ಹಸಿರು ಗಾಜಿನ ಬಳೆಗಳೇ, ಸ್ತ್ರೀ ಕುಲದ ಶುಭ ಸ್ವರಗಳೇ

ಚಿತ್ರ : ಅವನೇ ನನ್ನ ಗಂಡ
ಸಾಹಿತ್ಯ, ಸಂಗೀತ : ಹಂಸಲೇಖ
ಗಾಯಕಿ : ಲತಾ ಹಂಸಲೇಖ

ಹಸಿರು ಗಾಜಿನ ಬಳೆಗಳೇ
ಸ್ತ್ರೀ ಕುಲದ ಶುಭ ಸ್ವರಗಳೇ
ಈ ಕೈಗಳಿಗೆ ಶೃಂಗಾರವೇ
ನೀವ್ ಘಲ್ಲೆಂದರೆ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮಾ ||ಪಲ್ಲವಿ||

ತೊಟ್ಟಿಲಿನ ಕೂಸಿಗೆ ದೃಷ್ಟಿ ಇದು ತಾನೇ?
ಮೊಡವೆಯ ವಯಸಿಗೆ ಒಡವೆ ಇದು ತಾನೇ?

ಕಾಮನ ಬಿಲ್ಲಿಗೂ ಇದರ ಸಾಟಿ ನಿಲ್ಲದು
ಋಷಿಗಳ ಸಂಯಮ ಇದರ ಮುಂದೆ ನಿಲ್ಲದು

ಸ್ತ್ರೀ ಕುಲದ ಸೌಭಾಗ್ಯವೇ ನಿಮ್ಮ ರೂಪವು
ಓ ಓ ಓ ಓ ಓ… ಲಾ ಲಾ ಲಾ ||-1-||

ಋತುಗಳ ಜೊತೆಯಲಿ ಬದುಕು ನಡೆವಾಗ
ಬದುಕಿನ ನೆರಳಲಿ ಹೆಣ್ಣು ನಡೆವಾಗ

ಪ್ರೇಮದ ಪ್ರಣಯದ ನಡುವೆ ನಿನ್ನ ನಗುವಿದೆ
ಸಾವಿನ ನೋವಿನ ನಡುವೆ ನಿನ್ನ ಅಳುವಿದೆ

ಸ್ತ್ರೀ ಕುಲದ ಸೌಭಾಗ್ಯವೇ ನಿಮ್ಮ ರೂಪವು
ಓ ಓ ಓ ಓ ಓ… ಲಾ ಲಾ ಲಾ ||-2-||

1 thought on “ಹಸಿರು ಗಾಜಿನ ಬಳೆಗಳೇ, ಸ್ತ್ರೀ ಕುಲದ ಶುಭ ಸ್ವರಗಳೇ”

  1. ತುಂಬಾ ಒಳ್ಳೆಯ ಗೀತೆ ತ್ರಿವೇಣಿ ಅಕ್ಕ.

    ಈ ಚಿತ್ರಕ್ಕೆ ಛಾಯಾಗ್ರಹಕರು ದಿ|| ಮಲ್ಲಿಕಾರ್ಜುನ ಅವರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಅನುರಾಗದ ಅಲೆಗಳು – ಜೀವಕೋಗಿಲೆಅನುರಾಗದ ಅಲೆಗಳು – ಜೀವಕೋಗಿಲೆ

ಚಿತ್ರ – ಅನುರಾಗದ ಅಲೆಗಳು -೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಡಾ. ರಾಜ್‍ಕುಮಾರ್ ಹಾಡು ಕೇಳಿ – ಜೀವಕೋಗಿಲೆ ಇಂಚರ ಅದಕೆ ದೇಹವೆಂಬುದೇ ಪಂಜರ ಜೀವಕೋಗಿಲೆ ಇಂಚರ ಅದಕೆ ದೇಹವೆಂಬುದೇ ಪಂಜರ ಇಂಚರ ಕೇಳಲು ಪಂಜರ ಅವಸರ

ಮಣ್ಣಿನ ದೋಣಿ – ಮಳೆ ಮಳೆಮಣ್ಣಿನ ದೋಣಿ – ಮಳೆ ಮಳೆ

ಚಿತ್ರ – ಮಣ್ಣಿನದೋಣಿ – ೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರ ಹಾಡು ಕೇಳಿ ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ

ಬೆಳ್ಳಿ ಕಾಲುಂಗುರ – ಚಂದಮಾಮಾಬೆಳ್ಳಿ ಕಾಲುಂಗುರ – ಚಂದಮಾಮಾ

ಚಿತ್ರ – ಬೆಳ್ಳಿ ಕಾಲುಂಗುರ (೧೯೯೨) ಸಾಹಿತ್ಯ – ಹಂಸಲೇಖ ಸಂಗೀತ – ಹಂಸಲೇಖ ಗಾಯಕರು – ಎಸ್.ಪಿ. ಬಾಲಸುಬ್ರಹ್ಮಣ್ಯಮ್ ಮತ್ತು ಚಿತ್ರ ಹಾಡು ಕೇಳಿ ಮಾಮ ಮಾಮ ಚಂದಮಾಮಾ ಚಂದವಳ್ಳಿ ಹೆಣ್ಣು ನಾನು ಚಂದವೇನು ನಿನಗೆ ನಾನು? ರಾಮಾ ರಾಮಾ