ಆನಂದತೀರ್ಥರಿಗೆ ತುಂಬು ಸಂತಸವೆಂಬ

ಆನಂದತೀರ್ಥ ವಿರಚಿತ ದ್ವಾದಶಸ್ತೋತ್ರ
ಕನ್ನಡ ಅನುವಾದ : ಬನ್ನಂಜೆ ಗೋವಿಂದಾಚಾರ್ಯ

ಓ ಸಂತಸದ ಸೆಲೆಯೆ ಬಿಡುಗಡೆಯ ನೀವವನೆ | ಓ ಅರಳುದಾವರೆಯ ಕಂಗಳವನೆ

ಆನಂದತೀರ್ಥರಿಗೆ ತುಂಬು ಸಂತಸವೆಂಬ | ವರವಿತ್ತ ದೈವತವೆ ನಿನಗೆ ನಮನಂ ||

ಬಗೆಯ ಸುಂದರಿಯನ್ನು ಎದೆಯಲ್ಲಿ ಹೊತ್ತವನೆ | ಓ ಗೋವಿಂದನೆ ನಿನಗೆ ನಮನಂ ||

ಬಗೆಯ ಬೆಳಗುವ ಚಂದ್ರ ಸುರರನಾಳುವ ಇಂದ್ರ | ಇವರಿಂದ ವಂದಿತನೆ ನಿನಗೆ ನಮನಂ ||

ಚಂದಿರನ ಹೊತ್ತಿರುವ ನವಿಲ ಸೋಗೆಯ ತೊಟ್ಟು | ಜಗಕೆ ಸಂತಸವೀವ ನಿನಗೆ ನಮನಂ ||

ದೇವಲೋಕದ ಎಲ್ಲ ಸಗ್ಗಿಗರ ಗಢಣವು | ಭಕ್ತಿಯಿಂದೆರಗುತಿಹ ನಿನಗೆ ನಮನಂ ||

ನಿನ್ನೆಡೆಗೆ ಹರಿದು ಬಹ ಸುರರೆಡೆಗೆ ಕಾರುಣ್ಯ | ರಸವನ್ನು ಸುರಿಸುತಿಹ ನಿನಗೆ ನಮನಂ ||

ಇಂದಿರೆಯ ಬಗೆಯಲ್ಲಿ ಸಂತಸವನುಕ್ಕಿಸುವ | ಲೋಕೈಕ ಸುಂದರನೆ ನಿನಗೆ ನಮನಂ ||

ಮಂದಾರದರಳುಗಳು ಚೆಲ್ಲಿ ಪರಿಮಳಿಸುತಿಹ | ಮಂದಿರದಲ್ಲಿರುವವನೆ ನಿನಗೆ ನಮನಂ ||

ಸಂತಸದ ಹೊನಲೆಂಬ ಚೆಲ್ವ ಬೆಳದಿಂಗಳನು | ನಮ್ಮೆಡೆಗೆ ಹರಿಯಿಸುವ ನಿನಗೆ ನಮನಂ ||

ಆನಂದತೀರ್ಥರಿಗೆ ತುಂಬು ಸಂತಸವೆಂಬ ವರವಿತ್ತ ದೈವತವೆ ನಿನಗೆ ನಮನಂ ||

================================================

3 thoughts on “ಆನಂದತೀರ್ಥರಿಗೆ ತುಂಬು ಸಂತಸವೆಂಬ”

  1. srinivasa prasanna says:

    Eee dinada Prajavaniyalli idara bagge tilede.Tumba santosha haagu hemmeyaayitu.Nimage dhanyavadagalu

  2. chandrashekhar DN says:

    Beautiful ! Melodious !

