ಮಾತು – ಚೆನ್ನವೀರ ಕಣವಿ

ಕವಿ : ಚೆನ್ನವೀರ ಕಣವಿ ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ ಪಾರಿಜಾತವು ಹೂವು ಸುರಿಸಿದಂತೆ, ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ ; ಮೆಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ ಹೆಣ್ಣ ಕಣ್ಣಂಚಿನಲಿ ತುಳುಕುವಂತೆ, ಸುಳಿಗಾಳಿಯೊಂದಿನಿತು ಸೂಸಿ ಬಂದರೂ ಸಾಕು; ಮರವನಪ್ಪಿದ ಬಳ್ಳಿ ಬಳುಕುವಂತೆ ; ನಾವು ಆಡುವ ಮಾತು ಹೀಗಿರಲಿ ಗೆಳೆಯ, ಮೃದುವಚನ Read More

ಬಾ ಮಲ್ಲಿಗೆ – ಚೆನ್ನವೀರ ಕಣವಿ

ಸಾಹಿತ್ಯ – ಚೆನ್ನವೀರ ಕಣವಿ ಸಂಗೀತ – ಸಿ.ಅಶ್ವಥ್ ಗಾಯಕರು – ಶ್ರೀನಿವಾಸ ಉಡುಪ, ಇಂದು ವಿಶ್ವನಾಥ್ ಹಾಡು ಕೇಳಿ ಬಾ ಮಲ್ಲಿಗೆ ಬಾ ಮೆಲ್ಲಗೆ ನನ್ನೆದೆ ಮೆಲ್ವಾಸಿಗೆ ಇಳಿಗಿಳಿದಿದೆ ಬೆಳುದಿಂಗಳು ನಮ್ಮೊಲುಮೆಯ ಕರೆಗೆ ಚೆಲುವಾಗಿದೆ ಬನವೆಲ್ಲವೂ ಗೆಲುವಾಗಿದೆ ಮನವು ಉಸಿರುಸಿರಿಗೂ ತಂಪೆರಚಿದೆ ನಿನ್ನೆದೆ ಪರಿಮಳವು ತಿಂಗಳ ತನಿವೆಳಕಲಿ ಮೈದೊಳೆದಿಹ ಮನದನ್ನೆ ಮಂಗಳವೀ ಮನೆಯಂಗಳ ಚೆಂಗಲವೆಯ Read More

ಉಷೆಯ ಗೆಳತಿ – ಚೆನ್ನವೀರ ಕಣವಿ

ಸಾಹಿತ್ಯ – ಚೆನ್ನವೀರ ಕಣವಿ ಸಂಗೀತ – ಸಿ.ಅಶ್ವಥ್ ಗಾಯಕ – ಜಿ.ವಿ.ಆತ್ರಿ ಹಾಡು ಕೇಳಿ ಏಳೆನ್ನ ಮನದನ್ನೆ, ಏಳು ಮುದ್ದಿನ ಕನ್ನೆ ಏಳು ಮಂಗಳದಾಯಿ, ಉಷೆಯ ಗೆಳತಿ! ಏಳು ಮುತ್ತಿನ ಚೆಂಡೆ, ಏಳು ಮಲ್ಲಿಗೆ ದಂಡೆ, ಏಳು ಬಣ್ಣದ ಬಿಲ್ಲೇ, ಮಾಟಗಾತಿ! ಏಳೆನ್ನ ಕಲ್ಯಾಣಿ, ಏಳು ಭಾವದ ರಾಣಿ ನೋಡು ಮೂಡಲದಲ್ಲಿ ರಾಗ ಮಿಲನ Read More

ಕರ್ನಾಟಕ – ಚನ್ನವೀರ ಕಣವಿ

ಕವಿ – ಚನ್ನವೀರ ಕಣವಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಹಸಿಗೋಡೆಯ ಹರಳಿನಂತೆ ಹುಸಿಹೋಗದ ಕನ್ನಡ ಹೊಸೆದ ಹಾಗೆ ಹುರಿಗೊಳ್ಳುವ ಗುರಿ ತಾಗುವ ಕನ್ನಡ ಕುರಿತೋದದ ಪರಿಣತಮತಿ ಅರಿತವರಿಗೆ ಹೊಂಗೊಡ ಪಡುಗಡಲಿನ ತೆರೆಗಳಂತೆ ಹೆಡೆ ಬಿಚ್ಚುತ ಮೊರೆಯುವ ಸಹ್ಯಾದ್ರಿಯ ಶಿಖರದಂತೆ ಬಾನೆತ್ತರ ಕರೆಯುವ ಗುಡಿ ಗೋಪುರ ಹೊಂಗಳಸಕೆ ಚೆಂಬೆಳಕಿನ ಕನ್ನಡ ನಮ್ಮೆಲ್ಲರ ಮೈಮನಸಿನ ಹೊಂಗನಸಿನ ಕನ್ನಡ Read More