ಬಲಗಾಲಿಟ್ಟು ಒಳಗೆ ಬಾ – ಹಾಡೆಂದರೆ….

 ಚಿತ್ರ ಕೃಪೆ:ದಟ್ಸ್ ಕನ್ನಡ

 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಂಸಲೇಖ ಅವರಿಗೆ ಅಭಿನಂದನೆಗಳು! 

ಚಿತ್ರ – ಬಲಗಾಲಿಟ್ಟು ಒಳಗೆ ಬಾ(೨೦೦೨)
ಸಾಹಿತ್ಯ,ಸಂಗೀತ – ಹಂಸಲೇಖ
ಗಾಯಕ – ಕೆ.ಜೆ.ಯೇಸುದಾಸ್

ಹಾಡು ಕೇಳಿ

ಸ..
ನಿನಿಸಸ ರಿರಿಸಸ ನಿನಿಸಸ ರಿರಿಸಸ….
ನಿನಿಸಸ ರಿರಿಸಸ ನಿನಿಸಸ ರಿರಿಸಸ….
ನಿನಿಸ ರಿರಿಸ ನಿನಿಸ ರಿರಿಸ
ನಿಸರಿಸ ಗರಿರಿಸ ಸನಿನಿಪ
ಸನಿನಿಪ ಪಮಮಗ
ಗಮಪಸ ಪನಿ ಮಪ
ಗಪಮಗರಿಸ

ಹಾಡೆಂದರೆ……
ಹಾಡೆಂದರೆ……
ಈ ಹಾಡೆಂದರೆ ಮಗುವಮ್ಮ
ಕಿಲಕಿಲ ಕಿಲಕಿಲ ನಗುವಮ್ಮ
ಜುಳುಜುಳು ಜುಳುಜುಳು ನೀರಮ್ಮಾ
ಹಾಡೆಂದರೆ ಹಾಲಮ್ಮ
ನಾದವಿನೋದದ ನೊರೆಯಮ್ಮ
ದೈವ ನಿನಾದದ ಸುರೆಯಮ್ಮಾ

ಸ್ವರಗಳ ತೇರಲ್ಲಿ…..
ನಿಸನಿಸ ಪನಿಪನಿ
ನಿಸನಿಸ ಪನಿಪನಿ
ಸ್ವರಗಳ ತೇರಲ್ಲಿ…..
ಸರಿಗರಿಸಗನಿಸನಿ ಸನಿಪಮ
ಗಮಪನಿ
ಆ ವಾಣಿಯ ಆ ಭಾವದ ಲಾಸ್ಯ ನೋಡು
ಹಾಡೆಂದರೆ ನವಿಲಮ್ಮ
ಸಾವಿರ ಕಣ್ಗಳ ಬೆಳಕಮ್ಮಾ  ||ಹಾಡೆಂದರೆ||

ತಂಗಾಳಿಯೇ….
ಜಾರಿಜಾರಿ ಮುರಳಿಯಲ್ಲಿ ಸೇರಿ, ತಂಗಾಳಿಯೆ
ಈ ತಂಗಾಳಿಯೇ
ರಾಗದ ಅವತಾರ ಪಡೆಯಲು ಕಾದಿರಲು
ಅಣುವಲಿ ಅಣು ಅಣುವು ನಾವಲ್ಲವೇ?
ರಾಗವೆ ಜಗಕೆಲ್ಲ ಮಡಿಲಲ್ಲವೇ?
ಆ ವಾಣಿಯ ತಂಪೆರೆಯುವ
ಲಾಲಿ…. ಕೇಳೂ…

ಹಾಡೆಂದರೆ ತಂಪಮ್ಮ
ಗುಯ್ ಗುಯ್ ಗುಯ್ ಗುಯ್ ಗುನುಗಮ್ಮಾ
ನಿದಿರಾ ದೇವಿಯ ನಶೆಯಮ್ಮಾ  ||ಹಾಡೆಂದರೆ||

