಷಗಿರಿ ದಾಸ್ ವಿದ್ಯಾಭೂಷಣ ದೇವಿ ನಮ್ಮ ದ್ಯಾವರು ಬಂದರು ಬನ್ನಿರೇ ನೋಡಬನ್ನಿರೇ ||ಪಲ್ಲವಿ|| ಕೆಂಗಣ್ಣ ಮೀನನಾಗಿ ನಮ್ಮ ರಂಗ ಗುಂಗಾಡಿ ಸೋಮನ್ನ ಕೊಂದಾನ್ಮ್ಯ ಗುಂಗಾಡಿ ಸೋಮನ್ನ ಕೊಂದು ವೇದವ ಬಂಗಾರದೊಡಲನಿಗಿತ್ತಾನ್ಮ್ಯ ದೊಡ್ಡ ಮಡುವಿನೊಳಗೆ ನಮ್ಮ ರಂಗ ಗುಡ್ಡವ ಹೊತ್ತುಕೊಂಡು ನಿಂತಾನ್ಮ್ಯ ಗುಡ್ಡವ ಹೊತ್ತುಕೊಂಡು ನಿಂತು ಸುರರನ್ನು ದೊಡ್ಡವರನ್ನಾಗಿ ಮಾಡಾನ್ಮ್ಯ ಚೆನ್ನ Read More

ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ

ರಚನೆ : ಕನಕದಾಸರು ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ ಭೃಷ್ಟಮಾನವ ನಿನ್ನ ಹಣೆಯ ಬರಹವಲ್ಲದೆ ಇಲ್ಲ || ಸಿರಿವಂತರ ಸ್ನೇಹಮಾಡಿ ನಡೆದರಿಲ್ಲ ಪರಿಪರಿಯಲ್ಲಿ ವಿದ್ಯೆ ಕಲಿತರಿಲ್ಲ ನರಿಯ ಬುದ್ಧಿಯಲ್ಲಿ ನಡೆದುಕೊಂಡರು ಇಲ್ಲ ಅರಿಯದೆ ಹಲವ ಹಂಬಲಿಸಿದರಿಲ್ಲ || ಕೊಂಡಾಡಿ ಕಾಡಿ ನೀ ಬೇಡಿಕೊಂಡರು ಇಲ್ಲ ಕಂಡಕಂಡವರಿಗೆ ಕೈಮುಗಿದರಿಲ್ಲ ಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲ ಪ್ರ- ಚಂಡನಾದರೂ ಇಲ್ಲ ಪರಿಹಾಸವೆಲ್ಲ Read More