ಹಸಿರು ಗಾಜಿನ ಬಳೆಗಳೇ, ಸ್ತ್ರೀ ಕುಲದ ಶುಭ ಸ್ವರಗಳೇ

ಚಿತ್ರ : ಅವನೇ ನನ್ನ ಗಂಡ
ಸಾಹಿತ್ಯ, ಸಂಗೀತ : ಹಂಸಲೇಖ
ಗಾಯಕಿ : ಲತಾ ಹಂಸಲೇಖ

ಹಸಿರು ಗಾಜಿನ ಬಳೆಗಳೇ
ಸ್ತ್ರೀ ಕುಲದ ಶುಭ ಸ್ವರಗಳೇ
ಈ ಕೈಗಳಿಗೆ ಶೃಂಗಾರವೇ
ನೀವ್ ಘಲ್ಲೆಂದರೆ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮಾ ||ಪಲ್ಲವಿ||

ತೊಟ್ಟಿಲಿನ ಕೂಸಿಗೆ ದೃಷ್ಟಿ ಇದು ತಾನೇ?
ಮೊಡವೆಯ ವಯಸಿಗೆ ಒಡವೆ ಇದು ತಾನೇ?

ಕಾಮನ ಬಿಲ್ಲಿಗೂ ಇದರ ಸಾಟಿ ನಿಲ್ಲದು
ಋಷಿಗಳ ಸಂಯಮ ಇದರ ಮುಂದೆ ನಿಲ್ಲದು

ಸ್ತ್ರೀ ಕುಲದ ಸೌಭಾಗ್ಯವೇ ನಿಮ್ಮ ರೂಪವು
ಓ ಓ ಓ ಓ ಓ… ಲಾ ಲಾ ಲಾ ||-1-||

ಋತುಗಳ ಜೊತೆಯಲಿ ಬದುಕು ನಡೆವಾಗ
ಬದುಕಿನ ನೆರಳಲಿ ಹೆಣ್ಣು ನಡೆವಾಗ

ಪ್ರೇಮದ ಪ್ರಣಯದ ನಡುವೆ ನಿನ್ನ ನಗುವಿದೆ
ಸಾವಿನ ನೋವಿನ ನಡುವೆ ನಿನ್ನ ಅಳುವಿದೆ

ಸ್ತ್ರೀ ಕುಲದ ಸೌಭಾಗ್ಯವೇ ನಿಮ್ಮ ರೂಪವು
ಓ ಓ ಓ ಓ ಓ… ಲಾ ಲಾ ಲಾ ||-2-||

1 thought on “ಹಸಿರು ಗಾಜಿನ ಬಳೆಗಳೇ, ಸ್ತ್ರೀ ಕುಲದ ಶುಭ ಸ್ವರಗಳೇ”

  1. ತುಂಬಾ ಒಳ್ಳೆಯ ಗೀತೆ ತ್ರಿವೇಣಿ ಅಕ್ಕ.

    ಈ ಚಿತ್ರಕ್ಕೆ ಛಾಯಾಗ್ರಹಕರು ದಿ|| ಮಲ್ಲಿಕಾರ್ಜುನ ಅವರು.

Leave a Reply to Palavalli Badarinath Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಚಿಗುರಿದ ಕನಸು – ಓ ಬಂಧುವೇ..ಚಿಗುರಿದ ಕನಸು – ಓ ಬಂಧುವೇ..

ಚಿತ್ರ – ಚಿಗುರಿದ ಕನಸು- (೨೦೦೩) ಸಾಹಿತ್ಯ – ಜಯಂತ್ ಕಾಯ್ಕಿಣಿ ಸಂಗೀತ – ವಿ.ಮನೋಹರ್ ಗಾಯಕ – ಡಾ.ರಾಜ್‍ಕುಮಾರ್ ಹಾಡು ಕೇಳಿ – ಬಂಧುವೇ.. ಓ ಬಂಧುವೇ… ಗಂಗವ್ವಾ ಗಂಗಾಮಾಯಿ ಮಮತೆಯ ಧಾರೆ ಗುರಿಯಿರದೆ ಅಲೆವ ನನ್ನ ಮೂಲವ ತೋರೆ

ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ-ಶರಪಂಜರಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ-ಶರಪಂಜರ

ಚಿತ್ರ : ಶರಪಂಜರ ಗಾಯಕಿ – ಪಿ.ಸುಶೀಲ ಸಾಹಿತ್ಯ – ಕಣಗಾಲ್ ಪ್ರಭಾಕರ್ ಶಾಸ್ತ್ರಿ ಸಂಗೀತ – ವಿಜಯ ಭಾಸ್ಕರ್ ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ ಶ್ರೀರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯಾ ||ಪಲ್ಲವಿ|| ಮುತ್ತುಗದ ಹೂವು ಮಲ್ಲಿಗೆಯೇ ? ಅತ್ತಿಯ ಹಣ್ಣು ಅಂಜೂರವೇ?

ಹೂವು ಹಣ್ಣು – ನಿಂಗಿ ನಿಂಗಿಹೂವು ಹಣ್ಣು – ನಿಂಗಿ ನಿಂಗಿ

ಹೂವು ಹಣ್ಣು -೧೯೯೬ ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯಕ: ಸಿ. ಅಶ್ವಥ್ ಮತ್ತು ಸಂಗಡಿಗರು ಹಾಡು ಕೇಳಿ –  ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್ಯಾರೆ ಹೊಯ್ ನಿಂಗಿ ನಿಂಗಿ ನಿಂಗಿ ನಿಂಗಿ ನಿದ್ದಿ ಕದ್ದೀಯಲ್ಲೆ ನಿಂಗಿ ನಿಂಗಿ