ಕೆಲಸಗಳ ನಡುವೆ ಸ್ವಲ್ಪ ವಿರಾಮ ದೊರೆತರೂ ಅಂತರ್ಜಾಲಕ್ಕೆ ಬಂದು ಅಮರಿಕೊಳ್ಳುವ ನಾನು ಈಚೆಗೆ ಕೆಲದಿನಗಳಿಂದ ಅಂತರ್ಜಾಲಕ್ಕೆ ಅಪರೂಪವಾಗಿ ಹೋಗಿದ್ದೆ. ಅದಕ್ಕೆ ನನಗೆ ದೊರಕಿದ್ದ ಪುಸ್ತಕಗಳೇ ಕಾರಣ. ಎಷ್ಟೋ ದಿನಗಳಿಂದ ಓದಬೇಕೆಂದು ಇಟ್ಟುಕೊಂಡಿದ್ದ ಪುಸ್ತಕಗಳನ್ನು ಓದಿ ಮುಗಿಸಿದೆ. (ಅದರಲ್ಲಿ ಬಹುಪಾಲು ಕಡ ತಂದ ಪುಸ್ತಕಗಳಾದ್ದರಿಂದ ಓದಿ ಹಿಂತಿರುಗಿಸಲೇಬೇಕಾದ ಜರೂರು 🙂 ) ಪುಸ್ತಕವನ್ನು ವೇಗವಾಗಿ, ಗಬಗಬನೆ ಓದುವ ಸ್ವಭಾವ ನನ್ನದಲ್ಲ. ರುಚಿಕರವಾದ ಪುಸ್ತಕವೊಂದು ಬೇಗ ಓದಿದರೆ ಮುಗಿದೇ ಹೋಗುತ್ತದೆಂಬ ಜಿಪುಣತನದಿಂದ ಒಂದೊಂದೇ ಸಾಲುಗಳನ್ನು ನಿಧಾನವಾಗಿ ಓದುತ್ತಾ ಹೋಗುತ್ತೇನೆ.
ಸಣ್ಣ,ಪುಟ್ಟ ಪುಸ್ತಕಗಳನ್ನೆಲ್ಲ ಮೊದಲು ಮುಗಿಸಿದ್ದಾಯಿತು. ಕಾರಂತರ ಆತ್ಮ ಕಥೆ – ಹುಚ್ಚು ಮನಸ್ಸಿನ ಹತ್ತು ಮುಖಗಳು , ಭೈರಪ್ಪ- ದೂರಸರಿದರು ( ಎರಡನೆಯ ಸಲ), ಜುಗಾರಿ ಕ್ರಾಸ್-ತೇಜಸ್ವಿ, ಬ್ಲಾಕ್ ಫ್ರೈಡೇ – ರವಿ ಬೆಳಗೆರೆ(ಅನುವಾದ), ಏರಿಳಿತದ ಹಾದಿಯಲ್ಲಿ – ಸುಧಾಮೂರ್ತಿ, ಹೇಮಂತ ಗಾನ – ವ್ಯಾಸರಾಯ ಬಲ್ಲಾಳ, ಗತಿ-ಬಿ.ಟಿ. ಲಲಿತಾ ನಾಯಕ್, ದೇವರು – ಎ.ಎನ್.ಮೂರ್ತಿರಾವ್, ನಮ್ಮೊಳಗೊಬ್ಬ ನಾಜೂಕಯ್ಯ – ಟಿ.ಎನ್.ಸೀತಾರಾಂ…..
