ಸಿಂಹರೂಪನಾದ ಶ್ರೀ ಹರಿ ಶ್ರೀ ನಾಮಗಿರೀಶನೇ
ಒಮ್ಮನದಿಂದ ತನ್ನನು ಭಜಿಪರ ಸಮ್ಮತದಿಂದ ಕಾಯುವೆನೆಂದ ಹರಿ||ಅನು||
ತರಳನು ಕರೆಯೆ ಸ್ಥಂಭವು ಬಿರಿಯೇ
ತುಂಬಾ ಉಗ್ರವನು ತೋರಿದನು
ಕರುಳನು ಬಗೆದು ಕೊರಳೊಳಗಿಟ್ಟು
ತರಳನ ಸಲಹಿದ ಶ್ರೀ ನರಸಿಂಹನೆ|| 1 ||
ಭಕ್ತರೆಲ್ಲ ಕೂಡಿ ಬಹು ದೂರ ಓಡಿ
ಪರಮ ಶಾಂತವನು ಬೇಡಿದರು
ಕರೆತಂದು ಸಿರಿಯನು ತೊಡೆಯೊಳು ಕೂಡಿಸಲು
ಪರಮ ಹರುಷವನು ಹೊಂದಿದ ಶ್ರೀ ಹರಿ|| 2 ||
ಜಯ ಜಯ ಜಯವೆಂದು ಹೂವನು ತಂದು
ಹರಿ ಹರಿ ಹರಿಯೆಂದು ಸುರರೆಲ್ಲ ಸುರಿಸೆ
ಭಯ ನಿವಾರಣ ಭಾಗ್ಯ ಸ್ವರೂಪನೇ
ಪರಮ ಪುರುಷ ಶ್ರೀ ಪುರಂದರ ವಿಠಲನೆ || 3 ||
https://www.youtube.com/watch?v=MvLyNGm6EHY