ಆನಂದತೀರ್ಥರಿಗೆ ತುಂಬು ಸಂತಸವೆಂಬ

ಆನಂದತೀರ್ಥ ವಿರಚಿತ ದ್ವಾದಶಸ್ತೋತ್ರ
ಕನ್ನಡ ಅನುವಾದ : ಬನ್ನಂಜೆ ಗೋವಿಂದಾಚಾರ್ಯ

ಓ ಸಂತಸದ ಸೆಲೆಯೆ ಬಿಡುಗಡೆಯ ನೀವವನೆ | ಓ ಅರಳುದಾವರೆಯ ಕಂಗಳವನೆ

ಆನಂದತೀರ್ಥರಿಗೆ ತುಂಬು ಸಂತಸವೆಂಬ | ವರವಿತ್ತ ದೈವತವೆ ನಿನಗೆ ನಮನಂ ||

ಬಗೆಯ ಸುಂದರಿಯನ್ನು ಎದೆಯಲ್ಲಿ ಹೊತ್ತವನೆ | ಓ ಗೋವಿಂದನೆ ನಿನಗೆ ನಮನಂ ||

ಬಗೆಯ ಬೆಳಗುವ ಚಂದ್ರ ಸುರರನಾಳುವ ಇಂದ್ರ | ಇವರಿಂದ ವಂದಿತನೆ ನಿನಗೆ ನಮನಂ ||

ಚಂದಿರನ ಹೊತ್ತಿರುವ ನವಿಲ ಸೋಗೆಯ ತೊಟ್ಟು | ಜಗಕೆ ಸಂತಸವೀವ ನಿನಗೆ ನಮನಂ ||

ದೇವಲೋಕದ ಎಲ್ಲ ಸಗ್ಗಿಗರ ಗಢಣವು | ಭಕ್ತಿಯಿಂದೆರಗುತಿಹ ನಿನಗೆ ನಮನಂ ||

ನಿನ್ನೆಡೆಗೆ ಹರಿದು ಬಹ ಸುರರೆಡೆಗೆ ಕಾರುಣ್ಯ | ರಸವನ್ನು ಸುರಿಸುತಿಹ ನಿನಗೆ ನಮನಂ ||

ಇಂದಿರೆಯ ಬಗೆಯಲ್ಲಿ ಸಂತಸವನುಕ್ಕಿಸುವ | ಲೋಕೈಕ ಸುಂದರನೆ ನಿನಗೆ ನಮನಂ ||

ಮಂದಾರದರಳುಗಳು ಚೆಲ್ಲಿ ಪರಿಮಳಿಸುತಿಹ | ಮಂದಿರದಲ್ಲಿರುವವನೆ ನಿನಗೆ ನಮನಂ ||

ಸಂತಸದ ಹೊನಲೆಂಬ ಚೆಲ್ವ ಬೆಳದಿಂಗಳನು | ನಮ್ಮೆಡೆಗೆ ಹರಿಯಿಸುವ ನಿನಗೆ ನಮನಂ ||

ಆನಂದತೀರ್ಥರಿಗೆ ತುಂಬು ಸಂತಸವೆಂಬ ವರವಿತ್ತ ದೈವತವೆ ನಿನಗೆ ನಮನಂ ||

================================================

3 thoughts on “ಆನಂದತೀರ್ಥರಿಗೆ ತುಂಬು ಸಂತಸವೆಂಬ”

  1. srinivasa prasanna says:

    Eee dinada Prajavaniyalli idara bagge tilede.Tumba santosha haagu hemmeyaayitu.Nimage dhanyavadagalu

  2. chandrashekhar DN says:

    Beautiful ! Melodious !

  3. shrihari says:

    please contact us on 9980201500 or shriharink@gmail.com

Leave a Reply to srinivasa prasanna Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ವಿಷ್ಣು ಸಹಸ್ರನಾಮ ಕನ್ನಡ – Vishnu Sahasranama – Kannadaವಿಷ್ಣು ಸಹಸ್ರನಾಮ ಕನ್ನಡ – Vishnu Sahasranama – Kannada

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಮ್ ಓಂ || ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ | ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ || ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ | ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ || ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ |

ನರಸಿಂಹ ಸುಳಾದಿ – Narasimha Sulaadiನರಸಿಂಹ ಸುಳಾದಿ – Narasimha Sulaadi

ರಚನೆ – ವಿಜಯದಾಸರು ರಾಗ : ನಾಟಿ, ತಾಳ : ಧ್ರುವ ವೀರ ಸಿಂಹನೆ ನಾರಸಿಂಹನೆ ದಯ ಪಾರಾ ವಾರನೆ ಭಯ ನಿವಾರಣ ನಿರ್ಗುಣ ಸಾರಿದವರ ಸಂಸಾರ ವೃಕ್ಷದ ಮೂಲ ಭೇರರಿಸಿ ಕೀಳುವ ಬಿರಿದು ಭಯಂಕರ ಘೋರವತಾರ ಕರಾಳವದನ ಆ- ಘೋರ

ದಯವಿರಲಿ ದಯವಿರಲಿ ದಾಮೋದರ – Dayavirali Damodaraದಯವಿರಲಿ ದಯವಿರಲಿ ದಾಮೋದರ – Dayavirali Damodara

ರಚನೆ : ಗೋಪಾಲದಾಸರು ದಯವಿರಲಿ ದಯವಿರಲಿ ದಾಮೋದರ ರಚನೆ – ಗೋಪಾಲದಾಸರು ದಯವಿರಲಿ ದಯವಿರಲಿ ದಾಮೋದರ ||ಪಲ್ಲವಿ|| ಸಯವಾಗಿ ಬಿಡದೆನ್ನ ಸಾಕುವ ಶ್ರೀಕೃಷ್ಣ ||ಅನು ಪಲ್ಲವಿ|| ಹೋಗುವ ಹಾದಿಯಲಿ ಹೋದ ಹಾಗೆಲ್ಲ ನಾ ಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟು ತೂಗಿ