ಕೊನೆಗೆ ಈಗ ಕುವೆಂಪು ಆತ್ಮಕಥೆಯಾದ “ನೆನಪಿನ ದೋಣಿ” ಕೈಗೆತ್ತಿಕೊಂಡಿದ್ದೇನೆ. ಕೈಯಲ್ಲಿ ಹಿಡಿದು ಓದಲು ಕಷ್ಟವೆನಿಸುವಷ್ಟು ದಪ್ಪದ ಪುಸ್ತಕ. ೧೨೬೮ ಪುಟಗಳ ಈ ಬೃಹತ್ ಹೊತ್ತಿಗೆ ,ನೀರಸ ನಿರೂಪಣೆಯಿಂದ ಕೂಡಿದ್ದರೆ ಅದನ್ನು ಓದುವುದಿರಲಿ, ಮುಟ್ಟಲೂ ನನಗೆ ಭಯವಾಗುತ್ತಿತೇನೋ. ಆದರೆ ಕುವೆಂಪು ಅವರ ತಿಳಿಹಾಸ್ಯದ, ನವಿರಾದ ಬರವಣಿಗೆ ಇರುವ ಈ ಪುಸ್ತಕದ ಓದು ದೋಣಿ ವಿಹಾರದಂತೆಯೇ ಹಿತವಾಗಿ ಸಾಗುತ್ತಿದೆ. ಮಲೆನಾಡಿನ ಕುಗ್ರಾಮದ ಬಾಲಕನೊಬ್ಬ ಮಹಾಕವಿಯಾಗಿ ರೂಪುಗೊಂಡ ಮಹಾ ಜೀವನ ಯಾನವನ್ನು, ಯಾವ ಭಾವಾವೇಶವಿಲ್ಲದೆ, ಸುಲಲಿತ ಶೈಲಿಯಲ್ಲಿ ದಾಖಲಿಸುತ್ತಾ ಹೋಗುತ್ತಾರೆ ಕುವೆಂಪು.
ಓದುತ್ತಿದ್ದಂತೆಯೇ, ಈ ಪುಸ್ತಕದಲ್ಲಿ ನನಗೆ ಪ್ರಿಯವೆನಿಸಿದ ಕೆಲವು ಸಂಗತಿಗಳನ್ನು ಇಲ್ಲಿ ದಾಖಲಿಸಲೇ ಎಂದು ಒಮ್ಮೆ ಯೋಚಿಸಿದೆ. ಆಮೇಲೆ ಈ ಪುಸ್ತಕವನ್ನು ಇಡಿಯಾಗಿ ಸವಿಯುವ ಓದುಗರ ಕುತೂಹಲವನ್ನು ಹಾಳುಗೆಡವುದು ಬೇಡವೆಂದು ಆ ಯೋಜನೆಯನ್ನು ಕೈಬಿಟ್ಟೆ. ಅಲ್ಲದೆ ಕಾಪಿ ರೈಟ್ ಹೊಂದಿರುವ ಇಂತಹ ಕೃತಿಗಳನ್ನು ಅನುಮತಿಯಿಲ್ಲದೆ ಬಳಸಿಕೊಳ್ಳುವುದು ಸರಿಯಲ್ಲವೆನಿಸಿತು. ನಾಲ್ಕನೆಯ ಒಂದು ಭಾಗ ಕೂಡ ಮುಗಿದಿರದ ಈ ನೆನಪಿನ ದೋಣಿಯ ಪಯಣ ಇನ್ನೂ ದೀರ್ಘವಾಗಿದೆ. ಬರುವವರಿದ್ದರೆ ಜೊತೆ ಬನ್ನಿ…
* * *
ಆತ್ಮಕಥೆ ಓದೋದು ನನ್ಗೂ ಸ್ವಲ್ಪ ಬೇಜಾರು, ಆದ್ರೆ ತುಂಬಾ ಇಷ್ಟ ಆದದ್ದು ಮೂರ್ತಿರಾವ್ ಅವ್ರ ‘ಸಂಜೆಗಣ್ಣಿನ ಹಿನ್ನೋಟ’, ಮತ್ತೆ ಬೀಚಿ ಅವರ ‘ನನ್ನ ಭಯಾಗ್ರಫಿ’. ಸಿಕ್ಕಿದ್ರೆ ಓದಿ.
