ಚಿನ್ನದ ಒಡವೆಗಳೇತಕೆ ಅಮ್ಮಾ?
ತೊಂದರೆ ಕೊಡುವುವು ಬೇಡಮ್ಮಾ!
ಬಣ್ಣದ ಬಟ್ಟೆಗಳೇತಕೆ ಅಮ್ಮಾ?
ಮಣ್ಣಿನೊಳಾಡಲು ಬಿಡವಮ್ಮಾ!

‘ಚಂದಕೆ, ಚಂದಕೆ’ ಎನ್ನುವೆಯಮ್ಮಾ!
ಚಂದವು ಯಾರಿಗೆ ಹೇಳಮ್ಮಾ?
ನೋಡುವರಿಗೆ ಚಂದವು, ಆನಂದ;
ಆಡುವ ಎನಗಿದು ಬಲು ಬಂಧ!

ನನ್ನೀ ಶಿಶುತನ ನಿನ್ನೀ ತಾಯ್ತನ
ಎರಡೇ ಒಡವೆಗಳೆಮಗಮ್ಮಾ:
ನಾ ನಿನಗೊಡವೆಯು; ನೀ ನನಗೊಡವೆಯು;
ಬೇರೆಯ ಒಡವೆಗಳೇಕಮ್ಮಾ?

– ಕುವೆಂಪು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.