ತುಂತುರು ಹನಿಯಲ್ಲಿ ಸಾಮವೇದ
ಮಿಂಚಿನ ಎದೆಯಲ್ಲು ಗಮಕ
ದುಂಬಿಯ ಕೊರಳಲ್ಲು ಏಕನಾದ
ಚೈತ್ರದ ಬಸಿರಲ್ಲು ಪಲುಕು
ಮಂದ್ರಾದಿ ಮಧ್ಯಾದಿ ತಾರಸ್ಥಾಯಿ
ಮಗುವಿಗೆ ಬಾಗೊ ಇನಿಯಳ ಬಳಸೋ
ದೈವಕೆ ನಮಿಸೊ ಅರ್ಥವ ತಿಳಿಸೊ|

ಮಂದ್ರಾದಿ ಮಧ್ಯಾದಿ ತಾರಾಸ್ಥಾಯಿ
ಆ….
ಆ ವಾಣಿಯ ಬ್ರಹ್ಮಾಂಡದ ಸಾರ ಕೇಳು

ಹಾಡೆಂದರೆ ಜಗವಮ್ಮ
ಬದುಕನು ರಮಿಸೋ ತಾಯಮ್ಮ
ಯುಗಗಳ ಗುರುತಿಸೋ ಗುರುವಮ್ಮಾ..  ||ಹಾಡೆಂದರೆ||

*               *                *                *

( ಈ ಹಾಡಿನಲ್ಲಿ ಬರುವ ಸ್ವರಗಳನ್ನು ಬರೆದುಕೊಟ್ಟ ಮನ ಅವರಿಗೆ ಧನ್ಯವಾದಗಳು. ತಪ್ಪಿದ್ದರೆ, ಸಂಗೀತ ಬಲ್ಲವರು ದಯವಿಟ್ಟು ತಿದ್ದುಪಡಿ ಸೂಚಿಸಿ.)

17 thoughts on “ಬಲಗಾಲಿಟ್ಟು ಒಳಗೆ ಬಾ – ಹಾಡೆಂದರೆ….”

 1. Avi says:

  ಶ್ರೀತ್ರೀ ಅವರೆ,
  ಹಾಡನ್ನು ಮಗುವಿನ ಕಿಲ ಕಿಲ ನಗುವಿಗೆ, ತೊರೆಯ ನೀರಿನ ಜುಳುಜುಳು ನಿನಾದಕ್ಕೆ, ಸುರೆ-ನೊರೆಗೆ ಹೋಲಿಸಿದ ಕವಿ ಮನಸ್ಸು, ರಾಗವೆ ಜಗಕೆಲ್ಲ ಮಡಿಲಲ್ಲವೇ? ಎಂಬ ಪ್ರಶ್ನೆ ಎಲ್ಲವೂ ಆಪ್ಯಾಯಮಾನವೆನಿಸಿದವು.

 2. ವಾವ್!! ‘ಹಾಡೆಂದರೆ ಮಗು, ಕಿಲಕಿಲ ನಗು’.. ಅದ್ಭುತ ಸಾಹಿತ್ಯ!

 3. sritri says:

  ಶ್ರೀಲತಾ, ಅವಿ, ಒಬ್ಬರು ಬರೆದಿದ್ದು ಮತ್ತೊಬ್ಬರಿಗೆ ತಿಳಿಯದಿದ್ದರೂ ಇಬ್ಬರೂ ಒಂದೇ ಸಾಲಿನ ಬಗ್ಗೆ  ಮೆಚ್ಚಿಗೆ ವ್ಯಕ್ತಪಡಿಸಿದ್ದೀರಿ 🙂

  ನನಗೂ ಆ ಸಾಲು ಇಷ್ಟವಾಗಿತು. ಆದರೆ ಸಂಗೀತವನ್ನು – “ದೈವ ನಿನಾದದ ಸುರೆ” ಎಂದಿದ್ದು ನನಗೆ ಅಷ್ಟು ಸರಿ ಎನ್ನಿಸಲಿಲ್ಲ.  ಸಂಗೀತಕ್ಕೂ ಮತ್ತೇರಿಸುವ, ಮತ್ತೂ ಬೇಕು ಅನ್ನಿಸುವ ಗುಣ ಇರುವುದರಿಂದ ಆ ಹೋಲಿಕೆ ಸರಿ ಇದ್ದರೂ ಇರಬಹುದೇನೋ ಎಂದು ಅನ್ನಿಸಿತು. ನಿಮಗೇನನ್ನಿಸತ್ತೆ?

