ಕರುಣಾಳು ಬಾ ಬೆಳಕೆ – ಬಿ.ಎಂ.ಶ್ರೀ

ಕರುಣಾಳು, ಬಾ, ಬೆಳಕೇ, ಮುಸುಕಿದೀ ಮಬ್ಬಿನಲಿ,
ಕೈ ಹಿಡಿದು ನಡೆಸೆನ್ನನು.
ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ,
ಕೈ ಹಿಡಿದು ನಡೆಸೆನ್ನನು.
ಹೇಳಿ ನನ್ನಡಿಯಿಡಿಸು; ಬಲು ದೂರ ನೋಟವನು
ಕೇಳೆನೊಡನೆಯೆ-ಸಾಕು ನನಗೊಂದು ಹೆಜ್ಜೆ.

ಮುನ್ನ ಇಂತಿರದಾದೆ; ನಿನ್ನ ಬೇಡದೆ ಹೋದೆ,
ಕೈ ಹಿಡಿದು ನಡೆಸು ಎನುತ.
ನನ್ನ ದಾರಿಯ ನಾನೆ ನೋಡಿ ಹಿಡಿದೆನು; – ಇನ್ನು,
ಕೈ ಹಿಡಿದು ನಡೆಸು ನೀನು.
ಮಿರುಗುಬಣ್ಣಕೆ ಬೆರೆತು, ಭಯಮರೆತು, ಕೊಬ್ಬಿದೆನು;
ಮೆರೆದಾಯ್ತು; ನೆನೆಯದಿರು ಹಿಂದಿನದನೆಲ್ಲ.

ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು; ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು, ಬೆಟ್ಟ ಹೊಳೆಗಳ ಹಾದು,
ಇರುಳನ್ನು ನೂಕದಿಹೆಯಾ?
ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ?
***
ಮೂಲ : John Henry Newman (1801-90), “The Pillar of the Cloud”
ಅನುವಾದ : ಬಿ.ಎಂ.ಶ್ರೀ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಸುರಲೋಕದ ಸುರನದಿಯಲಿ ಮಿಂದುಸುರಲೋಕದ ಸುರನದಿಯಲಿ ಮಿಂದು

ಕವಿ – ಕುವೆಂಪು ಸುರಲೋಕದ ಸುರನದಿಯಲಿ ಮಿಂದು, ಸುರಲೋಕದ ಸಂಪದವನು ತಂದು, ನವ ಸಂವತ್ಸರ ಭೂಮಿಗೆ ಬಂದು ಕರೆಯುತಿದೆ ನಮ್ಮನು ಇಂದು! ಗೀತೆಯ ಘೋಷದಿ ನವ ಅತಿಥಿಯ ಕರೆ; ಹೃದಯ ದ್ವಾರವನಗಲಕೆ ತೆರೆ, ತೆರೆ! ನವ ಜೀವನ ರಸ ಬಾಳಿಗೆ ಬರಲಿ,

ಮರೆತೇನೆಂದರ ಮರೆಯಲಿ ಹ್ಯಾಂಗ? ಮಾವೋ-ತ್ಸೆ-ತುಂಗಮರೆತೇನೆಂದರ ಮರೆಯಲಿ ಹ್ಯಾಂಗ? ಮಾವೋ-ತ್ಸೆ-ತುಂಗ

ಸಾಹಿತ್ಯ, ಸಂಗೀತ : ಡಾ. ಚಂದ್ರಶೇಖರ ಕಂಬಾರ ಕಂಬಾರರ ದನಿಯಲ್ಲಿ ಹಾಡು ಕೇಳಿ ಮರೆತೇನೆಂದರ ಮರೆಯಲಿ ಹ್ಯಾಂಗ ಮಾವೋ-ತ್ಸೆ-ತುಂಗ ಮರೆತೇನೆಂದಾರ ಮರೆಯಲಿ ಹ್ಯಾಂಗ…. ಹಾ ಪಂಚಭೂತದಾಗ ವಂಚನೆ ಕಂಡಿ ಕಣ್ಣಿನಂಚಿನಾಗ ಹೊಸ ಜಗ ಕಂಡಿ ಸೊನ್ನಿಗೆ ಆಕಾರ ಬರೆದೇನೆಂದಿ ಬಯಲಿಗೆ ಗೋಡೆ

ಉಷೆಯ ಗೆಳತಿ – ಚೆನ್ನವೀರ ಕಣವಿಉಷೆಯ ಗೆಳತಿ – ಚೆನ್ನವೀರ ಕಣವಿ

ಸಾಹಿತ್ಯ – ಚೆನ್ನವೀರ ಕಣವಿ ಸಂಗೀತ – ಸಿ.ಅಶ್ವಥ್ ಗಾಯಕ – ಜಿ.ವಿ.ಆತ್ರಿ ಹಾಡು ಕೇಳಿ ಏಳೆನ್ನ ಮನದನ್ನೆ, ಏಳು ಮುದ್ದಿನ ಕನ್ನೆ ಏಳು ಮಂಗಳದಾಯಿ, ಉಷೆಯ ಗೆಳತಿ! ಏಳು ಮುತ್ತಿನ ಚೆಂಡೆ, ಏಳು ಮಲ್ಲಿಗೆ ದಂಡೆ, ಏಳು ಬಣ್ಣದ ಬಿಲ್ಲೇ,