ಹಾಗೇ SLB ಆತ್ಮಕಥೆ ‘ಭಿತ್ತಿ’ ಯಾರಾದ್ರೂ ಕಡ ಕೊಟ್ರೆ ನನ್ಗೂ ಕಳ್ಸಿ…
ಸಂಜೆಗಣ್ಣಿನ ಹಿನ್ನೋಟ, ನನ್ನ ಭಯಾಗ್ರಫಿ ಓದಿದ್ದೀನಿ. ‘ಭಿತ್ತಿ’ – ಎಲ್ಲಿಯೂ ಸಿಕ್ಕಿಲ್ಲ. ನಾನು ಬೆಂಗಳೂರಿಗೆ ಹೋಗಿದ್ದಾಗಲೂ ಈ ಪುಸ್ತಕಕ್ಕಾಗಿ ಹುಡುಕಿದೆ. ಭಿತ್ತಿ ಎಂದಾದರೂ ಕಣ್ಣಿಗೆ ಬಿದ್ದೇ ಬೀಳತ್ತೆ!
ಎಸ್.ಎಲ್.ಭೈರಪ್ಪನವರ ಆತ್ಮಕಥೆ ‘ಭಿತ್ತಿ’ ನಾ? ನಾನು ‘ತಂತು’ ಅಂದುಕೊಂಡಿದ್ದೆ.
ಓಹ್… ಕನ್ನಡಮ್ಮನ ದೇವಾಲಯ ಕನ್ನಡ ರಾಜ್ಯೋತ್ಸವಕ್ಕೆ ಭರ್ಜರಿಯಾಗಿಯೇ ಸಿದ್ಧವಾಗಿದೆಯಲ್ಲಾ….
ನಮ್ಮ ಬಯ್ಯೋಗ್ರಫಿ ಇದ್ದರೆ ಕಳಿಸಿಕೊಡಿ.
ಇಲ್ಲ ಮೀರಾ, “ತಂತು” ಭೈರಪ್ಪನವರ ಕಾದಂಬರಿಗಳಲ್ಲೊಂದು, ಆತ್ಮ ಚರಿತ್ರೆಯಲ್ಲ.
ಸುನೀಲ್ಕುಮಾರ್ ದೇಸಾಯಿ ಸಿನಿಮಾಗಳ ಹೆಸರಿನಂತೆ, ಭೈರಪ್ಪನವರ ಕಾದಂಬರಿಗಳ ಹೆಸರುಗಳಲ್ಲೂ ಒಂದು ವಿಶೇಷವಿದೆ. ಬಹಳಷ್ಟು ಎರಡು ಅಕ್ಷರದ ಹೆಸರುಗಳು. ಉದಾ – ಸಾರ್ಥ, ಸಾಕ್ಷಿ, ದಾಟು, ಪರ್ವ, ಅಂಚು,ತಂತು, ನೆಲೆ,ಭಿತ್ತಿ
ಅನ್ವೇಷಿಗಳೇ,ನಿಮ್ಮ ಬಯ್ಯೋಗ್ರಫಿ ನೀವೇ ಬರೆದುಬಿಡಿ. ಬೇರೆಯವರನ್ನು ಬಯ್ಯೋದು ತಪ್ಪುತ್ತದೆ 🙂
tri,
bhitti nanna hattira ide. bEku andre tiLisi..sushmabv@yahoo.com
haage naanu maandovi hudukta ideeni, beLagere du, nimbaLi idre exchange mADkoLoNa:)
ಓಹ್! ಮಾಂಡೋವಿ ನಿಮಗೆ ಕಳಿಸ್ತೀನಿ ಅಂತ ಹೇಳಿ ಮರೆತುಬಿಟ್ಟಿದ್ದನ್ನು indirect ಆಗಿ ಇಲ್ಲಿ ನೆನಪು ಮಾಡ್ತಾ ಇದೀರಾ ಸುಷ್ಮಾ? 🙂
ಮೊದಲು ನಾನು ಮಾಂಡೊವಿ ಕಳಿಸಿದ ನಂತರವೇ ನೀವು ಭಿತ್ತಿ ಕಳಿಸಿ.
nAnu nimhatra modle kELiddu nijvAglu nenapilla. Adre ondu mooladinda nimhatra ide anta gottagittu:)
aa maTTige tricky request..kshame irli
neevu kaLisida nantarevE anta Enu illa..dayavittu nimma address tiLisi..emailnalli