ಚಿತ್ರ – ಗೃಹಲಕ್ಷ್ಮಿ
ಗಾಯಕಿ – ಎಸ್. ಜಾನಕಿ
ಮನೆಯೇ ಗುಡಿಯಮ್ಮ ಪತಿಯೇ ದೇವರಮ್ಮ
ದೇವರ ಮುಂದೆ ಕಿರುನಗೆ ಎಂಬ ಜ್ಯೋತಿಯ ಬೆಳಗಮ್ಮ||ಪ|
ಸೇವೇಯೇ ನಿನ್ನ ಉಸಿರಾಗಿರಲಿ
ತ್ಯಾಗವೇ ಬಾಳಿನ ಪಲ್ಲವಿಯಾಗಲಿ
ಈ ಸಂಸಾರವೇ ಸುಖಸಾಗರವು
ಎನಿಸುವ ಭಾಗ್ಯವು ನಿನದಾಗಿರಲಿ ||-೧-||
ಹಾಡುವ ಕೊರಳು ಕೋಗಿಲೆಗಾಯ್ತು
ಆಡುವ ಅಂದ ನವಿಲಿನದಾಯ್ತು
ಯಾರಿಗೆ ಏನನು ಕೊಡುವನೊ ಅವನು
ನೇ ಹರುಷದಿ ಸ್ವೀಕರಿಸಮ್ಮ ||-೨-||