ನಂಜುಂಡಿ – ದೀಪದಿಂದ ದೀಪವ- Deepadinda Deepava

ಚಿತ್ರ – ನಂಜುಂಡಿ (೨೦೦೩)
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕರು – ಮಧು ಬಾಲಕೃಷ್ಣ,ನಂದಿತ

ಹಾಡು ಕೇಳಿ

ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು
ಮನಸಿನಿಂದ ಮನಸನು ಬೆಳಗಬೇಕು ಮಾನವ
ಮೇಲು ಕೀಳು ಭೇದ ನಿಲ್ಲಲು
ಭೇದವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ ನೀ ತಿಳಿಯೋ ||ಪ||

ಆಸೆ ಹಿಂದೆ ದುಃಖವೆಂದರು
ರಾತ್ರಿ ಹಿಂದೆ ಹಗಲು ಎಂದರು
ದ್ವೇಷವೆಂದು ಹೊರೆ ಎಂದರು
ಹಬ್ಬವದಕೆ ಹೆಗಲು ಎಂದರು
ಎರಡು ಮುಖದ ನಮ್ಮ ಜನುಮದ ವೇಷಾವಳಿ
ತಿಳಿದು ಹಾಲ್ಬೆಳಕ ಕುಡಿವುದೇ ದೀಪಾವಳಿ ||೧||

ಮಣ್ಣಿನಿಂದ ಹಣತೆಯಾದರೆ
ಬೀಜದಿಂದ ಎಣ್ಣೆಯಾಯಿತು
ಅರಳೆಯಿಂದ ಬತ್ತಿಯಾದರೆ
ಸುಡುವ ಬೆಂಕಿ ಜ್ಯೋತಿಯಾಯಿತು
ನಂದಿಸುವುದು ತುಂಬ ಸುಲಭವೋ ಹೇ ಮಾನವ
ಆನಂದಿಸುವುದು ತುಂಬ ಕಠಿಣವೋ ಹೇ ದಾನವ||೨||

*             *                    *

7 thoughts on “ನಂಜುಂಡಿ – ದೀಪದಿಂದ ದೀಪವ- Deepadinda Deepava”

  1. kaaloo says:

    “ಆಸೆ ಹಿಂದೆ ದು:ಖವೆಂದರು
    ರಾತ್ರಿ ಹಿಂದೆ ಹಗಲು ಎಂದರು
    ದ್ವೇಷವೆಂದು ಹೊರೆ ಎಂದರು
    ಹಬ್ಬವದಕೆ ಹೆಗಲು ಎಂದರು
    ಎರಡು ಮುಖದ ನಮ್ಮ ಜನುಮದ ವೇಷಾವಳಿ
    ತಿಳಿದು ಹಾಲ್ಬೆಳಕ ಕುಡಿವುದೇ ದೀಪಾವಳಿ”

    ‘ಆಸೆ-ದುಃಖ’ ಬರೆದ ಮೇಲೆ ‘ಹಗಲು-ರಾತ್ರಿ’ ಬರಬೇಕಿತ್ತು ಅನ್ನಿಸ್ತು.
    ‘ಹಬ್ಬವದಕೆ ಹೆಗಲು’ ಅಂದ್ರೆ ಏನೂ ಅಂತ ಅರ್ಥ ಆಗ್ಲಿಲ್ಲ.
    ‘ಎರಡು ಮುಖದ…ಜನ್ಮಕ್ಕೆ’ ಏನಾದ್ರೂ ಸಿನಿಮಾದ ಕಾಂಟೆಕ್ಸ್ಟ್ ಇದ್ದಿರಬೇಕು.

    `ಸುಡುವ ಬೆಂಕಿ ಜ್ಯೋತಿಯಾಯಿತು…’ ಪರವಾಗಿಲ್ಲ, ಆದ್ರೂ ‘ಬೀಜ-ಎಣ್ಣೆ’ಯಷ್ಟು ವಾಸ್ತವ ಅನ್ನಿಸಲಿಲ್ಲ.

  2. sritri says:

    ‘ಹಬ್ಬವದಕೆ ಹೆಗಲು’ ಅಂದ್ರೆ ….. ಬಹುಶ: ಹಿಂದಿನ ಸಾಲಿನ “ದ್ವೇಷವೆಂದು ಹೊರೆ ಎಂದರು” ಸಾಲಿನೊಂದಿಗೆ ಓದಬೇಕು ಅನ್ನಿಸತ್ತೆ. ದ್ವೇಷದ ಹೊರೆಯನ್ನು ಹಬ್ಬವೆಂಬ ಹೆಗಲು ಹೊತ್ತು ಕಡಿಮೆ ಮಾಡಲಿ ಅಂತ ಅರ್ಥ ಮಾಡಿಕೊಳ್ಳಬಹುದೇನೋ 🙂

  3. Anveshi says:

    ನಂದಿಸುವುದು ಸುಲಭ
    ಆನಂದಿಸುವುದು ಕಠಿಣ
    ಎಂಬ ಮಾತು ದಾನವರಿಗೋ ಶ್ರೀತ್ರಿ ಅವರೆ? 🙂

  4. venkatesha says:

    ಆಹಾ ಆಹಾ ಇದೆಂತಹ ಮಾತುಗಳು

    ಮಣ್ಣಿನಿಂದ ಹಣತೆಯಾದರೆ
    ಬೀಜದಿಂದ ಎಣ್ಣೆಯಾಯಿತು
    ಅರಳೆಯಿಂದ ಬತ್ತಿಯಾದರೆ
    ಸುಡುವ ಬೆಂಕಿ ಜ್ಯೋತಿಯಾಯಿತು

    ಬಹಳ ಒಳ್ಳೆಯ ಸಾಹಿತ್ಯವನ್ನೊದಗಿಸಿದ್ದಕ್ಕೆ ವಂದನೆಗಳು ಮೇಡಂ.

