ಆನಂದತೀರ್ಥರಿಗೆ ತುಂಬು ಸಂತಸವೆಂಬ

ಆನಂದತೀರ್ಥ ವಿರಚಿತ ದ್ವಾದಶಸ್ತೋತ್ರ
ಕನ್ನಡ ಅನುವಾದ : ಬನ್ನಂಜೆ ಗೋವಿಂದಾಚಾರ್ಯ

ಓ ಸಂತಸದ ಸೆಲೆಯೆ ಬಿಡುಗಡೆಯ ನೀವವನೆ | ಓ ಅರಳುದಾವರೆಯ ಕಂಗಳವನೆ

ಆನಂದತೀರ್ಥರಿಗೆ ತುಂಬು ಸಂತಸವೆಂಬ | ವರವಿತ್ತ ದೈವತವೆ ನಿನಗೆ ನಮನಂ ||

ಬಗೆಯ ಸುಂದರಿಯನ್ನು ಎದೆಯಲ್ಲಿ ಹೊತ್ತವನೆ | ಓ ಗೋವಿಂದನೆ ನಿನಗೆ ನಮನಂ ||

ಬಗೆಯ ಬೆಳಗುವ ಚಂದ್ರ ಸುರರನಾಳುವ ಇಂದ್ರ | ಇವರಿಂದ ವಂದಿತನೆ ನಿನಗೆ ನಮನಂ ||

ಚಂದಿರನ ಹೊತ್ತಿರುವ ನವಿಲ ಸೋಗೆಯ ತೊಟ್ಟು | ಜಗಕೆ ಸಂತಸವೀವ ನಿನಗೆ ನಮನಂ ||

ದೇವಲೋಕದ ಎಲ್ಲ ಸಗ್ಗಿಗರ ಗಢಣವು | ಭಕ್ತಿಯಿಂದೆರಗುತಿಹ ನಿನಗೆ ನಮನಂ ||

ನಿನ್ನೆಡೆಗೆ ಹರಿದು ಬಹ ಸುರರೆಡೆಗೆ ಕಾರುಣ್ಯ | ರಸವನ್ನು ಸುರಿಸುತಿಹ ನಿನಗೆ ನಮನಂ ||

ಇಂದಿರೆಯ ಬಗೆಯಲ್ಲಿ ಸಂತಸವನುಕ್ಕಿಸುವ | ಲೋಕೈಕ ಸುಂದರನೆ ನಿನಗೆ ನಮನಂ ||

ಮಂದಾರದರಳುಗಳು ಚೆಲ್ಲಿ ಪರಿಮಳಿಸುತಿಹ | ಮಂದಿರದಲ್ಲಿರುವವನೆ ನಿನಗೆ ನಮನಂ ||

ಸಂತಸದ ಹೊನಲೆಂಬ ಚೆಲ್ವ ಬೆಳದಿಂಗಳನು | ನಮ್ಮೆಡೆಗೆ ಹರಿಯಿಸುವ ನಿನಗೆ ನಮನಂ ||

ಆನಂದತೀರ್ಥರಿಗೆ ತುಂಬು ಸಂತಸವೆಂಬ ವರವಿತ್ತ ದೈವತವೆ ನಿನಗೆ ನಮನಂ ||

================================================

3 thoughts on “ಆನಂದತೀರ್ಥರಿಗೆ ತುಂಬು ಸಂತಸವೆಂಬ”

  1. srinivasa prasanna says:

    Eee dinada Prajavaniyalli idara bagge tilede.Tumba santosha haagu hemmeyaayitu.Nimage dhanyavadagalu

  2. chandrashekhar DN says:

    Beautiful ! Melodious !

  3. shrihari says:

    please contact us on 9980201500 or shriharink@gmail.com

Leave a Reply to shrihari Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಜಯ ಕೊಲ್ಹಾಪುರ ನಿಲಯೆ – Jaya kolhapura Nilayeಜಯ ಕೊಲ್ಹಾಪುರ ನಿಲಯೆ – Jaya kolhapura Nilaye

ರಚನೆ : ವ್ಯಾಸರಾಜರು ಜಯ ಕೊಲ್ಹಾಪುರ ನಿಲಯೆ ಭಜಧಿಷ್ಟೇತರ ವಿಲಯೆ ತವಪಾದೌ ಹೃದಿಕಲಯೆ ರತ್ನರಚಿತ ವಲಯೆ || ಪ|| ಜಯ ಜಯ ಸಾಗರಜಾತೆ ಕುರು ಕರುಣಾಮಯಿ ಭೀತೆ ಜಗದಂಬಾಭಿ ದಯಾತೆ ಜೀವತಿ ತವಪೋತೆ || ೧|| ಜಯ ಜಯ ಸಾಗರ ಸದನಾ

ಶ್ರೀ ದುರ್ಗಾ ಸುಳಾದಿ – Durga Sulaadiಶ್ರೀ ದುರ್ಗಾ ಸುಳಾದಿ – Durga Sulaadi

ರಚನೆ – ವಿಜಯದಾಸರು ಧ್ರುವ ತಾಳ ದುರ್ಗಾ ದುರ್ಗಿಯೆ ಮಹಾ ದುಷ್ಟಜನ ಸಂಹಾರೆ ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ ದುರ್ಗಮವಾಗಿದೆ ನಿನ್ನ ಮಹಿಮೆ, ಬೊಮ್ಮ ಭರ್ಗಾದಿಗಳಿಗೆಲ್ಲ ಗುಣಿಸಿದರೂ ಸ್ವರ್ಗ ಭೂಮಿ ಪಾತಾಳ ಸಮಸ್ತ ವ್ಯಾಪುತ ದೇವಿ ವರ್ಗಕ್ಕೆ ಮೀರಿದ ಬಲು ಸುಂದರೀ

ನರಸಿಂಹ ಸುಳಾದಿ – Narasimha Sulaadiನರಸಿಂಹ ಸುಳಾದಿ – Narasimha Sulaadi

ರಚನೆ – ವಿಜಯದಾಸರು ರಾಗ : ನಾಟಿ, ತಾಳ : ಧ್ರುವ ವೀರ ಸಿಂಹನೆ ನಾರಸಿಂಹನೆ ದಯ ಪಾರಾ ವಾರನೆ ಭಯ ನಿವಾರಣ ನಿರ್ಗುಣ ಸಾರಿದವರ ಸಂಸಾರ ವೃಕ್ಷದ ಮೂಲ ಭೇರರಿಸಿ ಕೀಳುವ ಬಿರಿದು ಭಯಂಕರ ಘೋರವತಾರ ಕರಾಳವದನ ಆ- ಘೋರ