ವೇಣಿ ಮಾಧವನ ತೋರಿಸೆ – ವಾದಿರಾಜರು

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ
ಕಾಣದೆ ನಿಲ್ಲಲಾರೆನೆ||ಪಲ್ಲವಿ||

ಕಾಣುತ ಭಕ್ತರ ಕರುಣದಿ ಸಲಹುವ
ಜಾಣೆ ತ್ರಿವೇಣಿ ಸಾರೆ ಸುಖವಾಣಿ||ಅನುಪಲ್ಲವಿ||

ಬಂದೆನೆ ಬಹಳ ದೂರದಿ ಭವಸಾಗರ ತರಣಿ
ನಿಂದೆನೆ ನಿನ್ನ ತೀರದಿ
ಒಂದು ಗಳಿಗೆ ಹರಿಯ ಅಗಲಿ ನಾನಿರಲಾರೆ
ಮಂದಗಮನೆ ಎನ್ನ ಮುಂದಕೆ ಕರೆಯೆ ||೧||

ಶರಣಾಗತರ ಪಾಲಿಪುದು ತರಳೆ ನಿನ್ನ ಬಿರುದು
ಕರುಣದಿಂದೆನ್ನ ಪೊರೆಯೆ
ಸ್ಮರಣೆ ಮಾತ್ರದಿ ಭವತಾಪವ ಹರಿಸುವ
ಸ್ಮರನ ಪಿತ ಮುರಹರನ ಕರುಣದಿ ||೨||

ಸುಜನರಿಗೆಲ್ಲಾಧರಳೆ ಸುಖಶೀಲೆ ಕೇಳೆ
ಕುಜನ ಸಂಗವನು ಕೀಳೆ
ನಿಜಪದವಿಯನೀವ ಹಯವದನನ
ಪದ ರಜವ ತೋರಿಸೆ ಮದಗಜಗಮನೆ ||೩||

4 thoughts on “ವೇಣಿ ಮಾಧವನ ತೋರಿಸೆ – ವಾದಿರಾಜರು”

  1. ವಾದಿರಾಜರ ಸೊಗಸಾದ ಕೀರ್ತನೆಯನ್ನು ವಿದ್ಯಾದಿಭೂಷಣರು ಸೊಗಸಾಗಿ ಹಾಡಿದ್ದಾರೆ. ಕೇಳಿಸಿದ್ದಕ್ಕಾಗಿ ಧನ್ಯವಾದಗಳು.

  2. ವಾದಿರಾಜರ ಮೇರು ಪ್ರತಿಭೆಗೆ ಸಾಕ್ಷಿ:
    ‘ಜಾಣೆ ತ್ರಿವೇಣಿ ಸಾರೆ ಸುಖವಾಣಿ’ ಅಲ್ಲವೇ.

  3. ಈಶ್ವರ ಭಟ್ says:

    ಎಂತಾ ಒಳ್ಳೇ ಪದ್ಯ …ಖುಷಿ ಆಯ್ತು.

  4. ಸುಮಧುರ ಗಾಯನ… 🙂

Leave a Reply to Sudhindra Deshpande Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಮಧ್ವನಾಮ –  ಶ್ರೀಪಾದರಾಜ ವಿರಚಿತಮಧ್ವನಾಮ –  ಶ್ರೀಪಾದರಾಜ ವಿರಚಿತ

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ ಅಖಿಲಗುಣ ಸದ್ಧಾಮ ಮಧ್ವನಾಮ || ಪ || ಆವ ಕಚ್ಛಪ ರೂಪದಿಂದಲಂಡೋದಕವ ಓವಿ ಧರಿಸಿದ ಶೇಷಮೂರುತಿಯನು ಆವವನ ಬಳಿವಿಡಿದು ಹರಿಯ ಸುರರೈಯ್ದುವರು ಆ ವಾಯು ನಮ್ಮ ಕುಲಗುರುರಾಯನು || ೧ || ಆವವನು ದೇಹದೊಳಗಿರಲು

ಹರಿಕಥಾಮೃತಸಾರ -01- ಮಂಗಳಾಚರಣ ಸಂಧಿಹರಿಕಥಾಮೃತಸಾರ -01- ಮಂಗಳಾಚರಣ ಸಂಧಿ

ಹರಿಕಥಾಮೃತಸಾರ – ಮಂಗಳಾಚರಣ ಸಂಧಿ ರಚನೆ : ಶ್ರೀ ಜಗನ್ನಾಥ ದಾಸರು ಹರಿಕಥಾಮೃತಸಾರ ಗುರುಗಳ| ಕರುಣದಿಂದಾಪನಿತು ಪೇಳುವೆ| ಪರಮಭಗವದ್ಭಕ್ತರಿದಾನದರದಿ ಕೇಳುವುದು||ಪ|| ಶ್ರೀರಮಣಿಕರಕಮಲಪೂಜಿತ | ಚಾರುಚರಣಸರೋಜ ಬ್ರಹ್ಮಸ | ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ || ನೀರಜಭವಾಂಡೋದಯಸ್ಥಿತಿ | ಕಾರಣನೆ ಕೈವಲ್ಯದಾಯಕ |

ಈಸಬೇಕು ಇದ್ದು ಜೈಸಬೇಕು!ಈಸಬೇಕು ಇದ್ದು ಜೈಸಬೇಕು!

ರಚನೆ – ಪುರಂದರದಾಸರು ವಿದ್ಯಾಭೂಷಣರ ದನಿಯಲ್ಲಿ ಹಾಡು ಕೇಳಿ:- ಈಸಬೇಕು-ಇದ್ದು ಜೈಸಬೇಕು| ಹೇಸಿಗೆ ಸಂಸಾರದಲ್ಲಿ ಆಶಾ ಲೇಶ ಮಾಡದ್ಹಾಂಗೆ ||ಪ|| ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು ಸ್ವಾಮಿ ರಾಮನೆನುತ ಪಾಡಿ ಕಾಮಿತ ಕೈಗೊಂಬರೆಲ್ಲ ||೧|| ಗೇರುಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ| ಮೀರಿ