ಪೋಗಬೇಡವೊ ನಿಗಮನುತ – Pogabedavo Nigamanuta madhurege

ಪೋಗಬೇಡವೊ ನಿಗಮನುತ ಮಧುರೆಗೆ ಪೋಗಬೇಡವೊ ಹರಿಯೆ||ಪಲ್ಲವಿ|| ಪೋಗುವಿ ನೀ ಪುನಾರಾಗಮ ಎಂದಿಗೆ ಹೇಗೆ ತಾಳುವೆವೊ ನಾಗಮರ್ದನ ಕೃಷ್ಣ||ಅನು|| ಬಾಲತನದಿ ಬಹುಲೀಲೆಗಳಿಂದಲಿ ಗೋಪಾಲಕರೊಡಗೂಡಿಬಾಳಪ್ರೇಮದಿ ನಮ್ಮಾಲಯವನು ಪೊಕ್ಕು ಪಾಲು ಮೊಸರು ಬೇಡಿಶೀಲಮೂರುತಿ ನಿಮ್ಮೊಲುಮೆಗೆ ಸಿಲುಕಿದಬಾಲೆಯರ ಸ್ಮರಣಂಬಿಗೆ ಗುರಿಮಾಡಿ ||-೧-|| ಹುಟ್ಟಿದ್ದು ಮಧುರೆ ತಂದಿಟ್ಟದ್ದು ಗೋಕುಲ ಪಟ್ಟದರಸ ಎನಿಸಿಬೆಟ್ಟಿಲಿ ಬೆಟ್ಟವ ಎತ್ತಿ ಪೊರೆದು ಬಂದ ಕಷ್ಟವ ಪರಿಹರಿಸಿಕೃಷ್ಣಮೂರುತಿ ಪರಮೇಷ್ಟಿಗಳರಸನೆನಮ್ಮಿಷ್ಟ ದೈವವೆ Read More

ನಾರಾಯಣ ನಿನ್ನ ನಾಮದ ಸ್ಮರಣೆ…

ನಾರಾಯಣ ನಿನ್ನ ನಾಮದ ಸ್ಮರಣೆಯಸಾರಾಮೃತವೆನ್ನ ನಾಲಿಗೆಗೆ ಬರಲಿ || ಪಲ್ಲವಿ|| ಕೂಡುವಾಗಲಿ ನಿಂತಾಡುವಾಗಲಿ ಮತ್ತೆಹಾಡುವಾಗಲಿ ಹರಿದಾಡುವಾಗಲಿಖೋಡಿ ವಿನೋದದಿ ನೋಡದೆ ನಾ ಬಲುಮಾಡಿದ ಪಾಪ ಬಿಟ್ಟೋಡಿ ಹೋಗೋ ಹಾಗೆ|| ಊರಿಗೇ ಹೋಗಲಿ ಊರೊಳಗಿರಲಿಕಾರಣಾರ್ಥಂಗಳೆಲ್ಲ ಕಾದಿರಲಿವಾರಿಜನಾಭ ನರಸಾರಥಿ ಸನ್ನುತಸಾರಿ ಸಾರಿಗೇ ನಾ ಬೇಸರದ್ಹಾಗೆ|| ಹಸಿವಿದ್ದಾಗಲಿ ಹಸಿವಿಲ್ಲದಾಗಲಿರಸಕಸಿ ಇರಲಿ ಹರುಷಿರಲಿವಸುದೇವಾತ್ಮಕ ಶಿಶುಪಾಲಕ್ಷಯಾಅಸುರಾಂತಕ ನಿನ್ನ ಹೆಸರು ಮರೆಯದ್ಹಾಗೆ|| ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿಎಷ್ಟಾದರೂ ಮತಿಗೆಟ್ಟಿರಲಿಕೃಷ್ಣ Read More

