ವೇಣಿ ಮಾಧವನ ತೋರಿಸೆ – ವಾದಿರಾಜರು

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ
ಕಾಣದೆ ನಿಲ್ಲಲಾರೆನೆ||ಪಲ್ಲವಿ||

ಕಾಣುತ ಭಕ್ತರ ಕರುಣದಿ ಸಲಹುವ
ಜಾಣೆ ತ್ರಿವೇಣಿ ಸಾರೆ ಸುಖವಾಣಿ||ಅನುಪಲ್ಲವಿ||

ಬಂದೆನೆ ಬಹಳ ದೂರದಿ ಭವಸಾಗರ ತರಣಿ
ನಿಂದೆನೆ ನಿನ್ನ ತೀರದಿ
ಒಂದು ಗಳಿಗೆ ಹರಿಯ ಅಗಲಿ ನಾನಿರಲಾರೆ
ಮಂದಗಮನೆ ಎನ್ನ ಮುಂದಕೆ ಕರೆಯೆ ||೧||

ಶರಣಾಗತರ ಪಾಲಿಪುದು ತರಳೆ ನಿನ್ನ ಬಿರುದು
ಕರುಣದಿಂದೆನ್ನ ಪೊರೆಯೆ
ಸ್ಮರಣೆ ಮಾತ್ರದಿ ಭವತಾಪವ ಹರಿಸುವ
ಸ್ಮರನ ಪಿತ ಮುರಹರನ ಕರುಣದಿ ||೨||

ಸುಜನರಿಗೆಲ್ಲಾಧರಳೆ ಸುಖಶೀಲೆ ಕೇಳೆ
ಕುಜನ ಸಂಗವನು ಕೀಳೆ
ನಿಜಪದವಿಯನೀವ ಹಯವದನನ
ಪದ ರಜವ ತೋರಿಸೆ ಮದಗಜಗಮನೆ ||೩||

4 thoughts on “ವೇಣಿ ಮಾಧವನ ತೋರಿಸೆ – ವಾದಿರಾಜರು”

  1. ವಾದಿರಾಜರ ಸೊಗಸಾದ ಕೀರ್ತನೆಯನ್ನು ವಿದ್ಯಾದಿಭೂಷಣರು ಸೊಗಸಾಗಿ ಹಾಡಿದ್ದಾರೆ. ಕೇಳಿಸಿದ್ದಕ್ಕಾಗಿ ಧನ್ಯವಾದಗಳು.

  2. ವಾದಿರಾಜರ ಮೇರು ಪ್ರತಿಭೆಗೆ ಸಾಕ್ಷಿ:
    ‘ಜಾಣೆ ತ್ರಿವೇಣಿ ಸಾರೆ ಸುಖವಾಣಿ’ ಅಲ್ಲವೇ.

  3. ಈಶ್ವರ ಭಟ್ says:

    ಎಂತಾ ಒಳ್ಳೇ ಪದ್ಯ …ಖುಷಿ ಆಯ್ತು.

  4. ಸುಮಧುರ ಗಾಯನ… 🙂

Leave a Reply to ಈಶ್ವರ ಭಟ್ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಹ್ಯಾಂಗೆ ಮಾಡಲಯ್ಯಾ ಕೃಷ್ಣ, ಪೋಗುತಿದೆ ಆಯುಷ್ಯಹ್ಯಾಂಗೆ ಮಾಡಲಯ್ಯಾ ಕೃಷ್ಣ, ಪೋಗುತಿದೆ ಆಯುಷ್ಯ

ರಚನೆ : ಗೋಪಾಲದಾಸರು ವಿದ್ಯಾಭೂಷಣ ಪುತ್ತೂರು ನರಸಿಂಹ ನಾಯಕ್ ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯ ಮಂಗಳಾಂಗ ಭವಭಂಗ ಬಿಡಿಸಿ ನಿನ್ನ ಡಿಂಗರಿಗನ ಮಾಡೊ ಅನಂಗಜನಕ ||ಪ|| ಏಸು ಜನುಮದ ಸುಕೃತದ ಫಲವೊ ತಾನು ಜನಿಸಲಾಗಿ ಭೂಸುರ ದೇಹದ ಜನುಮವು ಎನಗೆ

ಜಯ ಜಾನಕೀಕಾಂತಜಯ ಜಾನಕೀಕಾಂತ

ರಾಗ – ನಾಟ, ತಾಳ – ಜಂಪೆ ರಚನೆ – ಪುರಂದರದಾಸರು ಹಾಡು ಕೇಳಿ ವಿದ್ಯಾಭೂಷಣ ಡಾ. ಎಂ. ಎಲ್ ವಸಂತಕುಮಾರಿ ಡಾ. ಎಂ. ಬಾಲಮುರಳಿಕೃಷ್ಣ ಜಯ ಜಾನಕೀಕಾಂತ ಜಯ ಸಾಧು ಜನ ವಿನುತ ಜಯತು ಮಹಿಮಾನಂತ ಜಯ ಭಾಗ್ಯವಂತ ||ಪಲ್ಲವಿ||

ಇನ್ನೇನಿನ್ನೇನು?ಇನ್ನೇನಿನ್ನೇನು?

ರಾಗ: ಸೌರಾಷ್ಟ್ರ ತಾಳ: ಝಂಪೆ ಮಾಯದ ಸಂಸಾರ ಮಮಕಾರ ಹಿಂಗಿತು ಇನ್ನೇನಿನ್ನೇನು ||ಪ|| ತೋಯಜಾಕ್ಷನ ದಯ ನಮಗೀಗ ದೊರಕಿತು ಇನ್ನೇನಿನ್ನೇನು ||ಅ.ಪ|| ಭಾವಿಸಿದ್ದೆಲ್ಲವು ಭೂಮಿಪಾಲಾದ ಮೇಲಿನ್ನೇನಿನ್ನೇನು ಸೇವಿಸಿದ ಗಣಪ ಮಂಗನಾದ ಮೇಲಿನ್ನೇನಿನ್ನೇನು ||೧|| ಒತ್ತಿ ಹಿಡಿದ ಕಂಬ ವ್ಯರ್ಥವಾದ ಮೇಲಿನ್ನೇನಿನ್ನೇನು ಜತ್ತಾದ