ನೀಲಾ – ಆ ಮೇರು ಈ ಮೇರು

ನೀಲಾ : ೨೦೦೧
ಗಾಯಕರು : ರಾಜೇಶ್, ವಾಣಿ ಜಯರಾಂ
ಸಂಗೀತ : ವಿಜಯ ಭಾಸ್ಕರ್
ಸಾಹಿತ್ಯ: ಕೋಟಿಗಾನಹಳ್ಳಿ ರಾಮಯ್ಯ

ಹಾಡು ಕೇಳಿ –

ಆ ಮೇರು ಈ ಮೇರು
ಆಸೆಯ ಹೂ ತೇರು
ಎಳೆ ಎಳೆಯೋ ಬಸವಣ್ಣಾ
ತುಂಬೈತೆ ಕಣ್ಣಾ..
ಎಷ್ಟೊಂದು ಬಣ್ಣಾ..
ತುಂಬೈತೆ ಕಣ್ಣಾ ..ಎಷ್ಟೊಂದು ಬಣ್ಣಾ..

ಆ ಗಾಲಿ ಈ ಗಾಲಿ
ಉರುಳುರುಳಿ ಸಾಗಾಲಿ
ಜೋಗುಳದ ನೆನಪಿರಲಿ
ಜೀವಕ್ಕೆ ಜೊತೆ ಇರಲಿ

ಆ ಊರು ಈ ಊರು
ತಿರುಗಿದರೂ ಏಸೂರು
ಎಲ್ಲೈತೋ ನನ್ನೂರು
ಸಿಗದಲ್ಲ ತವರೂರು

ತುಂಬೈತೆ ಕಣ್ಣಾ
ಎಷ್ಟೊಂದು ಬಣ್ಣಾ

ಊರೂರು ತವರೂರು
ಎಲ್ಲಾರು ನಮ್ಮೋರು
ಕನಸಿಗರೇ ಗೆಲ್ಲೋರು
ಒಯ್ಯೋಣ ಈ ತೇರು

*        *      * 

(ವಿಜಯ ಭಾಸ್ಕರ್ ಸಂಗೀತ ನೀಡಿದ ಕೊನೆಯ ಚಿತ್ರ.
ವಾಣಿ ಜಯರಾಂ ಹಾಡಿರುವ ಕೊನೆಯ ಕನ್ನಡ ಚಿತ್ರವೂ ಹೌದು – ಸದ್ಯಕ್ಕೆ)

*                      *                      *

5 thoughts on “ನೀಲಾ – ಆ ಮೇರು ಈ ಮೇರು”

  1. kaaloo says:

    “…ಆ ಊರು ಈ ಊರು
    ತಿರುಗಿದರೂ ಏಸೂರು
    ಎಲ್ಲೈತೋ ನನ್ನೂರು
    ಸಿಗದಲ್ಲ ತವರೂರು…”

    ಯಾಕ್ ಮೆಡಮ್, ಊರು ನೆನಪು ಬಂದಂಗಿದೆ ನಿಮಗೆ!
    ಬಹಳ ದಿನಗಳ ಮೇಲೆ ಒಳ್ಳೇ ಸಿನಿಮಾ ಸಾಹಿತ್ಯ ಓದಿದ ಹಾಗಾಯ್ತು, ಧನ್ಯವಾದ.

  2. ವಾಣಿ ಜಯರಾಂ ನನಗೆ ತುಂಬಾ ಇಷ್ಟ. ಆಕೆ ಕನ್ನಡ ಹಾಡು ಹಾಡಿರೋದು ಕಡಿಮೆ, ಆದ್ರೂ ಎಲ್ಲಾ ಚೆನ್ನಾಗಿವೆ; ಮಾನಸ ಸರೋವರದ ‘ಹಾಡು ಹಳೆಯದಾದರೇನು..’ ಅಂತೂ superb!!

  3. sritri says:

    ಹೌದು ಶ್ರೀಲತಾ. ವಾಣಿಯ ಗಾನಕೆ ಸೋಲದ ಮನಸೇ ಇಲ್ಲ 🙂
    ಈಚೆಗೆ ಕಾಣಿಸಿರಲಿಲ್ಲ ನೀವು ಎಲ್ಲೂ. ಕೆಲಸ ಜಾಸ್ತಿನಾ?

  4. sritri says:

    ಕಾಳಣ್ಣಾ, ಏನಾದರೂ ನೆನಪಾಗೋದಿಕ್ಕೆ ಮೊದಲು ಅದು ಮರೆತಿರಬೇಕಲ್ವಾ?

    “ಊರೂರು ತವರೂರು
    ಎಲ್ಲಾರು ನಮ್ಮೋರು” –

    ಸದ್ಯಕ್ಕೆ ಇದೇ ನನ್ನ ಹಾಡು. 🙂

  5. ಕೆಲ್ಸ ಜಾಸ್ತಿ ಅಂತೇನಿಲ್ಲ, ಸೋಮಾರಿತನ ಸ್ವಲ್ಪ ಜಾಸ್ತಿ 😉

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಕಲ್ಲರಳಿ ಹೂವಾಗಿ – ಕಲ್ಲರಳಿಕಲ್ಲರಳಿ ಹೂವಾಗಿ – ಕಲ್ಲರಳಿ

ಚಿತ್ರ – ಕಲ್ಲರಳಿ ಹೂವಾಗಿ (೨೦೦೬) ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಹೇಮಂತ್ ಮತ್ತು ಸಂಗಡಿಗರು ಹಾಡು ಕೇಳಿ ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ ಸೊಗಡಿನ ಮಣ್ಣಿನ ಮಗಳಾಗಿ ಭಾಗ್ಯದ ಬಾಳಿನ ಬಳೆಗಾಗಿ ಘಲ್ಲೆಂದಳು ಎದೆಯಲಿ ಪದವಾಗಿ

ಮಣ್ಣಿನ ದೋಣಿ – ಮಳೆ ಮಳೆಮಣ್ಣಿನ ದೋಣಿ – ಮಳೆ ಮಳೆ

ಚಿತ್ರ – ಮಣ್ಣಿನದೋಣಿ – ೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರ ಹಾಡು ಕೇಳಿ ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ

ಚಿಗುರಿದ ಕನಸು – ಬಂಧುವೇ ಓ ಬಂಧುವೇಚಿಗುರಿದ ಕನಸು – ಬಂಧುವೇ ಓ ಬಂಧುವೇ

ಚಿತ್ರ –  ಚಿಗುರಿದ ಕನಸು-೨೦೦೩ ಸಾಹಿತ್ಯ – ಜಯಂತ್ ಕಾಯ್ಕಿಣಿ ಸಂಗೀತ – ವಿ. ಮನೋಹರ್ ಗಾಯಕ – ಡಾ. ರಾಜ್‍ಕುಮಾರ್ ಹಾಡು ಇಲ್ಲಿದೆ –  ಬಂಧುವೇ ಓ ಬಂಧುವೇ ಗಂಗವ್ವಾ ಗಂಗಾಮಾಯಿ ಮಮತೆಯ ಧಾರೆ ಗುರಿಯಿರದೆ ಅಲೆವ ನನ್ನ ಮೂಲವ