ಶೃಂಗಾರ ಕಾವ್ಯ – ಶೃಂಗಾರ ಕಾವ್ಯ ಬರೆದನು

ಚಿತ್ರ – ಶೃಂಗಾರ ಕಾವ್ಯ – ೧೯೯೩
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕ – ಎಲ್.ಎನ್. ಶಾಸ್ತ್ರಿ

ಹಾಡು ಕೇಳಿ

ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಉಸಿರ ಹಿಡಿದ
ತಂತಿ ಕಡಿದ
ಇನ್ನು ಮೌನ ಗಾನವೇ |

ಕಲೆಗಾರ ಕಡೆದು ಕರುಬಿದ
ಕಥೆಗಾರ ಕಥೆಯ ಕೆಡಿಸಿದ
ಹೊಣೆಗಾರ ಹರಸಿ ಹಲುಬಿದ
ಬೆಳೆಗಾರ ಬರವ ಬರಿಸಿದ
ಕನಸು ಸುರಿದ
ಕಣ್ಣೇ ತೆಗೆದ
ಇನ್ನು ಶೂನ್ಯ ಗಾನವೇ ||೧||

ವರವಾಗಿ ಒಲವ ತಂದನು
ಮರವಾಗೋ ಗಿಡವ ಕಡಿದನು
ಶುಭವಾಗಲೆಂದು ನುಡಿದನು
ಸುಖ ಕಾಣುವಾಗ ಮುನಿದನು
ಜಯವ ಕಡೆದ
ಭಯವ ಸುರಿದ
ಇನ್ನು ಶೋಕ ಗಾನವೇ ||೨||

***

5 thoughts on “ಶೃಂಗಾರ ಕಾವ್ಯ – ಶೃಂಗಾರ ಕಾವ್ಯ ಬರೆದನು”

  1. kaloo says:

    ಹದಿಮೂರ್ ವರ್ಷಾ ಆತೇನ್ರಿ ಈ ಹಾಡ್ ಬರದೂ, ಹಂಸಣ್ಣನಿಗೆ ಜಿಂದಾಬಾದ್!

  2. Shiv says:

    ತ್ರಿವೇಣಿಯವರೇ,
    ನೀವು ಎಲ್ಲಿಂದ ಹೆಕ್ಕಿ ತರತೀರಾ ಈ ಎಲ್ಲಾ ಹಾಡುಗಳು !
    ಒಂದೊಂದು ಒಂದು ಭಾವನೆಯ ಅಲೆ ಎಬ್ಬಿಸುತ್ತವೆ..

  3. sritri says:

    ಕಾಳಣ್ಣಾ, ಹಂಸಣ್ಣನಿಗೆ ನಂದೂ ಒಂದು ಜಿಂದಾಬಾದ್ ನಿಮ್ಮ ಜೊತೆಗೆ 🙂

  4. Jyothi says:

    ವೇಣಿ, “ಕಾಡುವ ಹಾಡುಗಳು” ಅಂತನೇ ಒಂದು ವಿಭಾಗ ಮಾಡಿಬಿಡು, ಚೆನ್ನಾಗಿರತ್ತೆ.

  5. venky says:

    ತುಂಂಂಂಂಂಂಂಂಂಂಬಾ ಭಾವನಾತ್ಮಕವಾಗಿದೆ. ಹಂಸಣ್ಣ ಆಲ್ವೇಸ ಗ್ರೇಟ್…

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ರಾಮನ ಅವತಾರ ರಘುಕುಲ ಸೋಮನ ಅವತಾರ!ರಾಮನ ಅವತಾರ ರಘುಕುಲ ಸೋಮನ ಅವತಾರ!

ಚಿತ್ರ :  ಭೂಕೈಲಾಸ (೧೯೫೮) ಸಾಹಿತ್ಯ : ಕು.ರಾ.ಸೀತಾರಾಮಶಾಸ್ತ್ರಿ ಸಂಗೀತ : ಆರ್. ಗೋವರ್ಧನ್, ಆರ್.ಸುದರ್ಶನಂ ಗಾಯಕ : ಶಿರ್ಕಾಳಿ ಗೋವಿಂದರಾಜನ್ ಹಾಡು ಕೇಳಿ ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ? ಜಾರತನ ಸದೆಬಡಿವ ಸಂಭ್ರಮದ ನೆಪವೋ? ರಾಮನ ಅವತಾರ ರಘುಕುಲ ಸೋಮನ

ನೀಲಾ – ಆ ಮೇರು ಈ ಮೇರುನೀಲಾ – ಆ ಮೇರು ಈ ಮೇರು

ನೀಲಾ : ೨೦೦೧ ಗಾಯಕರು : ರಾಜೇಶ್, ವಾಣಿ ಜಯರಾಂ ಸಂಗೀತ : ವಿಜಯ ಭಾಸ್ಕರ್ ಸಾಹಿತ್ಯ: ಕೋಟಿಗಾನಹಳ್ಳಿ ರಾಮಯ್ಯ ಹಾಡು ಕೇಳಿ – ಆ ಮೇರು ಈ ಮೇರು ಆಸೆಯ ಹೂ ತೇರು ಎಳೆ ಎಳೆಯೋ ಬಸವಣ್ಣಾ ತುಂಬೈತೆ ಕಣ್ಣಾ..

ಚಂದ್ರೋದಯ -ಓಹೋ ಚಂದ್ರಮಚಂದ್ರೋದಯ -ಓಹೋ ಚಂದ್ರಮ

ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯಕ : ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡು ಕೇಳಿ     ಓಹೋ ಚಂದ್ರಮ, ಕೇಳಯ್ಯಾ ಚಂದ್ರಮ ಒಲವಿನ ಕತೆಯ ಒಲ್ಲದ ಒಲವಿನಲಿ ಬಾಳುವ ಈ ಜೊತೆಯ ||ಪ|| ಗುಲಾಬಿ ಹೂವಿನಲ್ಲಿ ಅದೇಕೋ ನಗುವೇ ಇಲ್ಲ ಮುಳ್ಳಿಂದ ಮುತ್ತಿನೆಡೆಗೆ ಅದೇಕೋ