  3. shrihari says:

    please contact us on 9980201500 or shriharink@gmail.com

Leave a Reply to chandrashekhar DN Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ದ್ವಾದಶ ಸ್ತೋತ್ರ – ಪ್ರೀಣಯಾಮೋ ವಾಸುದೇವಂ – Preenayamo Vasudevam – Dwadasha stotraದ್ವಾದಶ ಸ್ತೋತ್ರ – ಪ್ರೀಣಯಾಮೋ ವಾಸುದೇವಂ – Preenayamo Vasudevam – Dwadasha stotra

ವಂದಿತಾಶೇಷ ವಂದ್ಯೋರು ವೃಂದಾರಕಂ ಚಂದನಾ ಚರ್ಚಿತೋದಾರಪೀನಾಂಸಕಮ್ | ಇಂದಿರಾ ಚಂಚಲಾಪಾಂಗನೀರಾಜಿತಂ ಮಂದರೋದ್ಧಾರಿ ವೃತ್ತೋದ್ಭುಜಾಭೋಗಿನಂ | ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೧ || ಸೃಷ್ಟಿ ಸಂಹಾರ ಲೀಲಾವಿಲಾಸಾತತಂ ಪುಷ್ಟಷಾಡ್ಗುಣ್ಯ ಸದ್ವಿಗ್ರಹೋಲ್ಲಾಸಿನಮ್ | ದುಷ್ಟ ನಿಷ್ಯೇಷ ಸಂಹಾರಕರ್ಮೋದ್ಯತಂ ಹೃಷ್ಟಪುಷ್ಟಾತಿಶಿಷ್ಟ ಪ್ರಜಾ

ರಾಮದೂತನ ಪಾದ -Ramadootana Padaರಾಮದೂತನ ಪಾದ -Ramadootana Pada

ರಾಮದೂತನ ಪಾದ ತಾಮರಸವ ಕಂಡ||2||ಆ ಮನುಜನೆ ಧನ್ಯನೂ||2|| ಶ್ರೀ ಮನೋಹರನಂಘ್ರಿಭಜಕಸ್ತೋಮ ಕುಮುದಕೆ ಸೋಮನೆನಿಸುವಭೂಮಿಯೊಳು ಯದುಗಿರಿಯ ಸೀಮೆಯಕಾಮವರದೊಳು ಪ್ರೇಮದಿಂದಿಹ ||ಪ|| ಕೋತಿರೂಪದಿ ರಘುನಾಥನಾಜ್ಞೆಯ ತಾಳಿಪಾದೋದಿಯ ಲಂಘಿಸಿ ||ಖ್ಯಾತ ಲಂಕೆಯ ಪೊಕ್ಕು ಶೋಧಿಸಿಮಾತೆಯನ್ನು ಕಂಡೆರಗಿದಶಮುಖಹೋತ ಖಳಕುಲ ವ್ಯಾತ ಘಾತಿಸಿಸೀತೆವಾರ್ತೆಯ ನಾಥಗರುಹಿದ ||-1-|| ಪಾಂಡುಸುತನೆ ಪ್ರಚಂಡ

ಜಯ ಕೊಲ್ಹಾಪುರ ನಿಲಯೆ – Jaya kolhapura Nilayeಜಯ ಕೊಲ್ಹಾಪುರ ನಿಲಯೆ – Jaya kolhapura Nilaye

ರಚನೆ : ವ್ಯಾಸರಾಜರು ಜಯ ಕೊಲ್ಹಾಪುರ ನಿಲಯೆ ಭಜಧಿಷ್ಟೇತರ ವಿಲಯೆ ತವಪಾದೌ ಹೃದಿಕಲಯೆ ರತ್ನರಚಿತ ವಲಯೆ || ಪ|| ಜಯ ಜಯ ಸಾಗರಜಾತೆ ಕುರು ಕರುಣಾಮಯಿ ಭೀತೆ ಜಗದಂಬಾಭಿ ದಯಾತೆ ಜೀವತಿ ತವಪೋತೆ || ೧|| ಜಯ ಜಯ ಸಾಗರ ಸದನಾ