ಆನಂದತೀರ್ಥ ವಿರಚಿತ ದ್ವಾದಶಸ್ತೋತ್ರ
ಕನ್ನಡ ಅನುವಾದ : ಬನ್ನಂಜೆ ಗೋವಿಂದಾಚಾರ್ಯ
ಓ ಸಂತಸದ ಸೆಲೆಯೆ ಬಿಡುಗಡೆಯ ನೀವವನೆ | ಓ ಅರಳುದಾವರೆಯ ಕಂಗಳವನೆ
ಆನಂದತೀರ್ಥರಿಗೆ ತುಂಬು ಸಂತಸವೆಂಬ | ವರವಿತ್ತ ದೈವತವೆ ನಿನಗೆ ನಮನಂ ||
ಬಗೆಯ ಸುಂದರಿಯನ್ನು ಎದೆಯಲ್ಲಿ ಹೊತ್ತವನೆ | ಓ ಗೋವಿಂದನೆ ನಿನಗೆ ನಮನಂ ||
ಬಗೆಯ ಬೆಳಗುವ ಚಂದ್ರ ಸುರರನಾಳುವ ಇಂದ್ರ | ಇವರಿಂದ ವಂದಿತನೆ ನಿನಗೆ ನಮನಂ ||
ಚಂದಿರನ ಹೊತ್ತಿರುವ ನವಿಲ ಸೋಗೆಯ ತೊಟ್ಟು | ಜಗಕೆ ಸಂತಸವೀವ ನಿನಗೆ ನಮನಂ ||
ದೇವಲೋಕದ ಎಲ್ಲ ಸಗ್ಗಿಗರ ಗಢಣವು | ಭಕ್ತಿಯಿಂದೆರಗುತಿಹ ನಿನಗೆ ನಮನಂ ||
ನಿನ್ನೆಡೆಗೆ ಹರಿದು ಬಹ ಸುರರೆಡೆಗೆ ಕಾರುಣ್ಯ | ರಸವನ್ನು ಸುರಿಸುತಿಹ ನಿನಗೆ ನಮನಂ ||
ಇಂದಿರೆಯ ಬಗೆಯಲ್ಲಿ ಸಂತಸವನುಕ್ಕಿಸುವ | ಲೋಕೈಕ ಸುಂದರನೆ ನಿನಗೆ ನಮನಂ ||
ಮಂದಾರದರಳುಗಳು ಚೆಲ್ಲಿ ಪರಿಮಳಿಸುತಿಹ | ಮಂದಿರದಲ್ಲಿರುವವನೆ ನಿನಗೆ ನಮನಂ ||
ಸಂತಸದ ಹೊನಲೆಂಬ ಚೆಲ್ವ ಬೆಳದಿಂಗಳನು | ನಮ್ಮೆಡೆಗೆ ಹರಿಯಿಸುವ ನಿನಗೆ ನಮನಂ ||
ಆನಂದತೀರ್ಥರಿಗೆ ತುಂಬು ಸಂತಸವೆಂಬ ವರವಿತ್ತ ದೈವತವೆ ನಿನಗೆ ನಮನಂ ||
================================================
Eee dinada Prajavaniyalli idara bagge tilede.Tumba santosha haagu hemmeyaayitu.Nimage dhanyavadagalu
Beautiful ! Melodious !
please contact us on 9980201500 or shriharink@gmail.com