ದಾಸೋಹಂ ತವ ದಾಸೋಹಂ

ದಾಸೋಹಂ ತವ ದಾಸೋಹಂ ತವ
ದಾಸೋಹಂ ತವ ದಾಸೋಹಂ ||ಪಲ್ಲವಿ||
ವಾಸುದೇವ ವಿಗತಾಘಸಂಘ ತವ ||ಅನು ಪಲ್ಲವಿ||

ಜೀವಾಂತರ್ಗತ ಜೀವ ನಿಯಾಮಕ
ಜೀವ ವಿಲಕ್ಷಣ ಜೀವನದ
ಜೀವಾಧಾರಕ ಜೀವರೂಪಿ ರಾ-
ಜೀವ ಭವಜನಕ ಜೀವೇಶ್ವರ ತವ ||೧||

ಕಾಲಾಂತರ್ಗತ ಕಾಲನಿಯಮಕ
ಕಾಲಾತೀತ ತ್ರಿಕಾಲಜ್ಞ
ಕಾಲ ಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲಮೂರ್ತಿ ತವ ||೨||

ಕರ್ಮಕರ್ಮಕೃತ ಕರ್ಮಕೃತಾಗಮ
ಕರ್ಮ ಫಲಪ್ರದ ಕರ್ಮಜಿತ
ಕರ್ಮಬಂಧ ಮಹ ಕರ್ಮವಿಮೋಚಕ
ಕರ್ಮನಿಗ್ರಹ ಕರ್ಮಸಾಕ್ಷಿ ತವ ||೩||

ಧರ್ಮಯೂಪ ಮಹ ಧರ್ಮವಿವರ್ಧನ
ಧರ್ಮವಿದೊತ್ತಮ ಧರ್ಮನಿಧೇ
ಧರ್ಮಸೂಕ್ಷ್ಮ ಮಹ ಧರ್ಮಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮಪುತ್ರ ತವ || ೪||

ಮಂತ್ರಯಂತ್ರ ಮಹ ಮಂತ್ರ ಬೀಜ ಮಹ
ಮಂತ್ರ ರಾಜಗುರು ಮಂತ್ರಧೃತ
ಮಂತ್ರಮೇಯ ಮಹ ಮಂತ್ರನಿಯಾಮಕ
ಮಂತ್ರದೇವ ಜಗನ್ನಾಥ ವಿಠಲ ತವ ||೫||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ದಯವಿರಲಿ ದಯವಿರಲಿ ದಾಮೋದರ – Dayavirali Damodaraದಯವಿರಲಿ ದಯವಿರಲಿ ದಾಮೋದರ – Dayavirali Damodara

ರಚನೆ : ಗೋಪಾಲದಾಸರು ದಯವಿರಲಿ ದಯವಿರಲಿ ದಾಮೋದರ ರಚನೆ – ಗೋಪಾಲದಾಸರು ದಯವಿರಲಿ ದಯವಿರಲಿ ದಾಮೋದರ ||ಪಲ್ಲವಿ|| ಸಯವಾಗಿ ಬಿಡದೆನ್ನ ಸಾಕುವ ಶ್ರೀಕೃಷ್ಣ ||ಅನು ಪಲ್ಲವಿ|| ಹೋಗುವ ಹಾದಿಯಲಿ ಹೋದ ಹಾಗೆಲ್ಲ ನಾ ಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟು ತೂಗಿ

ಹೊನ್ನು ತಾ ಗುಬ್ಬಿ ಹೊನ್ನು ತಾಹೊನ್ನು ತಾ ಗುಬ್ಬಿ ಹೊನ್ನು ತಾ

ರಚನೆ – ಹೆಳವನಕಟ್ಟೆ ಗಿರಿಯಮ್ಮ ಪುತ್ತೂರು ನರಸಿಂಹ ನಾಯಕ್ ಮಾಧವ ಗುಡಿ ಜಿ. ವಿ. ಅತ್ರಿ ಹೊನ್ನು ತಾ ಗುಬ್ಬಿ ಹೊನ್ನು ತಾ ನಮ್ಮ ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ ||ಪ|| ಆಗಮವನು ತಂದು ಜಗಕಿತ್ತ ಕೈಗೆ ಸಾಗರವ ಮಥಿಸಿ

ಕಟಿಯಲ್ಲಿ ಕರವಿಟ್ಟನೊ ಪಂಢರಿರಾಯಕಟಿಯಲ್ಲಿ ಕರವಿಟ್ಟನೊ ಪಂಢರಿರಾಯ

ರಚನೆ – ಪುರಂದರದಾಸರು ಹಾಡು ಕೇಳಿ – ವಿದ್ಯಾಭೂಷಣ ಹುಸೇನ್ ಸಾಹೇಬ್ ಕಟಿಯಲ್ಲಿ ಕರವಿಟ್ಟನೊ ಪಂಢರಿರಾಯ ಕಟಿಯಲ್ಲಿ ಕರವಿಟ್ಟನೊ ||ಪಲ್ಲವಿ|| ಗೊಲ್ಲ ಬಾಲಕರೊಡಗೂಡಿ ತಾ ಬಂದು ಗೊಲ್ಲತಿಯರ ಮನೆ ಕದ್ದು ಬೆಣ್ಣೆಯ ತಿಂದು ಬಲ್ಲಿದ ತೃಣಾವರ್ತ ಮೊದಲಾದ ಅಸುರರ ಮೆಲ್ಲನೆ ಕೊಂದಾಯಾಸದಿಂದಲೋ