 4. Shiv says:

  ತ್ರಿವೇಣಿಯವರೇ,

  ಹಂಸಲೇಖರಿಗೆ ಪ್ರಶಸ್ತಿ ಬಂದಿದ್ದು ತುಂಬಾ ಒಳ್ಳೆ ಸುದ್ದಿ ಅಲ್ವಾ..
  ಆ ಹಾಡು ಅದ್ಬುತವಾಗಿದೆ..ನೀವು ಎಲ್ಲಿಂದ ಇವನ್ನ ಹಿಡಕೊಂಡು ಬಂದು ನಮಗೆ ಕೇಳಿಸ್ತಿರೀ?
  ಧನ್ಯವಾದಗಳು

 5. sritri says:

  ಧನ್ಯವಾದ ಶಿವು. ಹಂಸಲೇಖಾಗೆ ಪ್ರಶಸ್ತಿ ಬಂದಿದ್ದು ಒಳ್ಳೆಯ ಸುದ್ದಿನೇ, ಈ ವರ್ಷದಲ್ಲಿ ಇದು ಅವರಿಗೆ ಬಂದಿರೂ ಮೂರನೆಯ ಪ್ರಶಸ್ತಿ.

  ಹಾಡನ್ನು ಎಲ್ಲಿಂದ “ಹಿಡಕೊಂಡು” ಬಂದ್ರಿ ? -ಅಂತ ನೀವು ಕೇಳಿದ್ದಕ್ಕೆ ನಗು ಬರುತ್ತಿದೆ 🙂

 6. kaaloo says:

  ನಿಜವಾಗಿ? ಹಂಸ್‌ಗೆ ರಾಜ್ಯೋತ್ಸವ ಪ್ರಶಸ್ತಿ ಈ ಮೊದಲೇ ಬರಬೇಕಿತ್ತು ಅನ್ನಿಸೋದಿಲ್ವಾ ನಿಮಗೆ.
  ಫೋಟೋ ಬಹಳ ಚೆನ್ನಾಗಿದೆ, ಚಿತ್ರಕೃಪೆಯನ್ನು ಪ್ರಕಟಿಸಿ ಒಳ್ಳೆಯ ಕೆಲಸ ಮಾಡಿದ್ದೀರಿ.

  ಜೇಸುದಾಸ್ ಧ್ವನಿಯಲ್ಲಿ ಕನ್ನಡ ಹಾಡುಗಳನ್ನು ಕೇಳದೇ ಬಹಳ ದಿನಗಳಾಗಿದ್ದವು. ಸ್ವರಗಳನ್ನು ಕ್ಯಾಪ್ಚರ್ ಮಾಡಿರೋ ಮನಸ್ವಾಮಿಗೆ ನಮನ.

 7. Ramesh says:

  ವಹ್,

  ಎಷ್ಟೋ ದಿವಸ ಆಗಿತ್ತು ಈ ಹಾಡನ್ನು ಕೇಳಿ. ಇವತ್ತೆ ಹುಡುಕಿ ಕೇಳ್ತಿನಿ. ಅದ್ಭುತವಾದ ಗೀತೆ.
  ಮನ ಮತ್ತು ಶ್ರೀತ್ರಿ ಯವರಿಗೆ ಧ.ವಾ.

