ನಂಜುಂಡಿ – ದೀಪದಿಂದ ದೀಪವ- Deepadinda Deepava

ಚಿತ್ರ – ನಂಜುಂಡಿ (೨೦೦೩)
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕರು – ಮಧು ಬಾಲಕೃಷ್ಣ,ನಂದಿತ

ಹಾಡು ಕೇಳಿ

ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು
ಮನಸಿನಿಂದ ಮನಸನು ಬೆಳಗಬೇಕು ಮಾನವ
ಮೇಲು ಕೀಳು ಭೇದ ನಿಲ್ಲಲು
ಭೇದವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ ನೀ ತಿಳಿಯೋ ||ಪ||

ಆಸೆ ಹಿಂದೆ ದುಃಖವೆಂದರು
ರಾತ್ರಿ ಹಿಂದೆ ಹಗಲು ಎಂದರು
ದ್ವೇಷವೆಂದು ಹೊರೆ ಎಂದರು
ಹಬ್ಬವದಕೆ ಹೆಗಲು ಎಂದರು
ಎರಡು ಮುಖದ ನಮ್ಮ ಜನುಮದ ವೇಷಾವಳಿ
ತಿಳಿದು ಹಾಲ್ಬೆಳಕ ಕುಡಿವುದೇ ದೀಪಾವಳಿ ||೧||

ಮಣ್ಣಿನಿಂದ ಹಣತೆಯಾದರೆ
ಬೀಜದಿಂದ ಎಣ್ಣೆಯಾಯಿತು
ಅರಳೆಯಿಂದ ಬತ್ತಿಯಾದರೆ
ಸುಡುವ ಬೆಂಕಿ ಜ್ಯೋತಿಯಾಯಿತು
ನಂದಿಸುವುದು ತುಂಬ ಸುಲಭವೋ ಹೇ ಮಾನವ
ಆನಂದಿಸುವುದು ತುಂಬ ಕಠಿಣವೋ ಹೇ ದಾನವ||೨||

*             *                    *

7 thoughts on “ನಂಜುಂಡಿ – ದೀಪದಿಂದ ದೀಪವ- Deepadinda Deepava”

 1. kaaloo says:

  “ಆಸೆ ಹಿಂದೆ ದು:ಖವೆಂದರು
  ರಾತ್ರಿ ಹಿಂದೆ ಹಗಲು ಎಂದರು
  ದ್ವೇಷವೆಂದು ಹೊರೆ ಎಂದರು
  ಹಬ್ಬವದಕೆ ಹೆಗಲು ಎಂದರು
  ಎರಡು ಮುಖದ ನಮ್ಮ ಜನುಮದ ವೇಷಾವಳಿ
  ತಿಳಿದು ಹಾಲ್ಬೆಳಕ ಕುಡಿವುದೇ ದೀಪಾವಳಿ”

  ‘ಆಸೆ-ದುಃಖ’ ಬರೆದ ಮೇಲೆ ‘ಹಗಲು-ರಾತ್ರಿ’ ಬರಬೇಕಿತ್ತು ಅನ್ನಿಸ್ತು.
  ‘ಹಬ್ಬವದಕೆ ಹೆಗಲು’ ಅಂದ್ರೆ ಏನೂ ಅಂತ ಅರ್ಥ ಆಗ್ಲಿಲ್ಲ.
  ‘ಎರಡು ಮುಖದ…ಜನ್ಮಕ್ಕೆ’ ಏನಾದ್ರೂ ಸಿನಿಮಾದ ಕಾಂಟೆಕ್ಸ್ಟ್ ಇದ್ದಿರಬೇಕು.

  `ಸುಡುವ ಬೆಂಕಿ ಜ್ಯೋತಿಯಾಯಿತು…’ ಪರವಾಗಿಲ್ಲ, ಆದ್ರೂ ‘ಬೀಜ-ಎಣ್ಣೆ’ಯಷ್ಟು ವಾಸ್ತವ ಅನ್ನಿಸಲಿಲ್ಲ.

 2. sritri says:

  ‘ಹಬ್ಬವದಕೆ ಹೆಗಲು’ ಅಂದ್ರೆ ….. ಬಹುಶ: ಹಿಂದಿನ ಸಾಲಿನ “ದ್ವೇಷವೆಂದು ಹೊರೆ ಎಂದರು” ಸಾಲಿನೊಂದಿಗೆ ಓದಬೇಕು ಅನ್ನಿಸತ್ತೆ. ದ್ವೇಷದ ಹೊರೆಯನ್ನು ಹಬ್ಬವೆಂಬ ಹೆಗಲು ಹೊತ್ತು ಕಡಿಮೆ ಮಾಡಲಿ ಅಂತ ಅರ್ಥ ಮಾಡಿಕೊಳ್ಳಬಹುದೇನೋ 🙂

 3. Anveshi says:

  ನಂದಿಸುವುದು ಸುಲಭ
  ಆನಂದಿಸುವುದು ಕಠಿಣ
  ಎಂಬ ಮಾತು ದಾನವರಿಗೋ ಶ್ರೀತ್ರಿ ಅವರೆ? 🙂

 4. venkatesha says:

  ಆಹಾ ಆಹಾ ಇದೆಂತಹ ಮಾತುಗಳು

  ಮಣ್ಣಿನಿಂದ ಹಣತೆಯಾದರೆ
  ಬೀಜದಿಂದ ಎಣ್ಣೆಯಾಯಿತು
  ಅರಳೆಯಿಂದ ಬತ್ತಿಯಾದರೆ
  ಸುಡುವ ಬೆಂಕಿ ಜ್ಯೋತಿಯಾಯಿತು

  ಬಹಳ ಒಳ್ಳೆಯ ಸಾಹಿತ್ಯವನ್ನೊದಗಿಸಿದ್ದಕ್ಕೆ ವಂದನೆಗಳು ಮೇಡಂ.

