ಶೃಂಗಾರ ಕಾವ್ಯ – ಶೃಂಗಾರ ಕಾವ್ಯ ಬರೆದನು

ಚಿತ್ರ – ಶೃಂಗಾರ ಕಾವ್ಯ – ೧೯೯೩
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕ – ಎಲ್.ಎನ್. ಶಾಸ್ತ್ರಿ

ಹಾಡು ಕೇಳಿ

ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಉಸಿರ ಹಿಡಿದ
ತಂತಿ ಕಡಿದ
ಇನ್ನು ಮೌನ ಗಾನವೇ |

ಕಲೆಗಾರ ಕಡೆದು ಕರುಬಿದ
ಕಥೆಗಾರ ಕಥೆಯ ಕೆಡಿಸಿದ
ಹೊಣೆಗಾರ ಹರಸಿ ಹಲುಬಿದ
ಬೆಳೆಗಾರ ಬರವ ಬರಿಸಿದ
ಕನಸು ಸುರಿದ
ಕಣ್ಣೇ ತೆಗೆದ
ಇನ್ನು ಶೂನ್ಯ ಗಾನವೇ ||೧||

ವರವಾಗಿ ಒಲವ ತಂದನು
ಮರವಾಗೋ ಗಿಡವ ಕಡಿದನು
ಶುಭವಾಗಲೆಂದು ನುಡಿದನು
ಸುಖ ಕಾಣುವಾಗ ಮುನಿದನು
ಜಯವ ಕಡೆದ
ಭಯವ ಸುರಿದ
ಇನ್ನು ಶೋಕ ಗಾನವೇ ||೨||

***

5 thoughts on “ಶೃಂಗಾರ ಕಾವ್ಯ – ಶೃಂಗಾರ ಕಾವ್ಯ ಬರೆದನು”

  1. kaloo says:

    ಹದಿಮೂರ್ ವರ್ಷಾ ಆತೇನ್ರಿ ಈ ಹಾಡ್ ಬರದೂ, ಹಂಸಣ್ಣನಿಗೆ ಜಿಂದಾಬಾದ್!

  2. Shiv says:

    ತ್ರಿವೇಣಿಯವರೇ,
    ನೀವು ಎಲ್ಲಿಂದ ಹೆಕ್ಕಿ ತರತೀರಾ ಈ ಎಲ್ಲಾ ಹಾಡುಗಳು !
    ಒಂದೊಂದು ಒಂದು ಭಾವನೆಯ ಅಲೆ ಎಬ್ಬಿಸುತ್ತವೆ..

  3. sritri says:

    ಕಾಳಣ್ಣಾ, ಹಂಸಣ್ಣನಿಗೆ ನಂದೂ ಒಂದು ಜಿಂದಾಬಾದ್ ನಿಮ್ಮ ಜೊತೆಗೆ 🙂

  4. Jyothi says:

    ವೇಣಿ, “ಕಾಡುವ ಹಾಡುಗಳು” ಅಂತನೇ ಒಂದು ವಿಭಾಗ ಮಾಡಿಬಿಡು, ಚೆನ್ನಾಗಿರತ್ತೆ.

  5. venky says:

    ತುಂಂಂಂಂಂಂಂಂಂಂಬಾ ಭಾವನಾತ್ಮಕವಾಗಿದೆ. ಹಂಸಣ್ಣ ಆಲ್ವೇಸ ಗ್ರೇಟ್…

Leave a Reply to kaloo Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಮಿಡಿದ ಹೃದಯಗಳು – ಚಂದದ ಚಂದನದಿಂದಮಿಡಿದ ಹೃದಯಗಳು – ಚಂದದ ಚಂದನದಿಂದ

ಮಿಡಿದ ಹೃದಯಗಳು (೧೯೯೩) – ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಎಸ್.ಪಿ.ಬಾಲಸುಬ್ರಹ್ಮಣ್ಯ, ಚಿತ್ರಾ ಹಾಡು ಕೇಳಿ ಚಂದದ ಚಂದನದಿಂದ ಕೊರೆದ ಗೊಂಬೆಯ ಅಂದಚಂದ ಘಮಘಮ ಬೊಂಬೆ ಹಿಡಿದರೆ ಸರಿಗಮ ಬೊಂಬೆ ನುಡಿದರೆ ||ಪ||ತುಂಬಿರುವ ತುಂಗೆ ನೀನು ಸೌಂದರ್ಯ

ಆಕಸ್ಮಿಕ – ಹುಟ್ಟಿದರೆ ಕನ್ನಡನಾಡಲ್ಲಿಆಕಸ್ಮಿಕ – ಹುಟ್ಟಿದರೆ ಕನ್ನಡನಾಡಲ್ಲಿ

ಆಕಸ್ಮಿಕ – ೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಡಾ.ರಾಜ್‍ಕುಮಾರ್ ಹಾಡು ಕೇಳಿ    ಹೇ ಹೇ ಬಾಜೂ.. ಲಾಲ ತಗಡಗ ಲಾಲ ತಗಗಡ ಹೇ ಹೇ … ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ

ಆಟೋಗ್ರಾಫ್ ಪ್ಲೀಸ್ – ಹೃದಯ ಮಾತಾಡುವ ವೇಳೆಯಲ್ಲಿಆಟೋಗ್ರಾಫ್ ಪ್ಲೀಸ್ – ಹೃದಯ ಮಾತಾಡುವ ವೇಳೆಯಲ್ಲಿ

ಚಿತ್ರ – ಆಟೋಗ್ರಾಫ್ ಪ್ಲೀಸ್ -೨೦೦೫  ಗಾಯಕರು : ರಾಜೇಶ್,ನಂದಿತಾ ಸಾಹಿತ್ಯ : ಪ್ರಕಾಶ್ ಸಂಗೀತ : ಅರ್ಜುನ್ ಹಾಡು ಕೇಳಿ ಹೃದಯ ಮಾತಾಡುವ ವೇಳೆಯಲ್ಲಿ ಮಾತು ಬರದಾಗಿದೆ ತುಟಿಗಳಲ್ಲಿ ಮಾತು ನಿಜವಾಗದೆ ಮೂಕವಾಯ್ತು ಪ್ರೀತಿ ಇಲ್ಲಿ ಹೃದಯ ಮಾತಾಡುವ ವೇಳೆಯಲ್ಲಿ