ಲಕ್ಷ್ಮೀಕಾಂತ ಬಾರೊ

ಲಕ್ಷ್ಮೀಕಾಂತ ಬಾರೊ ಶುಭ ಲಕ್ಷಣವಂತ ಬಾರೊ||ಪಲ್ಲವಿ|| ಪಕ್ಷಿವಾಹನ ಏರಿದವನೆ ಪಾವನಮೂರ್ತಿ ಬಾರೊ ||ಅನು|| ಆದಿಮೂಲ ವಿಗ್ರಹ ವಿನೋದಿ ನೀನೇ ಬಾರೊ ಸಾಧುಸಜ್ಜನ ಸತ್ಯಯೋನಿ ದಾನಿ ನೀನೇ ಬಾರೊ||-೧-|| ಗಾಡಿಕಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೊ ರೂಢ ಮಾತನಾಡಿ ಸರ್ವರೂಢಿಗೊಡೆಯ ಬಾರೊ ||-೨-|| ನಿನ್ನ ಪಾದಂಗಳ ನಾನು ಬಣ್ಣಿಸಿ ಕರೆವೆ ಬಾರೊ ಪನ್ನಗಶಯನ ಪುರಂದರ ವಿಠಲ ನೀ Read More

ತನುವಿನೊಳಗೆ ಅನುದಿನವಿದ್ದು

ತನುವಿನೊಳಗೆ ಅನುದಿನವಿದ್ದು ಎನಗೊಂದು ಮಾತ ಪೇಳದೆ ಪೋದೆ ಹಂಸ || ಪ|| ಜಾಳಾಂದ್ರವೆಂಬದು ಒಂಬತ್ತು ಬಾಗಿಲ ಮನೆ ರೂವಾರವೆಂಬ ಒಂಬತ್ತು ಬಾಗಿಲ ದಾಟಿ ಗಾಳಿ ತಂಪಿನೊಳಿದ್ದು ತಾನು ಹಾರಿ ಪೋಪಾಗ ಕಾಯಕೆ ಹೇಳದೆ ಹೋಯಿತು ಒಂದು ಮಾತ  ||-1|| ಹಳ್ಳ ಕೊಳ್ಳಗಳಲಿ ತಂಪಿನ ತಡಿಯಲಿ ಬಳ್ಳಿ ಕಾಯಿಗಾತು ಫಲವಾಯಿತು ಒಳ್ಳೆಯ ತನಿಹಣ್ಣು ಉದುರಿ ತಾ ಪೋಪಾಗ Read More

ಸುಂದರಮೂರುತಿ ಮುಖ್ಯಪ್ರಾಣ ಬಂದ ನಮ್ಮನೆಗೆ

ಸುಂದರಮೂರುತಿ ಮುಖ್ಯಪ್ರಾಣ ಬಂದ ನಮ್ಮನೆಗೆ ಪ್ರಾಣ ಬಂದ ಮನೆಗೆ ಶ್ರೀರಾಮನಾಮ ಧ್ವನಿಗೆ ||ಪ|| ಕನಕಲಂದುಗೆ ಗೆಜ್ಜೆ ಝಣಝಣರೆನುತ ಝಣಕು ಝಣಕೆಂದು ನಾದವಗೈಯುತ ಪ್ರಾಣ ಬಂದ ಮನೆಗೆ ಶ್ರೀರಾಮನಾಮ ಧ್ವನಿಗೆ||೧|| ತುಂಬುರು ನಾರದ ವೀಣೆ ಬಾರಿಸುತ ರಾಮನಾಮ ಪಾಡುತ ಪ್ರಾಣ ಬಂದ ಮನೆಗೆ ಶ್ರೀರಾಮನಾಮ ಧ್ವನಿಗೆ||೨|| ಪುರಂದರವಿಠಲನ ನೆನೆದು ಪಾಡುತಲಿ ಆಲಿಂಗನ ಮಾಡುತಲಿ ಪ್ರಾಣ ಬಂದ ಮನೆಗೆ Read More