ಏಳು ಸುತ್ತಿನ ಕೋಟೆ(೧೯೮೮)
ಸಾಹಿತ್ಯ:ರುದ್ರಮೂರ್ತಿ ಶಾಸ್ತ್ರಿ
ಸಂಗೀತ: ಎಲ್.ವೈದ್ಯನಾಥನ್
ಗಾಯಕ :ಎಸ್.ಪಿ.ಬಾಲಸುಬ್ರಹ್ಮಣ್ಯಂ
ಏನೋ ಮಾಡಲು ಹೋಗಿ ಏನು ಮಾಡಿದೆ ನೀನು
ನೀತಿ ಹೇಳುವ ನೀನೇ ನೀತಿಯನು ಮುರಿದೆ
ಬಾಯಿದ್ದರೂ ನೀ ಮೂಕನಾದೆ |ಪ||
ಮುಳ್ಳಲ್ಲಿ ನಡೆವುದಕೆ ಎಚ್ಚರಿಕೆ ಬೇಕು
ಜಗದೆಲ್ಲಾ ಕತ್ತಲೆಗೆ ನೀನಲ್ಲ ಬೆಳಕು
ಕೊಂದು ರೋಗದ ರೆಂಬೆ
ಕಡಿದೂ ಗೆಲ್ಲುವೆನೆಂದೆ
ಕೋಟಿ ಬೇರುಗಳಿಂದ ನರಳುತಿದೆ ಬದುಕು||೧||
ವಿಷದ ಬಳ್ಳಿಯ ಜೊತೆಗೆ ಹೂಗಿಡವ ಕಡಿದೆ
ಒಂದು ಕೋಪಕೆ ಎರಡು ಪಾಪಗಳ ಬೆಳೆದೆ
ಎಲ್ಲಾ ಬದಲಿಸ ಬಲ್ಲ
ವಿಧಿಯು ನೀನೇನಲ್ಲ
ಇದ್ದಂತೆ ಜಗವಿಹುದು ನೀನು ಬದಲಾದೆ||೨||
ಹೆತ್ತೊಡಲು ತುಡಿಯುತಿದೆ
ತಳಮಳಿಸಿ ನೊಂದು
ಅಕ್ಕರೆಯ ಸೋದರಿಗೆ ಕಣ್ಣೀರ ಬಿಂದು
ನಿನ್ನಿಂದ ಸುಖವಿಲ್ಲ
ನಿನ್ನೊಳಗೂ ಸುಖವಿಲ್ಲ
ಏಳು ಸುತ್ತಿನ ಕೋಟೆ…. ಸೆರೆಯಾದೆ ಇಂದು..
ಏಳು ಸುತ್ತಿನ ಕೋಟೆಯಲಿ ಸೆರೆಯಾದೆ…..||೩||
* * * * *
ರುದ್ರಮೂರ್ತಿ ಶಾಸ್ತ್ರಿ ಯವರ ಸಾಹಿತ್ಯ ಸೊಗಸಾಗಿದೆ.
ಬಾಲು, ಚೆನ್ನಾಗಿ ಹಾಡಿದ್ದಾರೆ.
ಆದ್ರೆ ಪುನಹ ಭೂತಕ್ಕೆ ಗೊಂದಲ.
ಕಡಿದೂ ಗೆಲ್ಲುವೆನೆಂಬೆ
ಕಡಿದು ಗೆಲ್ಲುವೆನೆಂದೆ ಆಗಬೇಕು!
ಇಂತಿ
ಭೂತ
ಭೂತಾತ್ಮವೇ, ಅದು ಎಸ್.ಪಿ.ಬಿ ಧ್ವನಿಯಲ್ಲಿ ಕಡಿದೂ, ಎಂದು ಕೇಳಿಸತ್ತೆ . ಇನ್ನೊಮ್ಮೆ ಕೇಳಿ ನೋಡಿ. ತಪ್ಪಿದ್ದರೆ ತಿಳಿಸಿ. ತಿದ್ದುತ್ತೇನೆ. ನನಗೆ “ಕಡಿದೂ “ಸರಿ ಅನ್ನಿಸಿತು.
ಅಯ್ಯೊ,
ಕಡಿದೂ ಸರಿ ಇದೆ,
ಆದ್ರೆ, ಗೆಲ್ಲುವೆನೆಂಬೆ ಅನ್ನೊದು ಸರಿ ಇಲ್ಲ.
ಗೆಲ್ಲುವೆನೆಂದೆ ಆಗ್ಬೇಕು 🙂
ಇಂತಿ
ಭೂತಪ್ಪ
ಏನೋಪ್ಪ ನಿಮ್ಮ ಜಗಳ…
ನಂಗಂತೂ ಏನೋ ಮಾಡಲು ಹೋಗಿ…
ಕಡಿದು ಅನ್ನೋದು….
ಕುಡಿದು ಅಂತಾನೇ ಕೇಳಿಸುತ್ತೆ 🙂
ಹೌದು, ಅದು ಎಂದೆ ಅಂತಾನೆ ಇರೋದು. ನಾನು “ರೆಂಬೆ”ಗೆ match ಮಾಡಕ್ಕೆ “ಎಂಬೆ” ಮಾಡಿದ್ದೆ. ಭೂತದ ಕೈಲಿ ಸಿಕ್ಕಿ ಬಿದ್ದೆ 🙂
ಅನ್ವೇಷಿಗಳೇ, ಬನ್ನಿ, ಬನ್ನಿ…. ಈ ಭೂತದ ಗೊಂದಲ ಪರಿಹಾರಕ್ಕೆ ನೀವೇ ಸರಿ 🙂
ನಾನು ದೂರವೇ ಉಳಿಯುತ್ತೇನೆ, ಏನೋ ಮಾಡಲೋ ಹೋಗಿ, ಭೂತಾನ್ವೇಷಿಗಳ ಕೈಗೆ ಸಿಕ್ಕು ಅನುಭವಿಸೋರು ಯಾರು?
‘ಸಂತಸ ಅರಳುವ ಸಮಯದಲ್ಲಿ…’ ಕಡಿದು-ಕುಡಿಯುವವರನ್ನು ಕಟ್ಟಿಕೊಂಡು ತಲೆಕೆಡಿಸಿಕೊಳ್ಳಲು ನನಗಂತೂ ಟೈಮಿಲ್ಲ 🙂
ಕಾಳು, ನಿಮ್ಮ ಸಂತಸ ಸಮಯ ನಿರಂತರವಾಗಿರಲಿ. 🙂
ಕಡಿದು,ಕುಡಿಯುವವರೆಲ್ಲ ಸದ್ಯಕ್ಕೆ c/o ಭೂತ.