  ಇಂತಿ
  ಭೂತ

 8. sritri says:

  ಕಾಳಣ್ಣಾ, ಮೊದಲೋ ಕೊನೆಗೋ ಅಂತೂ ಬಂತಲ್ಲ ಅದೇ ಸಮಾಧಾನ. ಎಷ್ಟೋ ಜನ ಅರ್ಹರಿಗೆ ಸಾಯುವ ತನಕ (ಸತ್ತ ಮೇಲೂ) ಪ್ರಶಸ್ತಿಗಳು ಸಿಗೋದಿಲ್ಲ. ಅದಕ್ಕಿಂತ ಇದು ವಾಸಿ ಅಲುವ್ರಾ? 🙂

 9. sritri says:

  ಹ್ವಾಯ್ ಭೂತಪ್ಪನವರೇ, ಹಾಡನ್ನು ಎಲ್ಲೂ ಹುಡುಕಬೇಡಿ, ಅಲ್ಲೇ ಇದೆ, ಕೇಳಿಕೊಂಡು ಹೋಗಿ. ಅಂದ ಹಾಗೆ ನಿಮ್ಮ ಭೂತ ಲೋಕದಲ್ಲಿ ಕನ್ನಡ ಹಾಡುಗಳನ್ನು ಯಾರಾದರೂ ಕೇಳ್ತಾರೆಯೇ? ಅಥವಾ ಅಲ್ಲೂ ಪರಭಾಷೆಗಳ ಹಾವಳಿಯೇ?

 10. ಹಂಸಲೇಖ ಅವರು ಪದಗಳ ಪ್ರಾಸವನ್ನ ಹುಡುಕೋವಾಗ ಹಾಗಾಗೋದುಂಟು ‘ನೆರೆ’ ‘ಸುರೆ’. ಅದು ಕೆಲವೊಮ್ಮೆ ಅತಿರೇಕಕ್ಕೆ ಹೋಗುತ್ತೆ ಅಂತಾನೂ ಅನ್ನಿಸುತ್ತೆ. ಬಹುಶ: ಈ ಹಾಡನ್ನ ಬರೆಯೋವಾಗ ಕೈಯಲ್ಲಿ ಸುರೆ ಇತ್ತೋ ಏನೋ? 😛

  ನಂಗೆ ಇದರಲ್ಲಿ ಇಷ್ಟವಾದ ಸಾಲು ಎಂದರೆ ‘ಹಾಡೆಂದರೆ…ಗುಯ್ ಗುಯ್ ಗುನುಗಮ್ಮಾ ನಿದಿರಾ ದೇವಿಯ ನಶೆಯಮ್ಮಾ’ ಹೌದು ಹಾಡಿಗೆ ಅದೊಂದು ರೀತಿಯ ಸನ್ಮೋಹಕ ವರವಿದೆ, ಕೆಲವೊಮ್ಮೆ ಹಾಡು ಕೇಳುತ್ತಿದ್ದರೆ ನಿದಿರೆಯ ಮಂಪರಿಗೆ ಜಾರೋದು ನಿಜ. ಮೊನ್ನೆ ಈಟಿವಿಯ ‘ಎದೆ ತುಂಬಿ ಹಾಡಿದೆನು’ ಕಾರ್ಯಕ್ರಮದಲ್ಲಿ ಈ ಹಾಡಿನ ಬಗ್ಗೆ ಎಸ್.ಪಿ.ಬಿ ಅವರು ಹೇಳಿದ್ದು ಇದನ್ನೇ ‘ಇಂಥಹ ಪದಗಳನ್ನ ಬಳಸುವುದರಲ್ಲಿ ಮತ್ತೆ ಅದಕ್ಕೆ ತಕ್ಕ ರಾಗ ಸಂಯೋಜನೆಯಲ್ಲಿ ಹಂಸ್ ಅವರದ್ದು ಎತ್ತಿದ ಕೈ’ ಅಂತ.

