ಕವಿ – ಪುತಿನ
ಲಘುವಾಗೆಲೆ ಮನ ಗೆಲವಾಗೆಲೆ ಮನ
ಹಾರು ನನ್ನ ಬಿಟ್ಟು ಹಾರಿ ಹರಿಯ ಮುಟ್ಟು
ನನಗಂಟಲು ನೀನಾಗುವೆ ಕಷ್ಮಲ
ನನ್ನ ತೊರೆಯೆ ನೀ ನಿರ್ಮಲ ನಿಷ್ಕಳ
ಹರಿಯೊ ನನ್ನ ಬಿಟ್ಟು
ಮುಂಬರಿದು ಹರಿಯ ಮುಟ್ಟು
ನೀಲದಾಗಸದ ಹರಹೊಳು ಹಾರುತ
ಅಂಚೆಯಂತೆ ಮುಗಿಲಂಚನು ಸೇರುತ
ಕ್ಷೀರಾಬ್ಧಿಶಾಯಿ ಶಾಮಸುಂದರನ
ಉಸಿರೊಳಾಡು ನೀ ಅವನುಸಿರಾಗುತ
ಬೆಳಕಿಗೊಲಿದು ಬಿರಿದಲರಿನಲರುಬರೆ
ಪೋಗುಸಂಗಡೆಲೆ ನೀ ಮನವೆ
ಮುಗ್ಧರುಲಿವ ನಗೆ ಮಾತುಗಳಾಲಿಸಿ
ನಂದಗೋಕುಲವ ನೆನೆ ಮನವೆ
***************
ಡಾ. ರಾಜಕುಮಾರ್ ದನಿಯಲ್ಲಿ ಹಾಡು ಕೇಳಿ:-