  5. sunaath says:

    ಸುಂದರವಾದ ಶುಭಾಶಯಕ್ಕಾಗಿ ಧನ್ಯವಾದಗಳು,ತ್ರಿವೇಣಿಯವರೆ!ದೀಪಾವಳಿ ನಿಮಗೆ ಹಾಗು ತುಳಸಿವನದ ಸಂದರ್ಶಕರೆಲ್ಲರಿಗೂ ಹರುಷ ತರಲಿ.

  6. ತುಳಸೀವನದ ಓದುಗರಿಗೆಲ್ಲ
    ದೀಪಾವಳಿಯ ಶುಭಾಶಯಗಳು:

    ಹಬ್ಬಗಳ ಹಾರದಲಿ ಪದಕ ದೀವಳಿಗೆ,
    ದೀಪಗಳ ಬೆಳಕಿನಲಿ ನಗುವಿರಲಿ ಜೊತೆಗೆ;
    ಎಲ್ಲ ಮನೆಗಳ ತುಂಬ ಸುಖಶಾಂತಿಯಿರಲಿ,
    ನಮ್ಮ ಹಾರೈಕೆಗಳು ನಿಮ್ಮೊಡನೆ ಬರಲಿ.

    ನಿಮ್ಮೆಲ್ಲರಿಗೂ ಬೆಳಕಿನ ಹಬ್ಬ ಸಂತಸ ತರಲಿ.

  7. ಎಲ್ಲರಿಗೂ ದೀಪಾವಳಿ ಶುಭಾಶಯಗಳು
    ನಂದಗೋಕುಲಕ್ಕೆ ಹೊಸರೂಪ ಬಂದಿದೆ ಒಮ್ಮೆ ಬನ್ನಿ.

Leave a Reply to ಜ್ಯೋತಿ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಮಿಡಿದ ಹೃದಯಗಳು – ಚಂದದ ಚಂದನದಿಂದಮಿಡಿದ ಹೃದಯಗಳು – ಚಂದದ ಚಂದನದಿಂದ

ಮಿಡಿದ ಹೃದಯಗಳು (೧೯೯೩) – ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಎಸ್.ಪಿ.ಬಾಲಸುಬ್ರಹ್ಮಣ್ಯ, ಚಿತ್ರಾ ಹಾಡು ಕೇಳಿ ಚಂದದ ಚಂದನದಿಂದ ಕೊರೆದ ಗೊಂಬೆಯ ಅಂದಚಂದ ಘಮಘಮ ಬೊಂಬೆ ಹಿಡಿದರೆ ಸರಿಗಮ ಬೊಂಬೆ ನುಡಿದರೆ ||ಪ||ತುಂಬಿರುವ ತುಂಗೆ ನೀನು ಸೌಂದರ್ಯ

ಆಕಸ್ಮಿಕ – ಬಾಳುವಂತ ಹೂವೆಆಕಸ್ಮಿಕ – ಬಾಳುವಂತ ಹೂವೆ

ಚಿತ್ರ – ಆಕಸ್ಮಿಕ – ೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಡಾ. ರಾಜ್‍ಕುಮಾರ್ ಹಾಡು ಕೇಳಿ  ಬಾಳುವಂತ ಹೂವೆ ಬಾಡುವಾಸೆ ಏಕೆ ಹಾಡುವಂತ ಕೋಗಿಲೆಯೆ ಅಳುವ ಆಸೆ ಏಕೆ ಕವಲು ದಾರಿಯಲ್ಲಿ ಬಾಳು ಸಾಧ್ಯವೇ ಅವಳಿ

ಗಟ್ಟಿಮೇಳ – ಹಂಸವೇ ಹಾಡು ಬಾಗಟ್ಟಿಮೇಳ – ಹಂಸವೇ ಹಾಡು ಬಾ

ಗಟ್ಟಿಮೇಳ – ೨೦೦೦ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು- ೧. ಹೇಮಂತ್ ೨. ಸೋನು ನಿಗಮ್, ಚಿತ್ರ ಹಂಸವೇ ಹಂಸವೇ ಹಾಡು ಬಾ, ಸೃಷ್ಟಿಯ ಸಂಭ್ರಮ ನೋಡು ಬಾ ಚಂದಮಾಮ ಅಲ್ಲಿ ನೈದಿಲೆ ಇಲ್ಲಿ ಮೋಹವಿದೆ ಸ್ನೇಹವಿದೆ ಪ್ರೀತಿಸುವ