 11. sritri says:

  ಮೀರಾ, ಹಂಸ್ ಪ್ರಾಸ ಪ್ರಿಯರು ಎಂಬುದು ನಿಜ. ಆದರೆ ಕೈಯಲ್ಲಿ ಸುರೆ ಇದ್ದಿದ್ದರಿಂದ ಸುರೆ ಎಂದು ಬರೆದಿರಬಹುದು ಎಂಬ ನಿನ್ನ ಊಹೆ ಸ್ವಲ್ಪ ಅತಿ ಆನ್ನಿಸಿತು 🙂

  ಕೈಯಲ್ಲಿರೋದು, ಕಣ್ಮುಂದೆ ಕಾಣೋದನ್ನೆಲ್ಲಾ ಬರೆಯೋದಾದ್ರೆ, ಕವಿ ಕಲ್ಪನೆಗೇನು ಬೆಲೆ ಹಾಗಾದರೆ?

 12. mohd rafiq says:

  ಹಂಸದ ಹಾಡನ್ನು ಜೊತೆಗೆ ಅವರ ರಾಜ್ಯೊತ್ಸವದ ಚಿತ್ರವನ್ನೂ ಬ್ಲಾಗಿಸಿದ್ದಕ್ಕೆ ; ನನ್ನ ಸಾವಿರ ಸಲಾಮ್!!
  ಹಾಗೆಯೇ ಹಂಸಕ್ಕೆ ಇನ್ನೂ ಇಂತಹ ಸಾವಿರಾರು[ಲಕ್ಷಾರು] ಹಾಡುಗಳನ್ನು ಬರೆಯುವ ವಯಸ್ಸು ದೇವರು ದಯಪಾಲಿಸಲಿ.

  ನನ್ನ ಉಸಿರಲಿ ನಿನ್ನ ಹೆಸರಿದೆ
  ನಿನ್ನ ಹೆಸರಲೆ ನನ್ನ ಉಸಿರಿದೆ
  ನಿನ್ನ ಹೆಸರಲೆ ಉಸಿರು ಹೋಗಲಿ
  ಉಸಿರು ಉಸಿರಲಿ ಹೆಸರೆ ನಿಲ್ಲಲಿ…

  ಹಂಸಲೇಖ ಅವರ ಸಾಹಿತ್ಯ-ಸಂಗೀತ ಎರಡೂ ಕನ್ನಡ ಚಲನಚಿತ್ರ ರಂಗಕ್ಕೆ ಕನ್ನಡಮ್ಮನ ಆಶಿರ್ವಾದ ಇದ್ದ ಹಾಗೆ.

 13. sritri says:

  ರಫಿ ಭೈಯಾ, ನಿಮ್ದು ಕಿ ಕಾಮೆಂಟ್ “ಚಂದಕಿಂತ ಚಂದಾ” ಇದೆ 🙂

 14. ಹಂಸ್ ಅವರು ಕೈಯಲ್ಲಿ ಸುರೆ ಹಿಡಿದು ಹಾಡು ಬರೆದಿರಬಹುದು ಅನ್ನೋದ್ರಲ್ಲಿ ಅತೀ ಅಂತ ಏನಿದೆ. ಎಷ್ಟೋ ಕವಿಗಳು ಕೈಯಲ್ಲಿ ಮದ್ಯ, ಸಿಗರೇಟ್ ಇಲ್ಲದೆ ಸ್ಪೂರ್ತಿನೇ ಬರೋಲ್ಲ ಅಂತ ಬರೆದಿರೋದನ್ನ ಕೇಳಿದ್ದೀನಿ.

  ಇನ್ನು ಇವರು ಬರೆದಿರುವ ಚರಣದಲ್ಲಿ ಬರುವ ಸಾಲುಗಳ ಅರ್ಥ ಅಂತೂ ಈ ಮಂದಬುದ್ದಿಗೆ ಹೊಳೆಯಲ್ಲ:-?

