ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ

ಕವಿ : ಅಂಬಿಕಾತನಯದತ್ತ ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ ಮಿಂಚು ಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟಪೂರ ಅದು ನಮ್ಮ ಊರು ಇದು ನಿಮ್ಮ ಊರು ತಂತಮ್ಮ ಊರು ಧೀರ ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ ಹರಿತದ ಭಾವ ಬೆರಿತದ Read More

ಗಂಗಾವತರಣ – ದ.ರಾ.ಬೇಂದ್ರೆ

ಇಳಿದು ಬಾ ತಾಯಿ ಇಳಿದು ಬಾ ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹಣಿಸಿ ಬಾ ಚರಾಚರಗಳಿಗೆ ಉಣಿಸಿ ಬಾ ಇಳಿದು ಬಾ ತಾಯಿ ಇಳಿದು ಬಾ. ನಿನಗೆ ಪೊಡಮಡುವೆ ನಿನ್ನನುಡುತೊಡುವೆ ಏಕೆ ಎಡೆತಡೆವೆ ಸುರಿದು ಬಾ ಸ್ವರ್ಗ ತೊರೆದು ಬಾ ಬಯಲ ಜರೆದು ಬಾ Read More

ಅವತರಿಸು ಬಾ

ಕವಿ : ಅಂಬಿಕಾತನಯದತ್ತ ಕವನ ಸಂಕಲನ : ಹೃದಯ ಸಮುದ್ರ ೧ ಅವತರಿಸು ಬಾ ನಾರಾಯಣಾ ಎತ್ತೆನ್ನ ಮೇಲಕೆ ಚಿದ್ಘನಾ ಈ ಜೀವವಾಗಲಿ ಪಾವನಾ ೨ ಈ ಪ್ರಾಣ ತನು ಮನ ದೇವನಾ ಹಗಲಿರುಳು ಮಾಡಲಿ ಸೇವನಾ ಅಗಹುದು ಭಗವಜ್ಜೀವನಾ ೩. ಅತ್ಯಂತ ನಿರ್ಮಲ ಪ್ರೇಮವು ಅದು ಸಹಜ ಜೀವನ ಧಾಮವು ಅಲ್ಲಿರುವ ಅನ್ನವೆ ಸೋಮವು

ಚಿರಂತನ

ಕವಿ – ಅಂಬಿಕಾತನಯದತ್ತ ಕವನ ಸಂಕಲನ – ಸಖೀಗೀತ ೧ ಆ ಮುಖಾ . . . ಈ ಮುಖಾ ಯಾವ ಗಂಡೊ ಯಾವ ಹೆಣ್ಣೊ ಪ್ರೀತಿಯೆಂಬ ಚುಂಬಕಾ ಕೂಡಿಸಿತ್ತು ಆಡಿಸಿತ್ತು ಕೂಡಲದೊಲು ನೋಟವಾ ಮೂರು ದಿನದ ಆಟವಾ ೨ ಆ ಮುಖಾ – ಈ ಮುಖಾ ಹೆತ್ತುದೊಂದು ಹೊತ್ತುದೊಂದು ಎಂಥ ಹಾಸ್ಯದೀ ಸುಖಾ ಬೆರಕೆಯಿಂದೊ Read More

ಗಮಗಮಾ ಗಮಾಡಸ್ತಾsವ ಮಲ್ಲಿಗಿ – ಅಂಬಿಕಾತನಯದತ್ತ

ಕವಿ – ಅಂಬಿಕಾತನಯದತ್ತ ಕವನ ಸಂಕಲನ – ಗಂಗಾವತರಣ ಗಾಯಕರು – ವಿಶ್ವೇಶ್, ಅಶ್ವಿನಿ ಆಲ್ಬಮ್ – ಘಮಘಮ ಹಾಡು ಕೇಳಿ ಗಮಗಮಾ ಗಮಾಡಸ್ತಾsವs ಮಲ್ಲಿಗಿ | ನೀ ಹೊರಟಿದ್ದೀಗ ಎಲ್ಲಿಗಿ? ತುಳುಕ್ಯಾಡತಾವ ತೂಕಡಿಕಿ ಎವಿ ಅಪ್ಪತಾವ ಕಣ್ಣ ದುಡುಕಿ ಕನಸು ತೇಲಿ ಬರತಾವ ಹುಡುಕಿ|| ನೀ ಹೊರಟಿದ್ದೀಗ ಎಲ್ಲಿಗಿ ? ಚಿಕ್ಕಿ ತೋರಸ್ತಾವ ಚಾಚಿ Read More