ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ-ಶರಪಂಜರ

ಚಿತ್ರ : ಶರಪಂಜರ
ಗಾಯಕಿ – ಪಿ.ಸುಶೀಲ
ಸಾಹಿತ್ಯ – ಕಣಗಾಲ್ ಪ್ರಭಾಕರ್ ಶಾಸ್ತ್ರಿ
ಸಂಗೀತ – ವಿಜಯ ಭಾಸ್ಕರ್

ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ
ಶ್ರೀರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯಾ ||ಪಲ್ಲವಿ||

ಮುತ್ತುಗದ ಹೂವು ಮಲ್ಲಿಗೆಯೇ ?
ಅತ್ತಿಯ ಹಣ್ಣು ಅಂಜೂರವೇ?
ಚಿತ್ತೆಯ ಚಿಟ್ಟೆ ದುಂಬಿಯೇ?
ದತ್ತೂರಿ ಕಾಡಿಗೆ ಕಸ್ತೂರಿಯೇ? ||1||

ಕಾಜಾಣ ಕಾಗೆ ಕೋಗಿಲೆಯೇ?
ಬಣ್ಣದ ಕೆಂಬೂತ ಗಿರಿನವಿಲೇ?
ಕಾಡಿನಾ ಮರವೆಲ್ಲ ಶ್ರೀಗಂಧವೇ?
ನಾಡಿನ ಮಣ್ಣೆಲ್ಲಾ ಬಂಗಾರವೇ?||2||

ಬೆಟ್ಟದ ಕಾಳ್ಗಿಚ್ಚು ದೀಪವೇ?
ಬಿರುಗಾಳಿ ಕೆಂಧೂಳಿ ಧೂಪವೇ?
ಮೋಹದಾವೇಶ ಭಕ್ತಿಯೇ?
ಸವಿಯಾದುದೆಲ್ಲಾ ನೈವೇದ್ಯವೇ?||3||

1 thought on “ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ-ಶರಪಂಜರ”

  1. Espy is an astounding value be relevant a shackles in in recognize of you. tulasivana.com
    http://bit.ly/2NUVq8G

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಒಂದಾಗೋಣ ಬಾ – ಒಂದ್ಹೆಜ್ಜೆ ನಾವೇ ಹೋಗೋಣಯ್ಯಒಂದಾಗೋಣ ಬಾ – ಒಂದ್ಹೆಜ್ಜೆ ನಾವೇ ಹೋಗೋಣಯ್ಯ

ಚಿತ್ರ – ಒಂದಾಗೋಣ ಬಾ (೨೦೦೩) ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಫಯಾಜ್‍ಖಾನ್ ಮತ್ತು ಸಂಗಡಿಗರು ಹಾಡು ಇಲ್ಲಿದೆ – ಒಂದ್ಹೆಜ್ಜೆ ನಾವೇ ಹೋಗೋಣಯ್ಯ ಸಿಹಿ ಸಜ್ಜೆ ತಿನಿಸಿ ಬರೋಣಯ್ಯ ಮನೆ ಬಾಗಿಲು ತೆರೆದ ಸೂರ್ಯ ಬೆಳಕಿದ್ದರೆ

ಚಿಗುರಿದ ಕನಸು – ಬಂಧುವೇ ಓ ಬಂಧುವೇಚಿಗುರಿದ ಕನಸು – ಬಂಧುವೇ ಓ ಬಂಧುವೇ

ಚಿತ್ರ –  ಚಿಗುರಿದ ಕನಸು-೨೦೦೩ ಸಾಹಿತ್ಯ – ಜಯಂತ್ ಕಾಯ್ಕಿಣಿ ಸಂಗೀತ – ವಿ. ಮನೋಹರ್ ಗಾಯಕ – ಡಾ. ರಾಜ್‍ಕುಮಾರ್ ಹಾಡು ಇಲ್ಲಿದೆ –  ಬಂಧುವೇ ಓ ಬಂಧುವೇ ಗಂಗವ್ವಾ ಗಂಗಾಮಾಯಿ ಮಮತೆಯ ಧಾರೆ ಗುರಿಯಿರದೆ ಅಲೆವ ನನ್ನ ಮೂಲವ

ಪ್ರತಾಪ್ – ಪ್ರೇಮ ಬರಹ ಕೋಟಿ ತರಹಪ್ರತಾಪ್ – ಪ್ರೇಮ ಬರಹ ಕೋಟಿ ತರಹ

ಪ್ರತಾಪ್ – ೧೯೯೦ ಸಾಹಿತ್ಯ, ಸಂಗೀತ – ಹಂಸಲೇಖ ಗಾಯಕರು – ಎಸ್. ಪಿ. ಬಾಲಸುಬ್ರಹ್ಮಣ್ಯಮ್, ಚಂದ್ರಿಕಾ ಗುರುರಾಜ್ ಪ್ರೇಮ ಬರಹ …. ಕೋಟಿ ತರಹ ಬರೆದರೆ ಮುಗಿಯದ ಕಾವ್ಯವಿದು ಸವಿದರೆ ಸವೆಯದ ಸಾರವಿದು ಹಾಡಿದರೆ ಮರೆಯದ ಹಾಡು ಇದು ಪ್ರೇಮಾ….