 5. sunaath says:

  ಸುಂದರವಾದ ಶುಭಾಶಯಕ್ಕಾಗಿ ಧನ್ಯವಾದಗಳು,ತ್ರಿವೇಣಿಯವರೆ!ದೀಪಾವಳಿ ನಿಮಗೆ ಹಾಗು ತುಳಸಿವನದ ಸಂದರ್ಶಕರೆಲ್ಲರಿಗೂ ಹರುಷ ತರಲಿ.

 6. ತುಳಸೀವನದ ಓದುಗರಿಗೆಲ್ಲ
  ದೀಪಾವಳಿಯ ಶುಭಾಶಯಗಳು:

  ಹಬ್ಬಗಳ ಹಾರದಲಿ ಪದಕ ದೀವಳಿಗೆ,
  ದೀಪಗಳ ಬೆಳಕಿನಲಿ ನಗುವಿರಲಿ ಜೊತೆಗೆ;
  ಎಲ್ಲ ಮನೆಗಳ ತುಂಬ ಸುಖಶಾಂತಿಯಿರಲಿ,
  ನಮ್ಮ ಹಾರೈಕೆಗಳು ನಿಮ್ಮೊಡನೆ ಬರಲಿ.

  ನಿಮ್ಮೆಲ್ಲರಿಗೂ ಬೆಳಕಿನ ಹಬ್ಬ ಸಂತಸ ತರಲಿ.

 7. ಎಲ್ಲರಿಗೂ ದೀಪಾವಳಿ ಶುಭಾಶಯಗಳು
  ನಂದಗೋಕುಲಕ್ಕೆ ಹೊಸರೂಪ ಬಂದಿದೆ ಒಮ್ಮೆ ಬನ್ನಿ.

Leave a Reply to ಅಮ್ಮುವಿನಮ್ಮ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಮೇಘಮಾಲೆ ..ಮೇಘಮಾಲೆಮೇಘಮಾಲೆ ..ಮೇಘಮಾಲೆ

ಚಿತ್ರ – ಮೇಘಮಾಲೆ -೧೯೯೪ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಡಾ.ರಾಜ್‍ಕುಮಾರ್   ಹಾಡು ಕೇಳಿ –  ಮೇಘಮಾಲೆ…ಮೇಘಮಾಲೆ… ಪ್ರೀತಿಗಾಗಿ ದಾರಿ ತೋರೋ ದೀಪಮಾಲೆ! ಬಿಸಿಲ ಬಿಡದೆ ಒಳಗೆ ಹೊಳೆಯೋ ಬೆಳ್ಳಿ ಬಳಗವೇ ಬನ್ನಿರಿ ದಿನವೂ ಪಯಣ, ಹೊರಡೋ ದಿಬ್ಬಣ

ಯಜಮಾನ – ಪ್ರೇಮ ಚಂದ್ರಮಯಜಮಾನ – ಪ್ರೇಮ ಚಂದ್ರಮ

ಚಿತ್ರ – ಯಜಮಾನ (೨೦೦೦) ಸಾಹಿತ್ಯ – ಕೆ.ಕಲ್ಯಾಣ್ ಸಂಗೀತ – ರಾಜೇಶ್ ರಾಮನಾಥ್ ಗಾಯಕ – ರಾಜೇಶ್ ಕೃಷ್ಣನ್ ಹಾಡು ಕೇಳಿ ಪ್ರೇಮ ಚಂದ್ರಮ ಕೈಗೆ ಸಿಗುವುದೇ ಹೇಳೇ ತಂಗಾಳಿ ನೀ ಹೇಳೇ ತಂಗಾಳಿ ಮನಸಾರೆ ಮೆಚ್ಚಿಕೊಳುವೆ ಹೃದಯಾನ ಬಿಚ್ಚಿಕೊಡುವೆ

ಆಟೋಗ್ರಾಫ್ ಪ್ಲೀಸ್ – ಹೃದಯ ಮಾತಾಡುವ ವೇಳೆಯಲ್ಲಿಆಟೋಗ್ರಾಫ್ ಪ್ಲೀಸ್ – ಹೃದಯ ಮಾತಾಡುವ ವೇಳೆಯಲ್ಲಿ

ಚಿತ್ರ – ಆಟೋಗ್ರಾಫ್ ಪ್ಲೀಸ್ -೨೦೦೫  ಗಾಯಕರು : ರಾಜೇಶ್,ನಂದಿತಾ ಸಾಹಿತ್ಯ : ಪ್ರಕಾಶ್ ಸಂಗೀತ : ಅರ್ಜುನ್ ಹಾಡು ಕೇಳಿ ಹೃದಯ ಮಾತಾಡುವ ವೇಳೆಯಲ್ಲಿ ಮಾತು ಬರದಾಗಿದೆ ತುಟಿಗಳಲ್ಲಿ ಮಾತು ನಿಜವಾಗದೆ ಮೂಕವಾಯ್ತು ಪ್ರೀತಿ ಇಲ್ಲಿ ಹೃದಯ ಮಾತಾಡುವ ವೇಳೆಯಲ್ಲಿ