 15. sritri says:

  @ಶಿವ್,

  ಹಂಸಲೇಖರಿಗೆ ಈ ವರ್ಷ ಬಂದಿರುವ ಪ್ರಶಸ್ತಿ ೩ ಎಂದು ಬರೆದಿದ್ದೆ. ಅದು ನಾಲ್ಕು!
  ೧. ಫಿಲ್ಮ್ ಫೇರ್
  ೨. ರಾಜ್ಯ ಚಲನಚಿತ್ರ ಪ್ರಶಸ್ತಿ
  ೩. ಕೆಂಪೇಗೌಡ ಪ್ರಶಸ್ತಿ
  ೪. ರಾಜ್ಯೋತ್ಸವ ಪ್ರಶಸ್ತಿ.

 16. GM says:

  waah!! haadendare… haadu idu!! bhesh hamsa!

 17. sritri says:

  ಮತ್ತೊಂದು ಪ್ರಶಸ್ತಿ –

  ಉದಯ ಟಿವಿಯ Sunfeast Udaya film awards , ಅತ್ಯುತ್ತಮ ಗೀತರಚನೆ – ಚಿತ್ರ:ನೆನಪಿರಲಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಚಿನ್ನಾರಿ ಮುತ್ತ – ರೆಕ್ಕೆ ಇದ್ದರೆ ಸಾಕೇ?ಚಿನ್ನಾರಿ ಮುತ್ತ – ರೆಕ್ಕೆ ಇದ್ದರೆ ಸಾಕೇ?

ಚಿತ್ರ – ಚಿನ್ನಾರಿ ಮುತ್ತ  (೧೯೯೩) ಸಾಹಿತ್ಯ – ಎಚ್.ಎಸ್.ವೆಂಕಟೇಶಮೂರ್ತಿ ಸಂಗೀತ – ಸಿ. ಅಶ್ವಥ್ ಗಾಯಕರು – ಬೇಬಿ ರೇಖಾ ಮತ್ತು ಸಂಗಡಿಗರು ಹಾಡು ಕೇಳಿ  ರೆಕ್ಕೆ ಇದ್ದರೆ ಸಾಕೇ? ಹಕ್ಕಿಗೆ ಬೇಕು ಬಾನು ಬಯಲಲಿ ತೇಲುತ ತಾನು ಮ್ಯಾಲೆ

ಪ್ರೀತ್ಸೋದ್ ತಪ್ಪಾ? – ಸೋನೆ ಸೋನೆಪ್ರೀತ್ಸೋದ್ ತಪ್ಪಾ? – ಸೋನೆ ಸೋನೆ

ಪ್ರೀತ್ಸೋದ್ ತಪ್ಪಾ – (೧೯೯೮)          ಸಾಹಿತ್ಯ :   ಹಂಸಲೇಖ ಸಂಗೀತ :   ಹಂಸಲೇಖ ಗಾಯಕರು : ಕೆ. ಜೆ. ಯೇಸುದಾಸ್, ಅನುರಾಧಾ ಶ್ರೀರಾಂ ಹಾಡು ಕೇಳಿ ಏನಿದು ಮಾಯೆ.. ಏನಿದು ಮಾಯೆ ಮನಸಿನ ಮುಗಿಲಲಿ ಮಾತಿನ ಮಳೆಯು ತುಂಬಿದೆ ಹೊರಗೆ ಬಾರದೆ

ಅನುಪಮ – ಒಲುಮೆ ಪೂಜೆಅನುಪಮ – ಒಲುಮೆ ಪೂಜೆ

ಚಿತ್ರ : ಅನುಪಮ (೧೯೮೧) ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಅಶ್ವಥ್-ವೈದಿ ಹಾಡು ಕೇಳಿ – ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ  ಕೊಳಲು – ಪ್ರವೀಣ್ ಗೋಡ್ಕಿಂಡಿ  ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ ರಾಗ ತಾನ ಪ್ರೇಮಗಾನ ಸಂಜೀವನಾ ಮಮತೆ ಮೀಟಿ ಮಿಲನ ಕಂಡೆ ನಿನ್ನ