ಚಿತ್ರ – ಆಟೋಗ್ರಾಫ್ ಪ್ಲೀಸ್ -೨೦೦೫
ಗಾಯಕರು : ರಾಜೇಶ್,ನಂದಿತಾ
ಸಾಹಿತ್ಯ : ಪ್ರಕಾಶ್
ಸಂಗೀತ : ಅರ್ಜುನ್
ಹೃದಯ ಮಾತಾಡುವ ವೇಳೆಯಲ್ಲಿ
ಮಾತು ಬರದಾಗಿದೆ ತುಟಿಗಳಲ್ಲಿ
ಮಾತು ನಿಜವಾಗದೆ
ಮೂಕವಾಯ್ತು ಪ್ರೀತಿ ಇಲ್ಲಿ
ಹೃದಯ ಮಾತಾಡುವ ವೇಳೆಯಲ್ಲಿ
ಎಂದೋ ಕಂಡಾ ಆ ಕನಸು
ಇನ್ನು ಬರೀ ಕನಸು
ಇದೇ ಕನಸಿಗಾಗಿ
ಇದೆ ಎರಡು ಮನಸು
ಪ್ರತಿ ಕ್ಷಣ ನೆನಪಿರಬೇಕು
ಪ್ರತಿ ದಿನ ಜೊತೆಗಿರಬೇಕು
ಹೆಜ್ಜೆ ಹೆಜ್ಜೆ ಸೇರಲೇ ಬೇಕು ಉಸಿರಾಗಿ
ಹೃದಯ ಮಾತಾಡುವ ವೇಳೆಯಲ್ಲಿ
ಮಾತು ಬರದಾಗಿದೆ |
ಪ್ರೀತಿ ಒಂದು ಸಂಗೀತ
ರಾಗ ತಾಳ ನೂರು
ಗೊತ್ತೇ ಇರದ ಲೋಕದಲಿ
ಕೇಳೋರಿಲ್ಲಿ ಯಾರು?
ಕಾಲ ಒಂದು ಕನ್ನಡಿಯಂತೆ
ನಾನು ನೀನು ಬಿಂಬಗಳಂತೆ
ಪ್ರತಿ ಬಿಂಬದಲ್ಲೂ ಒಂದೇ ಪ್ರತಿಬಿಂಬ
ಹೃದಯ ಮಾತಾಡುವ ವೇಳೆಯಲ್ಲಿ
ಮಾತು ಬರದಾಗಿದೆ ತುಟಿಗಳಲ್ಲಿ
ಮಾತು ನಿಜವಾಗದೆ
ಮೂಕವಾಯ್ತು ಪ್ರೀತಿ ಇಲ್ಲಿ
ಹೃದಯ ಮಾತಾಡುವ ವೇಳೆಯಲ್ಲಿ|
ಈ ಹೃದಯದ್ದು ಯಾವಾಗಲೂ ಇದೇ ಗೋಳು ಕಣ್ರೀ !
ಅದು ಮಾತಾಡೋಗಾ ಬೇರೆ ಯಾರಿಗೂ ಕೇರ್ ಮಾಡೋಲ್ಲ..
ತಾನು ಮಾಡಿದ್ದೆ ಸರಿ ಅಂತಾ ಹುಂಬತನ ಬೇರೆ 🙂
ಚೆನ್ನಾಗಿದೆ ಹಾಡು..
ಶಿವು, ಈ ಕಾಮೆಂಟ್ ನೋಡಿದ ಮೇಲೆ ಮತ್ತು ನಿಮ್ಮ ಈ ಪೋಸ್ಟ್ ನೋಡಿದ ಮೇಲೆ ನಿಮ್ಮ ಹೃದಯ ಬಹಳ ಮಾತಾಡತೊಡಗಿದೆ ಅಂತ ಗ್ಯಾರಂಟಿ ಆಯಿತು 🙂